ಬಹುಕೋಟಿ ಆಸ್ತಿ ಖರೀದಿ : ಅಚ್ಚರಿ ಮೂಡಿಸಿದ ಸುಹಾನ ಖಾನ್‌

ಮುಂಬೈ: 

    ಬಾಲಿವುಡ್‌ ನಟಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ‘ದಿ ಆರ್ಚೀಸ್’ ಚಿತ್ರದ ಮೂಲಕ ನಟಿಯಾಗಿ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಸುಹಾನಾ ಖಾನ್ ತಮ್ಮ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಕೋಟ್ಯಂತರ ರೂಪಾಯಿ ಆಸ್ತಿ ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ.

    ಸುಹಾನಾ ಖಾನ್ ಪ್ರಾಪರ್ಟಿ ಇತ್ತೀಚೆಗೆ ಮುಂಬೈನ ಪಕ್ಕದಲ್ಲಿರುವ ಅಲಿಬಾಗ್‌ನ ಹಳ್ಳಿಯೊಂದರಲ್ಲಿ ಭೂಮಿಯನ್ನು ಖರೀದಿಸಿದ್ದಾರೆ. ಇದರ ಬೆಲೆ 12.91 ಕೋಟಿ ರೂಪಾಯಿ. ಸುಹಾನಾ ಖಾನ್ ಕೋಟಿಗಟ್ಟಲೆ ಜಮೀನು ಖರೀದಿಸಿದ್ದಕ್ಕಿಂತ ಶಾರುಖ್ ಖಾನ್ ಮಗಳು ಕೃಷಿ ಭೂಮಿ ಖರೀದಿಸಿ ಕಾಗದದ ಮೇಲೆ ರೈತ ಎಂದು ಬಣ್ಣಿ ಸಿರುವುದು ಚರ್ಚೆಗೆ ಗ್ರಾಸವಾಗಿದೆ.
    ಈ ಮಾಹಿತಿಯ ವಹಿವಾಟುಗಳ ಬಗ್ಗೆ ಇಂಡೆಕ್ಸ್‌ಟ್ಯಾಪ್‌ ಡಾಟ್ ಕಾಮ್‌ ಹಂಚಿಕೊಂಡಿದೆ. ಅಂಜಲಿ, ರೇಖಾ ಮತ್ತು ಪ್ರಿಯಾ ಎಂಬ ಮೂವರು ಹೆಣ್ಣು ಮಕ್ಕಳಿಗೆ ಅವರ ಫೋಷಕರು ಈ ಕೃಷಿ ಭೂಮಿಯನ್ನು ಗಿಫ್ಟ್‌ ಆಗಿ ಕೊಟ್ಟಿದ್ದರಂತೆ. ಅದನ್ನು ಈಗ ಸುಹಾನಾ ಖರೀದಿಸಿದ್ದಾರೆ.

ಈಗ ಸುಹಾನಾ ಖಾನ್ ಕೃಷಿ ಭೂಮಿಯನ್ನು Deja Vu Farm Pvt Ltd ಹೆಸರಿನಲ್ಲಿ ನೋಂದಣಿ ಮಾಡಿದ್ದಾರೆ. ಇದಕ್ಕೆ ಶಾರುಖ್ ಅತ್ತೆ ಸವಿತಾ ಚಿಬ್ಬರ್ ಮತ್ತು ಹೆಂಡತಿ ತಂಗಿ ನಮಿತಾ ಚಿಬ್ಬರ್ ಡೈರೆಕ್ಟರ್ಸ್‌ ಆಗಿರಲಿದ್ದಾರೆ. ಅಲಿಬಾಗ್‌ ಟೌನ್‌ನಿಂದ 12 ನಿಮಿಷ ದೂರ ಪ್ರಯಾಣ ಮಾಡಿದರೆ ಸಿಗುವ ತಾಲ್ ಹಳ್ಳಿಯಲ್ಲಿ ಈ ಭೂಮಿ ಖರೀದಿಸಿರುವುದು. ಈ ಭೂಮಿ ಮತ್ತೊಂದು ವಿಶೇಷತೆ ಏನೆಂದರೆ ಸಮುದ್ರ ಮುಖ ಮಾಡಿದೆ, ದೊಡ್ಡ ಸ್ವಿಮಿಂಗ್ ಪೂಲ್ ಮತ್ತು ಹೆಲಿಪ್ಯಾಡ್ ಜಾಗ ಹೊಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap