ತೆಲಂಗಾಣ :
ನಾಗ ಚೈತನ್ಯ ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸು ಕಂಡಿದ್ದು ‘ತಾಂಡೇಲ್’ ಚಿತ್ರದ ಮೂಲಕ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿದೆ. ಈ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡಿದ ಬಳಿಕ ಒಟಿಟಿಗೆ ಬರೋಕೆ ರೆಡಿ ಆಗಿದೆ. ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಅವರ ಪರ್ಫಾರ್ಮೆನ್ಸ್ನ ಒಟಿಟಿಯಲ್ಲಿ ನೋಡುವ ದಿನ ಹತ್ತಿರವಾಗಿದೆ. ಈ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಇಲ್ಲಿದೆ ಮಾಹಿತಿ.
ನಾಗ ಚೈತನ್ಯ ಅವರು ‘ತಾಂಡೇಲ್’ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಿದ್ದಾರೆ. ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿ ಮತ್ತಷ್ಟು ಸಂಚಲನ ಸೃಷ್ಟಿಸುವ ನಿರೀಕ್ಷೆ ಇದೆ. ಸದ್ಯ ಥಿಯೇಟರ್ನಲ್ಲಿ ಸಿನಿಮಾದ ಹವಾ ಕಡಿಮೆ ಆಗುತ್ತಿದ್ದು, ಚಿತ್ರ ಒಟಿಟಿಗೆ ಬರೋಕೆ ಇದು ಸರಿಯಾದ ಸಮಯ ಎಂದು ತಂಡ ನಿರ್ಧರಿಸಿದಂತೆ ಇದೆ.
2023ರಲ್ಲಿ ರಿಲೀಸ್ ಆದ ನಾಗ ಚೈತನ್ಯ ನಟನೆಯ ‘ಕಸ್ಟಡಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿರಲಿಲ್ಲ. ಆ ಬಳಿಕ ಅವರು ಒಪ್ಪಿಕೊಂಡಿದ್ದು, ‘ತಾಂಡೇಲ್’. ಸದ್ಯ ನಾಗ ಚೈತನ್ಯ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ.
