ಕೊರಟಗೆರೆ:
ಸಾಲಬಾಧೆಯಿಂದ ಮನನೊಂದ ರೈತ ನೋರ್ವ ತಮ್ಮ ಜಮೀನಿನಲ್ಲಿನ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರಗ್ರಾಪಂ ವ್ಯಾಪ್ತಿಯ ಪಣ್ಣೇನಹಳ್ಳಿ ಗ್ರಾಮದ ಲೇ.ಚೆನ್ನಿಗರಾಮಯ್ಯನ ಮಗನಾದ ರೈತ ಅಂಜಿನಪ್ಪ(70) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸಾಲಬಾಧೆಯಿಂದ ಮನನೊಂದ ರೈತ ಯಾರು ಇಲ್ಲದ ವೇಳೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಅಂಜಿನಪ್ಪ ಬೈರೇನಹಳ್ಳಿ ಕೆನರಾ ಬ್ಯಾಂಕಿನಲ್ಲಿ 2 ಲಕ್ಷ 60ಸಾವಿರ ಮತ್ತು ಅಕ್ಕಿರಾಂಪುರದ ವಿಎಸ್‍ಎಸ್‍ಎನ್‍ನಲ್ಲಿ 25 ಸಾವಿರ ಸಾಲ ಮಾಡಿಕೊಂಡಿದ್ದಾರೆ. ಸಾಲ ತೀರಿಸಲು ಆಗದೇ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸೈ ಮುತ್ತುರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
