ಕೇಂದ್ರ ದ ಮಹತ್ವದ ಪ್ರಸ್ತಾಪಗಳ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳು ನಾಡು

ಚೆನ್ನೈ: 

    ಕೇಂದ್ರದ ಎನ್ ಡಿಎ ಸರ್ಕಾರ ದ ‘ಒಂದು ರಾಷ್ಟ್ರ ಒಂದು ಚುನಾವಣೆ’, ಡಿಲಿಮಿಟೇಶನ್ ವಿರುದ್ಧ ಬುಧವಾರ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗಿಯಿತು ಮತ್ತು ಈ ಎರಡು ವಿಷಯಗಳ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ.

   ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್   ಬುಧವಾರ ತಮಿಳುನಾಡು ವಿಧಾನಸಭೆ  ಯಲ್ಲಿ ಎರಡು ನಿರ್ಣಯಗಳನ್ನು ಮಂಡಿಸಿದ್ದು, ಒಂದು ‘ಒಂದು ರಾಷ್ಟ್ರ, ಒಂದು ಚುನಾವಣೆ’ ನೀತಿಯ ವಿರುದ್ಧ ಮತ್ತು ಎರಡನೆಯದು ಹೊಸ ಜನಗಣತಿಯ ಆಧಾರದ ಮೇಲೆ ಡಿಲಿಮಿಟೇಶನ್ ವಿರುದ್ಧ ನಿರ್ಣಯ ಮಂಡಿಸಿದ್ದಾರೆ. 

   ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬುದು ಭಾರತ ಸರ್ಕಾರದ ಪ್ರಸ್ತಾವನೆಯಾಗಿದ್ದು, ಲೋಕಸಭೆ  ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಗುರಿ ಹೊಂದಿದೆ. ಪ್ರಸ್ತುತ ಪ್ರಸ್ತಾವನೆಯು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್  ನೇತೃತ್ವದ ಸಮಿತಿಯ ಪರಿಶೀಲನೆಯಲ್ಲಿದೆ.

    ಇದೇ ವಿಚಾರವಾಗಿ ಇಂದು ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ  ಸ್ಟಾಲಿನ್, “ಒಂದು ರಾಷ್ಟ್ರ, ಒಂದು ಚುನಾವಣಾ ನೀತಿಯನ್ನು ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಜಾಪ್ರಭುತ್ವದ ತಳಹದಿಯ ವಿರುದ್ಧವಾಗಿದ್ದು, ಅಪ್ರಾಯೋಗಿಕವಾಗಿದೆ. ಇದನ್ನು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿಲ್ಲ. ಹೀಗಾಗಿ ಇದನ್ನು ಜಾರಿಗೆ ತರದಂತೆ ವಿಧಾನಸಭೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಹೇಳಿದರು. 

   ಈ ನಿರ್ಣಯದ ನಂತರ, ತಮಿಳುನಾಡು ಮುಖ್ಯಮಂತ್ರಿ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ವಿಂಗಡಣೆಯ ಉದ್ದೇಶಿತ ಕಾರ್ಯಾಚರಣೆ ವಿರುದ್ಧ ಎರಡನೇ ನಿರ್ಣಯವನ್ನು ಮಂಡಿಸಿದರು (ಕೊನೆಯ ಜನಗಣತಿಯನ್ನು 2011 ರಲ್ಲಿ ನಡೆಸಲಾಯಿತು). ತಮಿಳುನಾಡು ತನ್ನ ಕಡಿಮೆ ಜನಸಂಖ್ಯೆಯ ಗಾತ್ರವನ್ನು ಗಮನಿಸಿದರೆ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಿಗೆ ಹೋಲಿಸಿದರೆ ಲೋಕಸಭೆಯಲ್ಲಿ ಸೀಮಿತ ಪ್ರಾತಿನಿಧ್ಯವನ್ನು ಹೊಂದಿರುತ್ತದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದರು.

   ‘ಜನಗಣತಿ ಆಧಾರದ ಮೇಲೆ ಡಿಲಿಮಿಟೇಶನ್ ಅನ್ನು ಒಪ್ಪಲು ಸಾಧ್ಯವಿಲ್ಲ, ಜನಗಣತಿ ಆಧಾರದ ಮೇಲೆ ಡಿಲಿಮಿಟೇಶನ್ ಮಾಡುವುದರಿಂದ ಜನಸಂಖ್ಯಾ ನಿಯಂತ್ರಣ ನೀತಿಗಳನ್ನು ಜಾರಿಗೆ ತರಲು ಆಸಕ್ತಿ ತೋರದ ರಾಜ್ಯಗಳು ಹೆಚ್ಚಿನ ಲಾಭವನ್ನು ಪಡೆಯುತ್ತವೆ. ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದನ್ನು ನಾವು ವಿರೋಧಿಸಬೇಕು.

    2026ರ ನಂತರ ಜನಗಣತಿಯ ಆಧಾರದ ಮೇಲೆ ನಡೆಸಲಾಗುವ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ನಡೆಸಬಾರದು ಎಂದು ಈ ಸದನವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ. ಅನಿವಾರ್ಯ ಕಾರಣಗಳಿಂದ ಜನಸಂಖ್ಯೆಯ ಆಧಾರದ ಮೇಲೆ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದರೆ, ಅದನ್ನು ನಿರ್ವಹಿಸಲಾಗುವುದು. 1971 ರ ಜನಸಂಖ್ಯೆಯ ಆಧಾರದ ಮೇಲೆ ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿನ ಉಭಯ ಸದನಗಳ ನಡುವಿನ ಕ್ಷೇತ್ರಗಳ ಪ್ರಸ್ತುತ ಅನುಪಾತವನ್ನು ನಿಗದಿಪಡಿಸಲಾಗಿದೆ.

    ಕಳೆದ 50 ವರ್ಷಗಳಿಂದ ಜನರ ಅನುಕೂಲಕ್ಕಾಗಿ ವಿವಿಧ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದ್ದಕ್ಕಾಗಿ ತಮಿಳುನಾಡಿನಂತಹ ರಾಜ್ಯಗಳಿಗೆ ದಂಡ ವಿಧಿಸಬಾರದು ಎಂದು ಅವರು ಹೇಳಿದರು.

    ಅಲ್ಲದೆ “ತಮಿಳುನಾಡಿನಲ್ಲಿ 39 ಲೋಕಸಭಾ ಸ್ಥಾನಗಳಿವೆ, ಡಿಲಿಮಿಟೇಶನ್ ಮಾಡಿದರೆ, ನಮ್ಮ ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆಯಾಗುತ್ತದೆ. 39 ಸಂಸದರಿದ್ದರೂ, ಸಂಸತ್ತಿನಲ್ಲಿ ನಮ್ಮ ಬೇಡಿಕೆಗಳನ್ನು ಕೇಳುವುದಿಲ್ಲ; ಅದನ್ನು ಕೆಳಗಿಳಿಸಿದರೆ ಅದು ನಮ್ಮ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

    ನಿರ್ಣಯಕ್ಕೆ ಪ್ರತ್ಯುತ್ತರವಾಗಿ ಬಿಜೆಪಿಯ ವನತಿ ಶ್ರೀನಿವಾಸಸ್ ಮಾತನಾಡಿ, “ಭವಿಷ್ಯದಲ್ಲಿ ಸ್ಥಾನಗಳ ಸಂಖ್ಯೆ ಕಡಿಮೆಯಾದರೆ ನಮ್ಮ ಧ್ವನಿ ಮತ್ತು ಹಕ್ಕುಗಳು ಕಡಿಮೆಯಾಗುತ್ತದೆ ಎಂಬ ಭಯವು ಅರ್ಥವಾಗುತ್ತದೆ ಮತ್ತು ಸಮಂಜಸವಾಗಿದೆ. ತಮಿಳುನಾಡು ಬಿಜೆಪಿ ಆ ನಿರ್ಣಯದ ಕಾಳಜಿಯನ್ನು ಅರ್ಥಮಾಡಿಕೊಂಡಿದೆ. ಆದರೆ ಬಿಜೆಪಿ ಒಂದು ರಾಷ್ಟ್ರ ಒಂದು ಚುನಾವಣೆಯ ವಿರುದ್ಧದ ನಿರ್ಣಯವನ್ನು ವಿರೋಧಿಸಿದೆ ಎಂದರು.

  “ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ, ಈಗ ಒಂದು ರಾಷ್ಟ್ರ ಒಂದು ಚುನಾವಣೆಯ ಬಗ್ಗೆ ಚರ್ಚಿಸಲು ಸಮಿತಿಯನ್ನು ರಚಿಸಲಾಗಿದೆ. ಪ್ರತಿ ಪಕ್ಷವು ಸಮಿತಿಯಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಬಹುದು. ಪ್ರತಿ ವರ್ಷ ಕೆಲವು ರಾಜ್ಯದಲ್ಲಿ ಚುನಾವಣೆಗಳು ನಡೆಯುತ್ತವೆ. ಆದ್ದರಿಂದ ನಾವು ಒಂದು ರಾಷ್ಟ್ರ ಒಂದು ಚುನಾವಣೆಯನ್ನು ಇದಕ್ಕೆ ಪರಿಹಾರವಾಗಿ ನೋಡಬೇಕು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರೇ ತಮ್ಮ ಪುಸ್ತಕ ನೆಂಜುಕ್ಕು ನೀತಿಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆಯ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ” ಎಂದು ಬಿಜೆಪಿಯ ವನತಿ ಶ್ರೀನಿವಾಸನ್ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap