ಕಲಬುರಗಿ:
ಹೈದರಾಬಾದ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಜಿಲ್ಲೆಯ ಮೂಲದ ಐವರ ಮೃತದೇಹಗಳು ಸ್ವಗ್ರಾಮಕ್ಕೆ ತಲುಪಿವೆ. ಸೇಡಂ ತಾಲೂಕಿನ ರಂಜೋಳ ಗ್ರಾಮದ ಒಂದೇ ಕುಟುಂಬದ ನರಸಿಂಹ (60), ಪತ್ನಿ ವೆಂಕಟಮ್ಮ (55), ಮಗ ಅನಿಲ್ (32), ಮಗಳು ಕವಿತಾ (24) ಹಾಗೂ ಮೊಮ್ಮಗ ಅಪ್ಪು (2) ಹೈದರಾಬಾದ್‌ನ ಮಿಯಾಪುರದಲ್ಲಿ ಮೃತಪಟ್ಟಿದ್ದರು.
ಮೃತರೆಲ್ಲರೂ ಸೇಡಂ ತಾಲೂಕಿನ ರಂಜೋಳ ಗ್ರಾಮದವರು. ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹೈದರಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೃತರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ನಿರ್ಧಾರ ಮಾಡಿದ್ದಾರೆ. ಗ್ರಾಮಸ್ಥರೇ ದುಡ್ಡು ಹಾಕಿ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ.
ಇನ್ನು ಪ್ರಕರಣದಲ್ಲಿ ಸೂಕ್ತ ತನಿಖೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ನಿರ್ಗತಿಕ ಕುಟುಂಬ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೃತ ಲಕ್ಷ್ಮಯ್ಯ ಅವರ ಕುಟುಂಬವು ಕೆಲವು ಸಮಯದಿಂದ ಹೈದರಾಬಾದ್‌ನಲ್ಲಿ ವಾಸಿಸುತ್ತಿತ್ತು. ನರಸಿಂಹ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ನರಸಿಂಹ, ಅವರ ಪತ್ನಿ ವೆಂಕಟಮ್ಮ ಅವರ ಎರಡನೇ ಮಗಳು ಮತ್ತು ಅಳಿಯ ತಮ್ಮ ಮಗುವಿನೊಂದಿಗೆ ಮಕ್ತಾ ಮಹಬೂಬ್‌ಪೇಟೆಯಲ್ಲಿ ವಾಸಿಸುತ್ತಿದ್ದರು. ನರಸಿಂಹ ಸೇರಿ ಇಡೀ ಕುಟುಂಬ ಕೂಲಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿತ್ತು. ಆದರೆ, ಅನುಮಾನಾಸ್ಪದ ರೀತಿಯಲ್ಲಿ ಗುರುವಾರ ಐವರ ಮೃತದೇಹಗಳು ಪತ್ತೆಯಾಗಿದ್ದವು. ಈ ಬಗ್ಗೆ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
