ಹಾಸನ
ಹಾಸನ ಟಿಕೆಟ್ ಜಗಳ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಈಗ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚನೆ ಮೇರೆಗೆ ಸ್ವರೂಪ್ ಪ್ರಚಾರ ಆರಂಭಿಸಿದ್ದು, ಮೂರನೇ ಅಭ್ಯರ್ಥಿಯೂ ಸಾಮಾನ್ಯ ಕಾರ್ಯಕರ್ತ ಎಂಬ ರೇವಣ್ಣ ಅಸ್ತ್ರಕ್ಕೆ ತಿರುಗೇಟು ನೀಡಿದ್ದಾರೆ.
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ಗೊಂದಲದ ಗೂಡಾಗಿದೆ. ಮೂರನೇ ಅಭ್ಯರ್ಥಿ ಕೆ.ಎಂ.ರಾಜೇಗೌಡ ಪ್ರವೇಶದ ಬಳಿಕವೂ ಎಚ್.ಪಿ.ಸ್ವರೂಪ್ ಧೃತಿಗೆಡದೆ ಗುರುವಾರ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ. ನಗರದ ಎಂ.ಜಿ. ರಸ್ತೆಯಲ್ಲಿರುವ ರಾಘವೇಂದ್ರ ಮಠದಲ್ಲಿ ಪೂಜೆ ಸಲ್ಲಿಸಿ, ನೂರಾರು ಕಾರ್ಯಕರ್ತರ ಜೊತೆಯಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಕೆ.ಎಂ.ರಾಜೇಗೌಡ ಕೂಡಾ ಸಾಮಾನ್ಯ ಕಾರ್ಯಕರ್ತ ಎನ್ನುವ ಅಜೆಂಡಾದ ಮೇರೆಗೆ ಮತ್ತೊಂದು ದಾಳ ಉರುಳಿಸಿದ್ದ ರೇವಣ್ಣ ಅಸ್ತ್ರಕ್ಕೆ, ಸ್ವರೂಪ್‌ರಿಂದ ಪ್ರಚಾರ ಮಾಡಿಸುವ ಮೂಲಕ ಪ್ರತ್ಯಾಸ್ತ್ರ ಪ್ರಯೋಗ ಮಾಡಿದ್ದಾರೆ. ರೇವಣ್ಣ ಕುಟುಂಬ ರಾಜೇಗೌಡ ಹೆಸರು ತೇಲಿ ಬಿಡುತ್ತಲೇ ಎಚ್ಚೆತ್ತಿರುವ ಕುಮಾರಸ್ವಾಮಿ, ಮತ್ತೆ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗದಂತೆ ಸ್ವರೂಪ್‌ಗೆ ಸಕ್ರಿಯಆಗಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ