ಗೂಗಲ್‌ ಮ್ಯಾಪ್‌ ನಂಬಿ ಹೊರಟ ವಿದೇಶಿ ಪ್ರವಾಸಿಗರಿಗೆ ಆಗಿದ್ದೇನು ಗೊತ್ತಾ…..?

ಲಖನೌ: 

    ಗೂಗಲ್‌ ಮ್ಯಾಪ್‌ ಇಲ್ಲದೆ ಎಲ್ಲಿಯೂ ತಲುಪಲು ಸಾಧ್ಯವಾಗುವುದಿಲ್ಲ ಎಂಬ ಪರಿಸ್ಥಿತಿ ಇದೆ . ಆದರೆ ಕೆಲವೊಮ್ಮೆ ಅದೇ ಗೂಗಲ್‌ ಮ್ಯಾಪ್‌ ತಪ್ಪಾಗಿ ತಮ್ಮನ್ನು ದಾರಿ ತಪ್ಪಿಸಿದ ಉದಾಹರಣೆಗಳೂ ಇವೇ. ಸದ್ಯ ಇಲ್ಲಿಯೂ ಕೂಡ ಅದೇ ರೀತಿ ಆಗಿದ್ದು, ಮ್ಯಾಪ್‌ ನಂಬಿ ಹೊರಟಿದ್ದ ಇಬ್ಬರು ಫಜೀತಿಗೆ ಸಿಲುಕಿದ್ದ ಘಟನೆ ನಡೆದಿದೆ. ದೆಹಲಿಯಿಂದ ಕಠ್ಮಂಡುವಿಗೆ ಸೈಕ್ಲಿಂಗ್ ಮಾಡುತ್ತಿದ್ದ ಇಬ್ಬರು ಫ್ರೆಂಚ್ ಪ್ರವಾಸಿಗರು ದಾರಿ ತಪ್ಪಿ ಚುರೈಲಿ ಅಣೆಕಟ್ಟಿನ ಬಳಿ ತಲುಪಿದ್ದಾರೆ. 

   ರಾತ್ರಿ ಸೈಕ್ಲಿಂಗ್ ಮಾಡುತ್ತಿದ್ದ ಇವರಿಬ್ಬರನ್ನು ಕೆಲವು ಗ್ರಾಮಸ್ಥರು ಗಮನಿಸಿ ಚುರೈಲಿ ಪೊಲೀಸ್ ಹೊರ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಅವರಿಗೆ ರಾತ್ರಿ ಗ್ರಾಮದ ಪ್ರಧಾನ್ ಅವರ ಮನೆಯಲ್ಲಿ ತಂಗುವ ವ್ಯವಸ್ಥೆಯನ್ನು ಮಾಡಲಾಗಿದೆ. ಫ್ರೆಂಚ್ ಪ್ರಜೆಗಳಾದ ಬ್ರಿಯಾನ್ ಜಾಕ್ವೆಸ್ ಗಿಲ್ಬರ್ಟ್ ಮತ್ತು ಸೆಬಾಸ್ಟಿಯನ್ ಫ್ರಾಂಕೋಯಿಸ್ ಗೇಬ್ರಿಯಲ್ ಅವರು ಜನವರಿ 7 ರಂದು ಫ್ರಾನ್ಸ್‌ನಿಂದ ದೆಹಲಿಗೆ ವಿಮಾನದ ಮೂಲಕ ಬಂದಿದ್ದರು. ಅವರು ಪಿಲಿಭಿತ್‌ನಿಂದ ತನಕ್‌ಪುರ್ ಮೂಲಕ ನೇಪಾಳದ ಕಠ್ಮಂಡುವಿಗೆ ಹೋಗಬೇಕಾಗಿತ್ತು. ಅವರು ಗೂಗಲ್‌ ಮ್ಯಾಪ್‌ನ ಸಹಾಯವನ್ನು ತೆಗೆದುಕೊಂಡಿದ್ದರು. ಆದರೆ ಅದು ಬರೇಲಿಯ ಬಹೇರಿ ಮೂಲಕ ಶಾರ್ಟ್‌ಕಟ್ ಅನ್ನು ತೋರಿಸಿತು, ಇದರಿಂದಾಗಿ ಅವರು ದಾರಿ ತಪ್ಪಿ ಚುರೈಲಿ ಅಣೆಕಟ್ಟನ್ನು ತಲುಪಿದರು.

   ಗುರುವಾರ ರಾತ್ರಿ 11 ಗಂಟೆಗೆ ವಿದೇಶಿಗರು ನಿರ್ಜನ ರಸ್ತೆಯಲ್ಲಿ ಸೈಕಲ್‌ನಲ್ಲಿ ತಿರುಗಾಡುತ್ತಿರುವುದನ್ನು ಗ್ರಾಮಸ್ಥರು ನೋಡಿದಾಗ ಅವರನ್ನು ವಿಚಾರಿಸಿದ್ದಾರೆ. ಆದರೆ ಅವರಿಗೆ ಭಾಷೆ ಅರ್ಥವಾಗಿಲ್ಲ. ನಂತರ ಗ್ರಾಮಸ್ಥರು ಪೊಲೀಸರನ್ನು ಕರೆದಿದ್ದಾರೆ. ಹಿರಿಯ ಪೊಲೀಸ್ ಅಧೀಕ್ಷಕ ಅನುರಾಗ್ ಆರ್ಯ ಅವರಿಗೆ ವಿಷಯ ತಿಳಿದಾಗ, ಅವರು ಪ್ರವಾಸಿಗರನ್ನು ಮಾತನಾಡಿಸಿ ಅವರಿಗೆ ಸೂಕ್ತ ಸೌಲಭ್ಯ ಕಲ್ಪಿಸಿ ಮರುದಿನ ಅಲ್ಲಿಂದ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಕಳೆದ ವರ್ಷ ಬರೇಲಿಯಲ್ಲಿ ಗೂಗಲ್‌ ಮ್ಯಾಪ್‌ ನಂಬಿ ಬಂದ ಯುವಕರು ಪ್ರಾಣ ಬಿಟ್ಟಿದ್ದರು. ರಾಮಗಂಗಾ ನದಿಗೆ ಸೇತುವೆಯ ಕಾಮಗಾರಿ ಅಪೂರ್ಣವಾಗಿದ್ದರೂ ಯುವಕರು ಗೂಗಲ್‌ ನಕ್ಷೆ ನಂಬಿ ಕಾರು ಓಡಿಸಿದ್ದರು. ಅಪೂರ್ಣವಾದ ಸೇತುವೆ ಮೇಲಿಂದ ಬಿದ್ದು ಪ್ರಾಣ ಬಿಟ್ಟಿದ್ದರು.

Recent Articles

spot_img

Related Stories

Share via
Copy link