ಹಗರಿಬೊಮ್ಮನಹಳ್ಳಿ:
ಪಟ್ಟಣದ ಜಗಜ್ಯೋತಿ ನಗರದ ನಿವಾಸಿಗಳಾದ, ಪುರಸಭೆಯ ಅಟೆಂಡರ್ ಪಕ್ಕೀರಪ್ಪ(30) ತನ್ನ ಪತ್ನಿಯನ್ನು ಕೊಡಲಿಯಿಂದ ಹೊಡೆದು ತಾನು ನೇಣಿಗೆ ಶರಣಾದ ಘಟನೆ ಸೋಮವಾರ ರಾತ್ರಿ ಜರುಗಿದೆ.
ಹಿನ್ನೆಲೆ: ಕೆಲದಿನಗಳಿಂದ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾದ ಆರೋಪಿಯ ಹೆಂಡತಿ ಆಶಾ ಹಬ್ಬದ ನಿಮ್ಮಿತ್ತ ತಾಲೂಕಿನ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ಕಲ್ಲಳ್ಳಿ ಗ್ರಾಮದ ಬೀಗರ ಮನೆಗೆ ತೆರಳಿದ್ದಳು. ಅಲ್ಲಿಗೆ ಹೋಗಿದ್ದ ಪಕ್ಕೀರಪ್ಪ ಮಧ್ಯರಾತ್ರಿ 12.30ರ ಸಮಯದಲ್ಲಿ ಇದ್ದಕ್ಕಿಂದತೆ ಕೊಡಲಿಯಿಂದ ಪತ್ನಿ ಆಶಾಳ ಕುತ್ತಿಗಿಗೆ ಬಲವಾಗಿ ಹೊಡೆದಿದ್ದಾನೆ. ನಂತರ ಕೊಡಲಿ ಸಮೇತನಾಗಿ ಪರಾರಿಯಾಗಿದ್ದು, ರಾತ್ರಿ 2ಗಂಟೆಯ ಸುಮಾರಿನಲ್ಲಿ ಕಲ್ಲಳ್ಳಿ ಮತ್ತು ಬೆಣಕಲ್ಲು ಅಡಿವೆಯ ಗಡಿಯಲ್ಲಿರುವ ಒಂದು ಹೊಲದ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಿಸಿಕೊಂಡ ವೃತ್ತ ನಿರೀಕ್ಷಕ ರಾಮಪ್ಪ ಸಾವಳಿಗಿ ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಆಶಾಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಕೂಡ್ಲಿಗಿಯ ಸಿಪಿಐ ನಹೀಂ ಅಹಮದ್ ತಿಳಿಸುತ್ತಾರೆ. ಈ ದಂಪತಿಗಳಿಗೆ 7 ಮತ್ತು 5ವರ್ಷದ ಇಬ್ಬರು ಪುತ್ರ ಪುತ್ರಿಯರನ್ನು ಹೊಂದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








