ಬೆಂಗಳೂರು
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಒಂದೊಂದು ಬೆಳೆವಣಿಗಳು ನಡೆಯುತ್ತಿದೆ.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ನಟಿ ಪೂನಂ ಕೌರ್ ಅವರು ಈ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದರು. ಇದೀಗ ತೆಲುಗು ನಟಿ ರಶ್ಮಿ ಗೌತಮ್ ವಿರೋಧ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ಜನಪ್ರಿಯ ನಟಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯೂ ಆಗಿರುವ ಪೂನಂ ಕೌರ್ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಮಹಿಳೆಯರಿಗೆ ಒಂದು ಸಂದೇಶ ನೀಡಿದ್ದಾರೆ. ಅಧಿಕಾರಲ್ಲಿರುವ ಜನರ ಮಕ್ಕಳು; ಹಣ ಮತ್ತು ಅಧಿಕಾರದ ಮದದಲ್ಲಿ ಮಹಿಳೆಯರ ಶೋಷಣೆ ಮಾಡುತ್ತಾರೆ ಮತ್ತು ಸಲೀಸಾಗಿ ಬಚಾವಾಗುತ್ತಾರೆ.
ಅಂಕಿತಾ ಭಂಡಾರಿ ಹೆಸರಿನ ಯುವತಿಯನ್ನು ಮಿನಿಸ್ಟರೊಬ್ಬನ ಮಗ ಬೆಟ್ಟದ ಮೇಲಿಂದ ತಳ್ಳಿ ಹತ್ಯೆ ಮಾಡುತ್ತಾನೆ, ಮತ್ತೊಬ್ಬ ಮಿನಿಸ್ಟರ್ ಮಗ ಬ್ಲ್ಯಾಕ್ ಮೇಲ್ ಮಾಡುತ್ತಾನೆ ಎಂದು ತಮ್ಮ ಮಾತು ಆರಂಭಿಸುವ ಪೂನಂ, ಪ್ರಜ್ವಲ್ ರೇವಣ್ಣನ ಬಗ್ಗೆ ಹೇಳುತ್ತಾರೆ
ಪ್ರಜ್ವಲ್ ನನ್ನು ಒಬ್ಬ ಮಿನಿಸ್ಟರ್ ಮಗ ಎಂದು ಹೇಳುವ ಪೂನಂ ಅವನೊಬ್ಬ ರಾಕ್ಷಸೀ ಪ್ರವೃತ್ತಿಯ ವ್ಯಕ್ತಿ, 2,800 ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದೀಗ ತೆಲುಗು ನಟಿ ಹಾಗೂ ನಿರೂಪಕಿ ರಶ್ಮಿ ಗೌತಮ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಒಂದು ಹಾಕಿಕೊಂಡಿದ್ದಾರೆ. “ಮಹಿಳೆ ಹಸಿದಾಗ ಬಾಯಿಗೆ ಅನ್ನ ಕೊಡಿ, ಅದನ್ನಲ್ಲ” ಎಂದು ಖ್ಯಾತ ಬ್ರಿಟನ್ ಲೇಖಕಿ ರಾಷೆಲ್ ಮೊರಾನ್ ಅವರ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರ ಎಲ್ಲ ಕಡೆ ಚರ್ಚೆಗೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ