ಬುಲ್ಡೋಜರ್‌ ಕ್ರಮ: ಯುಪಿ ಸರ್ಕಾರಕ್ಕೆ ‘ಸುಪ್ರೀಂ’ ತರಾಟೆ

ನವದೆಹಲಿ:

   ಉತ್ತರಪ್ರದೇಶದ ಅಧಿಕಾರಿಗಳ ‘ಉನ್ನತ’ ಧೋರಣೆಯನ್ನು ತೀವ್ರವಾಗಿ ಟೀಕಿಸಿದ ಸುಪ್ರೀಂ ಕೋರ್ಟ್, ರಸ್ತೆ ವಿಸ್ತರಣೆಗಾಗಿ 2019ರಲ್ಲಿ ಮನೆಯನ್ನು ನೆಲಸಮ ಮಾಡಿದ ವ್ಯಕ್ತಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ನಿರ್ದೇಶನ ನೀಡಿದೆ.

   ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ನಡೆದ ಅಕ್ರಮ ಧ್ವಂಸಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಯುಪಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ರಸ್ತೆ ವಿಸ್ತರಣೆ ಯೋಜನೆಗಾಗಿ 2019ರಲ್ಲಿ ನಡೆದ ಮನೆ ನೆಲಸಮಗೊಳಿಸಿದ ವಿಷಯದ ವಿಚಾರಣೆ ನಡೆಸಿದ ಪೀಠ, ನೀವು ಬುಲ್ಡೋಜರ್‌ ತಂದು ರಾತ್ರೋರಾತ್ರಿ ಮನೆ ಕೆಡವಬಹುದೇ ಎಂದು ಟೀಕಿಸಿದೆ.

Recent Articles

spot_img

Related Stories

Share via
Copy link