‘ತಾಜ್ ಮಹಲ್‌’ ಅಲ್ಲ ‘ತೇಜೋ ಮಹಾಲಯ’ : ‘ಹಿಂದೂ ವಿಗ್ರಹ’ ಇರುವಿಕೆ ದೃಢೀಕರಿಸಲು ‘ಮುಚ್ಚಿದ ದ್ವಾರ’ ತೆರೆಯಿರಿ : ಹೈಕೋರ್ಟ್‌ಗೆ ಮನವಿ

ಲಖನೌ :

 ಹಿಂದೂ ದೇವತೆಗಳ ವಿಗ್ರಹಗಳ ಉಪಸ್ಥಿತಿಯನ್ನ ಸ್ಥಾಪಿಸಲು ತಾಜ್ ಮಹಲ್‌ನೊಳಗಿನ 22 ಮುಚ್ಚಿದ ದ್ವಾರಗಳ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನಗಳನ್ನ ಕೋರಿ ಅಲಹಾಬಾದ್ ನ್ಯಾಯಾಲಯದ ಲಕ್ನೋ ಪೀಠದಲ್ಲಿ ಅರ್ಜಿ ಸಲ್ಲಿಸಲಾಗಿದೆ.

 ಮುಸ್ಲಿಂರು ಸುಪ್ರೀಂಕೋರ್ಟ್ ಆದೇಶ ಪಾಲಿಸದಿದ್ದರೆ ಹಿಂದೂ ಸಮಾಜದಿಂದ ಪೂರ್ಣ ಬಹಿಷ್ಕಾರ : ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಸತ್ಯಶೋಧನಾ ಸಮಿತಿಯ ರಚನೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ವರದಿ ಸಲ್ಲಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಹಿಂದೂ ದೇವತೆಗಳ ವಿಗ್ರಹಗಳನ್ನ ಮುಚ್ಚಿದ ದ್ವಾರಗಳ ಹಿಂದೆ ಲಾಕ್ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 4 ದಿನ ಭಾರೀ ಮಳೆ

ಈ ಸ್ಮಾರಕ, ಹಿಂದಿನ ಶಿವ ದೇವಾಲಯವಾಗಿದೆ ಎಂಬ ಬಗ್ಗೆ ಕೆಲವು ಇತಿಹಾಸಕಾರರು ಮತ್ತು ಕೆಲವು ಹಿಂದೂ ತಂಡಗಳ ಹೇಳಿಕೆಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.‘ಕೆಲವು ಹಿಂದೂ ತಂಡಗಳು ಮತ್ತು ಗೌರವಾನ್ವಿತ ಸಂತರು ಈ ಸ್ಮಾರಕವನ್ನು ಅನೇಕ ಇತಿಹಾಸಕಾರರು ಮತ್ತು ಮಾಹಿತಿಯ ಬೆಂಬಲದಿಂದ ಹಿಂದಿನ ಶಿವ ದೇವಾಲಯ ಎಂದು ಪ್ರತಿಪಾದಿಸುತ್ತಿದ್ದಾರೆ.

ವಿಜಯಪುರ ಮತ್ತು ಪಾವಗಡದಲ್ಲಿ ಆಜಾನ್ ವಿರುದ್ಧ ಭಜನ್ ಅಭಿಯಾನ

ಆದಾಗ್ಯೂ ಅನೇಕ ಇತಿಹಾಸಕಾರರು ಇದನ್ನ ಮೊಘಲ್ ಚಕ್ರವರ್ತಿ ಶಹಜಹಾನ್ ನಿರ್ಮಿಸಿದ ತಾಜ್ ಮಹಲ್ ಎಂದು ನಂಬುತ್ತಾರೆ. ಕೆಲವು ವ್ಯಕ್ತಿಗಳು ತಾಜ್ ಮಹಲ್, ತೇಜೋ ಮಹಾಲಯ ಆಗಿದ್ದು, ಅನೇಕ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ ಎಂದು ಭಾವಿಸುತ್ತಾರೆ. ಅಂದರೆ ಅತ್ಯುತ್ತಮ ಶಿವ ದೇವಾಲಯಗಳಲ್ಲಿ ಒಂದಾಗಿದೆ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap