ಬೆಂಗಳೂರು
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇವರಾಜ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಬ್ಬರ, ಜನಜಂಗುಳಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಾರು ಸಿಲುಕಿಕೊಂಡಿತ್ತು.
ದೇವೇಗೌಡರಿದ್ದ ಕಾರು ಸೇರಿದಂತೆ ಬೆಂಗಾವಲು ಪಡೆಯಲು ಮೂರು ಕಾರುಗಳು ಜೆಸಿ ವೃತ್ತದಲ್ಲಿ ರಣ ಬಿಸಿಲಿನಲ್ಲಿ ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ನಿಂದ ಹೊರ ಬರಲು ಸಾಧ್ಯವಾಗಲಿಲ್ಲ. ಬೆಳಿಗ್ಗೆ 11.30ರ ಸುಮಾರಿನಲ್ಲಿ ವಾಹನ ಸವಾರರು ಪರದಾಡಿದರು.
ಜೆ.ಸಿ. ರಸ್ತೆಯಿಂದ ಸೌತ್ ಎಂಡ್ ಸರ್ಕಲ್ ವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು, ಜನ ಸಾಮಾನ್ಯರ ಜೊತೆಗೂಡಿ ಆರ್.ವಿ. ದೇವರಾಜ್ ನೇತೃತ್ವದಲ್ಲಿ ಜಾಥ ಸಾಗಿತು. ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಮಮತಾ ದೇವರಾಜ್, ಮಾಜಿ ಮಹಾನಗರ ಪಾಲಿಕೆ ಸದಸ್ಯ ಯುವರಾಜ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ