ಬೆಂಗಳೂರು:
ಶೀಲ ಶಂಕಿಸಿ ಪತಿ ಮಾಡುತ್ತಿದ್ದ ಜಗಳದಿಂದ ಬೇಸತ್ತ ಮಹಿಳೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೇವರಜೀವನ(ಡಿಜೆ)ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶ್ಯಾಂಪುರದಲ್ಲಿ ನಡೆದಿದೆ.
ಶ್ಯಾಂಪುರದ ಜಯಲಕ್ಷ್ಮಿ(37)ಎಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಗುರುತಿಸಲಾಗಿದೆ..ಜಯಲಕ್ಷ್ಮಿ ಕಳೆದ ಕೆಲ ವರ್ಷಗಳಿಂದ ಡಿಜೆ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. 10 ವರ್ಷಗಳ ಹಿಂದೆ ನಾಗರಾಜ್‍ನನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಆದರೆ ಗಂಡನ ಅನುಮಾನದಿಂದ ಪ್ರತಿದಿನ ಗಲಾಟೆ ನಡೆಯುತ್ತಿತ್ತು.
ಇದರಿಂದ ಬೇಸತ್ತು ಜಯಲಕ್ಷ್ಮಿ ಬೆಂಕಿ ಈಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಡಿಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







