‘ಕೆಜಿಎಫ್ 2’ ಜತೆ ಅಟ್ಯಾಚ್ ಆಗಿ ಬರಲಿದೆ ಎರಡು ಕನ್ನಡ ಚಿತ್ರಗಳ ಟೀಸರ್; ಗುಡ್​ ನ್ಯೂಸ್ ಕೊಟ್ಟ ಹೊಂಬಾಳೆ ಫಿಲ್ಮ್ಸ್​

ಕೆಜಿಎಫ್ 2 :
     ರಿಷಬ್​ ನಟನೆಯ ಜತೆಗೆ, ನಿರ್ದೇಶನದ ಜವಾಬ್ದಾರಿ ಹೊತ್ತಿರುವ ‘ಕಾಂತಾರ’ ಸಿನಿಮಾದ ಟೀಸರ್ ಕೂಡ ರಿಲೀಸ್ ಆಗುತ್ತಿದೆ. ‘ದಂತಕಥೆಯ ಮೊದಲ ಆಟ, ಕಾಂತಾರಾದ ಮೊದಲ ನೋಟ ನಾಳೆ ರಾತ್ರಿ 10:44ಕ್ಕೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್​​ನಲ್ಲಿ’ ಎಂದು ಬರೆಯಲಾಗಿದೆ.

     ‘ಕೆಜಿಎಫ್​ ಚಾಪ್ಟರ್​ 2’ ಸಿನಿಮಾ  ಏಪ್ರಿಲ್​ 14ರಂದು ತೆರೆಗೆ ಬರುತ್ತಿದ್ದು, ಈ ಚಿತ್ರವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಕನ್ನಡದ ಚಿತ್ರವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದು ಇದೇ ಮೊದಲು.

ಜೆಡಿಎಸ್​ ರಾಜ್ಯಾಧ್ಯಕ್ಷರಾಗಿ ಏ.17ರಂದು ಇಬ್ರಾಹಿಂ ಅಧಿಕಾರ ಸ್ವೀಕಾರ

ಈಗ KGF 2 ತೆರೆಗೆ ಬರುವುದಕ್ಕೂ ಮೊದಲು ಎರಡು ಗುಡ್​ನ್ಯೂಸ್ ನೀಡಿದೆ ಹೊಂಬಾಳೆ ಫಿಲ್ಮ್ಸ್​ . ಈ ನಿರ್ಮಾಣ ಸಂಸ್ಥೆ ಅಡಿಯಲ್ಲಿ ರಿಲೀಸ್​​ ಆಗುತ್ತಿರುವ ಎರಡು ಚಿತ್ರಗಳ ಟೀಸರ್ ಮಾರ್ಚ್​ 13 ರಾತ್ರಿ 10.45ಕ್ಕೆ ರಿಲೀಸ್ ಆಗಲಿದೆ. ಈ ಟೀಸರ್​ಗಳು ‘ಕೆಜಿಎಫ್​ 2’ ಜತೆ ಅಟ್ಯಾಚ್ ಆಗಿರಲಿದೆ.

ದೊಡ್ಡದೊಡ್ಡ ಚಿತ್ರಗಳು ರಿಲೀಸ್​ ಆಗುವಾಗ ಮುಂಬರುವ ಸಿನಿಮಾಗಳ ಟ್ರೇಲರ್ ಅಥವಾ ಟೀಸರ್​ಗಳನ್ನು ಇದೇ ರೀತಿ ಅಟ್ಯಾಚ್​ ಮಾಡಿ ರಿಲೀಸ್ ಮಾಡುವ ಪದ್ಧತಿ ನಡೆದುಕೊಂಡುಬಂದೇ ಇದೆ. ಮಾರ್ಚ್​ 17ರಂದು ತೆರೆಗೆ ಬಂದ ‘ಜೇಮ್ಸ್’ ಸಿನಿಮಾದ ಜತೆಗೆ ‘ಬೈರಾಗಿ’ ಸಿನಿಮಾದ ಟೀಸರ್​ ಪ್ರಸಾರಗೊಂಡಿತ್ತು. ಅದೇ ರೀತಿ ‘ಕೆಜಿಎಫ್​ 2’ ಜತೆಗೆ ರಿಷಬ್ ಶೆಟ್ಟಿ ನಟನೆಯ ‘ಕಾಂತಾರಾ’ ಹಾಗೂ ಸಂತೋಷ್ ಆನಂದ್​ರಾಮ್​ ಅಭಿನಯದ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾದ ಟೀಸರ್ ಅಟ್ಯಾಚ್ ಆಗಿರಲಿದೆ.

 ನನ್ನ ರಾಜಕೀಯ ಇತಿಹಾಸದಲ್ಲೇ ಇವತ್ತಿನವರೆಗೆ ಈ ರೀತಿಯ ಕಂಪ್ಲೇಂಟ್ ಮಾಡಿಲ್ಲ, ಇದೇ ಮೊದಲು – ಸಚಿವ ಈಶ್ವರಪ್ಪ

‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾದಲ್ಲಿ ಜಗ್ಗೇಶ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂತೋಷ್​ ಆನಂದ್​ರಾಮ್​ ನಿರ್ದೇಶನ ಸಿನಿಮಾಗಿದೆ. ಜಗ್ಗೇಶ್​ ಬಾಣಸಿಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್​ ಅಭಿಮಾನಿಗಳಿಗೆ ಇಷ್ಟವಾಗಿದೆ. ಈಗ ಟೀಸರ್ ಮೂಲಕ ಸಿನಿಮಾದ ಝಲಕ್ ಸಿಗಲಿದೆ. ‘ಅಸಹಾಯಕ ಹಯವಧನನ ಸ್ವಸಹಾಯ ಪದ್ಧತಿಯ ಅನಾವರಣ’ ಎನ್ನುವ ಕ್ಯಾಪ್ಶನ್​ನೊಂದಿಗೆ ಪೋಸ್ಟರ್​ ಪೋಸ್ಟ್​ ಮಾಡಲಾಗಿದೆ.

 

ರಿಷಬ್​ ನಟನೆಯ ಜತೆಗೆ, ನಿರ್ದೇಶನದ ಜವಾಬ್ದಾರಿ ಹೊತ್ತಿರುವ ‘ಕಾಂತಾರ’ ಸಿನಿಮಾದ ಟೀಸರ್ ಕೂಡ ರಿಲೀಸ್ ಆಗುತ್ತಿದೆ. ‘ದಂತಕಥೆಯ ಮೊದಲ ಆಟ, ಕಾಂತಾರಾದ ಮೊದಲ ನೋಟ ನಾಳೆ ರಾತ್ರಿ 10:44ಕ್ಕೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್​​ನಲ್ಲಿ’ ಎಂದು ಹೊಂಬಾಳೆ ಫಿಲ್ಮ್ಸ್​ ಪೋಸ್ಟ್ ಮಾಡಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap