ನಾಯಕನಹಟ್ಟಿ.
ಲೇಖಕರು :ಸೈಯದ್ ಅನ್ವರ್
ಇಸ್ಲಾಮಿನ ೫ ಆರಾಧನೆಗಳಲ್ಲಿ ಒಂದಾದ ಉಪವಾಸವು ಈ ರಂಜಾನ್ ತಿಂಗಳ ೩೦ ದಿನಗಳಲ್ಲಿ ಮುಸ್ಲಿಮರು ಕಡ್ಡಾಯವಾಗಿ ಆಚರಿಸುತ್ತಾರೆ.
ರಂಜಾನ್ ತಿಂಗಳು ಮುಸ್ಲಿಂರಿಗೆ ವರ್ಷದ ಅತ್ಯಂತ ಪವಿತ್ರವಾದ ಹಬ್ಬವಾಗಿರುತ್ತದೆ. ಮುಸ್ಲಿಮರು ಕುರಾನ್‌ನ್ನು ಓದುತ್ತಾರೆ ಮತ್ತು ಸ್ಮರಿಸುತ್ತಾರೆ. ಸೃಷ್ಠಿಕರ್ತ ದೇವರಿಗೆ ಹತ್ತಿರವಾಗಲು ಮತ್ತು ಕಡಿಮೆ ಅದೃಷ್ಠವಂತರಿಗೆ ಸ್ವಯಂ ನಿಯಂತ್ರಣ ಕೃತಜ್ಞತೆ ಮತ್ತು ಕರುಣೆಯನ್ನು ಬೆಳೆಸುವ ಸಾಧನವಾಗಿ ಸೂರ್ಯನ ಬೆಳಕಿನಲ್ಲಿ ಆಹಾರ ಮತ್ತು ಆಹಾರ ಮತ್ತು ನೀರನ್ನು ಸೇವಿಸದೇ ಉಪವಾಸ ಮಾಡುತ್ತಾರೆ. ಬಿಡುವಿನ ವೆಳೆಯಲ್ಲಿ ಈ ತಿಂಗಳ ಸಮಯದಲ್ಲಿ ಮುಸ್ಲಿಮರು ಕುರಾನ್ ಓದಲು ಮತ್ತು ವಿಶೇಷ ಪ್ರಾರ್ಥನೆ ಮಾಡಲು ಹೆಚ್ಚು ಸಮಯವನ್ನು ಮಸೀದಿಯಲ್ಲಿ ಕಳೆಯುತ್ತಾರೆ.
ಗರ್ಭಿಣಿಯರು ಅಥವಾ ಹಾಲುಣಿಸುವ ಮಹಿಳೆಯರು, ರೋಗಿಗಳು ಮತ್ತು ವೃದ್ಧರು ಮಕ್ಕಳು ಉಪವಾಸ ಮಾಡಲು ಸಾಧ್ಯವಾಗದವರು ಉಪವಾಸದಿಂದ ವಿನಾಯಿತಿ ಪಡೆಯುತ್ತಾರೆ. ಮುಸ್ಲಿಮರು ಮುಂಜಾನೆಯಿAದ ಸೂರ್ಯಸ್ಥದವರೆಗೆ ಉಪವಾಸ ಮಾಡುತ್ತಾರೆ. ಪ್ರಪಂಚದಾದ್ಯಂತ ಮುಸ್ಲಿಂರಿಗೆ ರಂಜಾನ್ ಹಬ್ಬ ಉಪವಾಸ ಆಚರಿಸುವ ಪವಿತ್ರ ತಿಂಗಳು ರಂಜಾನ್ ತಿಂಗಳ ಕೊನೆಯಲ್ಲಿ ಆಚರಿಸಲಾಗುತ್ತದೆ. ತಿಂಗಳಾದ್ಯಂತ ಬಡವರಿಗೆ ದಾನ ನೀಡುತ್ತಾರೆ. ನಮಾಜ್ ಓದುವ ಮೊದಲು ಈ ಪದ್ಧತಿಯನ್ನು ಬಲಪಡಿಸಲಾಗುತ್ತದೆ. ರಂಜಾನ್ ಹಬ್ಬವು ಮುಸ್ಲಿಮರಿಗೆ ಬದುಕಿನ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ. ದೇಹವನ್ನು ಅಸಿವಿಗೆ ಒಳಪಡಿಸಿ ಗೆಲ್ಲುವುದು ಇದರಿಂದ ಹಸಿವಿಗೆ ಒಳಗಾಗುವ ಬಡವರ ಸಂಕಟವನ್ನು ಅರ್ಥಮಾಡಿಕೊಳ್ಳುವುದು ಉಪವಾಸ ಕೈಗೊಳ್ಳುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ.
ಇಸ್ಲಾಮಿನ ೫ ಆರಾಧನೆಗಳಲ್ಲಿ ಒಂದಾದ ಉಪವಾಸವು ಈ ರಂಜಾನ್ ತಿಂಗಳ ೩೦ ದಿನಗಳಲ್ಲಿ ಮುಸ್ಲಿಮರು ಕಡ್ಡಾಯವಾಗಿ ಆಚರಿಸುತ್ತಾರೆ. ಉಪವಾಸದಿಂದ ಮನುಷ್ಯನಿಗೆ ಬಹಳಷ್ಟು ಅನುಕೂಲಗಳಿವೆ ಭೂಮಿಯ ಮೇಲೆ ಇರುವಾಗ ಉಪವಾಸವಿರುವುದರಿಂದ ಯಾವುದೇ ರೀತಿಯ ದೊಡ್ಡ ಖಾಯಿಲೆಗಳು ಬಾಧಿಸುವುದಿಲ್ಲ. ಹಾಗೂ ಮನುಷ್ಯ ಸತ್ತ ನಂತರ ತನ್ನ ಮರಣದ ಜೀವನದ ನಂತರ ಶುರುವಾಗುವ ಜೀವನದಲ್ಲಿ ಉಪವಾಸ ಆಚರಿಸಿದ್ದರೆ ಆ ವ್ಯಕ್ತಿಗೆ ಅಲ್ಲಾಹುವಿನ ಕಡೆಯಿಂದ ಶಾಂತಿಯ ಜೀವನವನ್ನು ಪಡೆದುಕೊಳ್ಳುತ್ತಾನೆ. ಪ್ರತಿಯೊಬ್ಬ ವ್ಯಕ್ತಿ ವರ್ಷವಿಡೀ ದುಡಿದು ಗಳಿಸಿದ ಸ್ವತ್ತು, ಸಂಪತ್ತಿನಲ್ಲಿ ಶೇಕಡಾ ೨.೫%ರಷ್ಟು ಹಣವನ್ನು ಬಡವರಿಗೆ, ಸಾಲದಲ್ಲಿ ಮುಳಿಗಿದವರಿಗೆ, ಅಸಹಾಯಕರಿಗೆ ದಾನ ಮಾಡುತ್ತಾರೆ.
ಬಡವರು ಶ್ರೀಮಂತರು ಎನ್ನುವ ಬೇಧ-ಬಾವ ಇರುವುದಿಲ್ಲ. ಮನುಷ್ಯ ತನ್ನ ದೇಹವನ್ನು ದಂಡಿಸಬೇಕಾಗುತ್ತದೆ. ಮುಸ್ಲಿಂ ಸಮುದಾಯದವರಿಗೆ ರಂಜಾನ್ ತಿಂಗಳು ಒಂದು ರೀತಿಯಲ್ಲಿ ತರಬೇತಿಯ ತಿಂಗಳು ಆಗಿರುತ್ತದೆ. ಉಪವಾಸ ಮುಂಜಾನೆಯಿಂದ ಸೂರ್ಯಸ್ಥತವರೆಗೆ ಒಂದು ಗುಟುಕು ನೀರು ಕುಡಿಯುವ ಅವಕಾಶವಿರುವುದಿಲ್ಲ. ಉಪವಾಸ ಮಾಡುವವರು ಕೆಟ್ಟ ಕೆಲಸಗಳಿಂದ ದೂರವಿರಬೇಕು ಮತ್ತು ಒಳ್ಳೆಯ ಕೆಲಸಗಳನ್ನು ಹೆಚ್ಚಿಸಬೇಕೆಂದು ನಿರೀಕ್ಷಿಸಲಾಗಿದೆ. ಮುಸ್ಲಿಮರು ಸಾಮಾನ್ಯವಾಗಿ ಮಸೀದಿಗಳಿಗೆ ಪ್ರಾರ್ಥನೆಗಾಗಿ ಬರುತ್ತಾರೆ. ಮತ್ತು ಧಾರ್ಮಿಕ ಚಿಂತನೆ, ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಪಠಣಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆ. ರಂಜಾನ್ ದಾನಕ್ಕಾಗಿ ಒಂದು ತಿಂಗಳು ಮುಸ್ಲಿಮರು ತಮ್ಮ ಆಧಾಯದ ಒಂದು ಭಾಗವನ್ನು ಸುತ್ತಮುತ್ತಲಿನ ಬಡವರಿಗೆ ನೀಡಬೇಕು. ಉಪವಾಸದ ಸಮಯದಲ್ಲಿ ಅವರು ಪಾಪ ಚಟುವಟಿಕೆಗಳು ಸಂಗಾತಿಯೊಂದಿಗಿನ ದೈಹಿಕ ಸಂಪರ್ಕ ತ್ಯಜಿಸುತ್ತಾರೆ.
ರಂಜಾನ್ ತಿಂಗಳು ಪ್ರಮಾಣಿಕತೆ ಸ್ವಯಂ ಶಿಸ್ತು ಮತ್ತು ಆಧ್ತಾತ್ಮಿಕತೆಯ ಅನಾವರಣವನ್ನು ತೋರಿಸುತ್ತದೆ. ಈ ಹಬ್ಬವು ಪ್ರತಿಯೊಬ್ಬ ಮುಸ್ಲಿಮರನ್ನು ಸ್ವಂತೋಷದ ತೀರ್ಪಿನ ದಿನದತ್ತ ಕೊಂಡೊಯ್ಯುತ್ತದೆ. ರಂಜಾನ್ ಹಬ್ಬದ ದಿನದಂದು ಬೆಳಿಗ್ಗೆ ೯ಗಂಟೆಯ ಸುಮಾರಿಗೆ ಊರಿನ ಎಲ್ಲಾ ಮುಸ್ಲಿಂ ಭಾಂದವರು ಒಂದು ಮಸೀದಿಯಿಂದ ಸೇರಿ ಒಟ್ಟಾಗಿ ಅಲ್ಲಾಹುವಿನ ಪವಿತ್ರತೆಯನ್ನು ಜೋರುದ್ವನಿಯಲ್ಲಿ ಕೂಗುತ್ತಾ ಈಗ್ದಾ ಮೈದಾನಕ್ಕೆ ತಲುಪುತ್ತಾರೆ. ನಂತರ ಎಲ್ಲರೂ ಸೇರಿ ಹಬ್ಬದ ಖುಷಿಯ ಪ್ರಯುಕ್ತವಾದ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಹಾಗೂ ಒಬ್ಬರಿಗೆ ಒಬ್ಬರು ಶುಭಾಶಯಗಳನ್ನು ಕೋರುತ್ತಾರೆ.
ಈ ಸಂದರ್ಭದಲ್ಲಿ ಧಾರ್ಮಿಕ ಗುರುಗಳು ಪ್ರವಚನವನ್ನು ನೀಡುತ್ತಾ ಪ್ರಪಂಚಕ್ಕೆ ಶಾಂತಿಯ ಸಂದೇಶವನ್ನು ನೀಡುತ್ತಾರೆ ಮತ್ತು ಪ್ರಪಂಚದ ಎಲ್ಲಾ ಮಾನವನ ಹೇಳಿಗೆಗಾಗಿ ಪ್ರಾರ್ಥನೆ ನಡೆಸುತ್ತಾರೆ. ನಂತರ ಈದ್ಗಾ ಮೈದಾನದಿಂದ ಹಿಂತಿರುಗಿ ತಮ್ಮ-ತಮ್ಮ ಮನೆಗಳಿಗೆ ಬಂದು ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರವನ್ನು ನೀಡುವ ಮೂಲಕ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ದೇವರನ್ನು ಮೆಚ್ಚಿಸಲು ಅನುಭವ, ಹಸಿವು, ಬಾಯಾರಿಕೆಯೆಂದರೆ ಏನೆಂದು ತಿಳಿಯುವುದು ಎಲ್ಲವನ್ನೂ ಮುಗಿಸಿದ ಸಂತೋಷದಿAದ ಹಬ್ಬವನ್ನು ಆಚರಿಸಲಾಗುತ್ತದೆ.








