ಸೂಪರ್‌ ಮಾರ್ಕೆಟ್‌ನಲ್ಲಿ ಬುರ್ಖಾಧಾರಿ ಮಹಿಳೆಯ ಕರಾಮತ್ತು….!

ನವದೆಹಲಿ :

    ತಾನು ಕಣ್ಣು ಮುಚ್ಚಿ ಹಾಲು ಕುಡಿದರೆ ಈ ಯಾರಿಗೂ ಇದು ಗೊತ್ತಾಗಲ್ಲ ಎಂದು ಬೆಕ್ಕು ಅಂದುಕೊಳ್ಳುವಂತೆ ಖತರ್ನಾಕ್‌ ಕಳ್ಳರು ಕೂಡಾ ತಾವು ಏನೇ ಕದ್ದರು ಯಾರಿಗೂ ಒಂದು ಪ್ರೂಫ್‌ ಕೂಡಾ ಸಿಕ್ಕಲ್ಲ ಎಂದು ಭಾವಿಸುತ್ತಾರೆ. ಇದೇ ಭ್ರಮೆಯಲ್ಲಿ ಇಲ್ಲೊಬ್ಬಳು ಬುರ್ಖಾದಾರಿ ಮಹಿಳೆ ತಾನು ಏನೇ ಕದ್ದರೂ ಯಾರಿಗೂ ಗೊತ್ತಾಗಲ್ಲ ಎನ್ನುತ್ತಾ ಸೂಪರ್‌ ಮಾರ್ಕೆಟ್‌ನಲ್ಲಿದ್ದ ಹಾಲಿನ ಪ್ಯಾಕೆಟ್‌ ಒಂದನ್ನು ಬುರ್ಖಾದೊಳಗೆ ಬಚ್ಚಿಟ್ಟು ಎಸ್ಕೇಪ್‌ ಆಗಿದ್ದಾಳೆ. ಈಕೆಯ ಈ ಕರಾಮತ್ತು ಅಂಗಡಿಯಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

  ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಬುರ್ಖಾಧಾರಿ ಮಹಿಳೆಯ ಕರಾಮತ್ತನ್ನು ಕಾಣಬಹುದು. ಬುರ್ಖಾ ಹಾಗೂ ಮುಖಕ್ಕೆ ಮಾಸ್ಕ್‌ ಹಾಕಿ ಸೂಪರ್‌ ಮಾರ್ಕೆಟ್‌ಗೆ ನುಗ್ಗಿದಂತಹ ಮಹಿಳೆಯೊಬ್ಬಳು ಯಾರು ಇಲ್ಲದ್ದನ್ನು ಗಮನಿಸಿ ಅಲ್ಲೇ ಮೆಲ್ಲಗೆ ಕೂತು ಎರಡು ಫಾರ್ಮುಲ ಮಿಲ್ಕ್‌ ಪ್ಯಾಕೆಟ್‌ ಅನ್ನು ತನ್ನ ಬುರ್ಖಾದೊಳಗೆ ಬಚ್ಚಿಟ್ಟು ಏನೂ ನಡೆದೇ ಇಲ್ಲ ಎನ್ನುವಂತೆ ನಾಟಕವಾಡುತ್ತಾ ಅಲ್ಲಿಂದ ಎಸ್ಕೇಪ್‌ ಆಗಿದ್ದಾಳೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
  ನವೆಂಬರ್‌ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 33 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಎಂತಹ ಖತರ್ನಾಕ್‌ ಮಹಿಳೆ ಇವಳುʼ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಲ್ಲ ಅದು ಹೇಗೆ ಪೊಟ್ಟಣವನ್ನು ಬುರ್ಖಾದೊಳಗೆ ಬುಚ್ಚಿಟ್ಟು ಸಲೀಸಾಗಿ ನಡೆಯಲು ಸಾಧ್ಯʼ ಎಂದು ಕೇಳಿದ್ದಾರೆ.

Recent Articles

spot_img

Related Stories

Share via
Copy link