ಶುಗರ್‌ ಬಂದಿದೆಯೇ : ಯಾವ ಆಹಾರ ತಿನ್ನಬೇಕು ಎನ್ನುವ ಚಿಂತೆಯೇ ಇಲ್ಲಿದೆ ತಕ್ಕ ಉತ್ತರ ….?

ತುಮಕೂರು :

      ಶುಗರ್‌ ಬಂದರೆ ಸಣಕಲು ಫಿಗರ್‌ ಥರ ಆಗ್ತಾರೆ ಅನ್ನೋ ಮಾತಿದೆ ಆದರೆ ಯಾಕೆ ಹಾಗೆ ಆಗ್ತಾರೆ ಗೊತ್ತಾ . ಅತ್ಯಂತ ಕಡಿಮೆ ಊಟ ಹಾಗೂ ಟೆನ್ಷನ್‌ ಮತ್ತು ಮಾತ್ರೆಗಳಿಂದ ಉಂಟಾಗುವ ಗ್ಯಾಸ್ಟ್ರಿಕ್‌ ಕಾರಣ ಹಸಿವಾಗದಿರುವಿಕೆ ಮುಂತಾದ ಕಾರಣಗಳಿವೆ .

    ಮಧುಮೇಹ ಇಂದು ಸರ್ವೇ ಸಾಮಾನ್ಯ. ಮಧುಮೇಹ ಬಂತು ಎಂದಾದಲ್ಲಿ ಬರೀ ಟಾಬ್ಲೆಟ್, ಇನ್ಸುಲಿನ್ ತೆಗೆದುಕೊಂಡರೆ ಸಾಕಾಗಲ್ಲ. ಇದಕ್ಕಾಗಿ ಸರಿಯಾದ ಡಯಟ್ ಮಾಡಲೇಬೇಕು. ಇಲ್ಲವಾದಲ್ಲಿ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಜಾಸ್ತಿಯಾಗಿ ವಿಷಮ ಸ್ಥಿತಿ ತಲುಪುತ್ತೆ.ವೈದ್ಯರ ಪ್ರಕಾರ ಸಕ್ಕರೆ ಖಾಯಿಲೆ ಉಳ್ಳವರು ಒಣಹಣ್ಣುಗಳನ್ನು ತಿನ್ನುವುದಕ್ಕಿಂತ ತಾಜಾ ಹಣ್ಣುಗಳನ್ನು ತಿನ್ನುವುದೊಳಿತು. ಡ್ರೈ ಫ್ರೂಟ್ಸ್ ಮಧುಮೇಹಿಗಳಿಗೆ ಅಷ್ಟು ಒಳ್ಳೆಯದಲ್ಲ ಎನ್ನುತ್ತಾರೆ ನ್ಯೂಟ್ರಿಶಿಯನಿಸ್ಟ್.

   ಉದಾಹರಣೆಗೆ ಒಂದು ಕಪ್ ದ್ರಾಕ್ಷಿಯಲ್ಲಿ 27 ಗ್ರಾಂ ಕಾರ್ಬೋಹೈಡ್ರೇಟ್ ಇದ್ದರೆ ಒಂದು ಕಪ್ ಒಣದ್ರಾಕ್ಷಿಯಲ್ಲಿ 115 ಗ್ರಾಂ ಕಾರ್ಬೋಹೈಡ್ರೇಟ್ ಇರುತ್ತೆ. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಸ್ಥಿಮಿತದಲ್ಲಿರಲು ಸಾಧ್ಯವಾಗೋದಿಲ್ಲ. ಮಧುಮೇಹಿಗಳು ಡ್ರೈ ಫ್ರೂಟ್ಸ್ ಗಳಿಗಿಂತ ಫ್ರೆಶ್ ಹಾಗೂ ಸೀಸನಲ್ ಹಣ್ಣುಗಳನ್ನು ತಿನ್ನುವುದೇ ಒಳಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap