ಆಂಬ್ಯುಲೆನ್ಸ್​​​​ಗೆ ದಾರಿ ಬಿಡದ ಆಟೋ ಚಾಲಕ ಬಂಧನ….!

ಬೆಂಗಳೂರು:

   ರಸ್ತೆಯಲ್ಲಿ ಸಂಚರಿಸುವಾಗ ನಿರಂತರವಾಗಿ ಹಾರ್ನ್ ಮಾಡಿ ಸಂದೇಶ ರವಾನಿಸಿದರೂ ಆಂಬ್ಯುಲೆನ್ಸ್​​ಗೆ ದಾರಿ ಬಿಡದೆ, ಮೊಂಡುತನ ಪ್ರದರ್ಶಿಸಿದ ಆಟೋ ಚಾಲಕನೊಬ್ಬನನ್ನು ಬೆಳ್ಳಂದೂರು ಸಂಚಾರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.ತುರ್ತು ಚಿಕಿತ್ಸೆಗೆ ಅಗತ್ಯವಿರುವ ರೋಗಿಯೊಬ್ಬರು ಇದ್ದ ಆಂಬುಲೆನ್ಸ್ ಹಲಸೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

   ಪರಮೇಶ್ (49) ಬಂಧಿತನಾಗಿದ್ದ ಆಟೋ ಚಾಲಕ. ಕೂಡ್ಲುನಲ್ಲಿ ವಾಸವಾಗಿರುವ ಈತ ನೆರೆಮನೆಯ ವ್ಯಕ್ತಿಯೋರ್ವರಿಂದ ಆಟೋ ಪಡೆದು ಜ.21ರಂದು ಹರಳೂರು ಮಾರ್ಗವಾಗಿ ಚಲಾಯಿಸುತ್ತಿದ್ದ. ಈ ವೇಳೆ ಹಿಂಬದಿಯಿಂದ ಸೈರನ್ ಮೊಳಗಿಸಿ ಆಂಬ್ಯುಲೆನ್ಸ್ ಬಂದರೂ ಚಾಲಕ ದಾರಿ ಬಿಟ್ಟಿರಲಿಲ್ಲ. ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾಗಿದ್ದರಿಂದ ದಾರಿ ಮಾಡಿಕೊಡುವಂತೆ ವಾಯ್ಸ್ ಸಂದೇಶ ಮೂಲಕ ತಿಳಿಸಿದರೂ ಕ್ಯಾರೆ ಅನ್ನದೆ ಆಟೋ ಚಲಾಯಿಲಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿರ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.

   ವಿಡಿಯೋ ವೈರಲ್ ಆಗುತ್ತಿದ್ದಂತೆ ಇದನ್ನು ಗಮನಿಸಿದ ಬೆಳ್ಳಂದೂರು ಟ್ರಾಫಿಕ್ ಪೊಲೀಸರು, ಆಟೋ ನೋಂದಣಿ ಸಂಖ್ಯೆ ಆಧರಿಸಿ ಚಾಲಕನನ್ನು ಬಂಧಿಸಿ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಲೈಸೆನ್ಸ್ ರದ್ದು ಕೋರಿ ಆರ್​​ಟಿಓಗೆ ಶಿಫಾರಸು ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link