ಚಿಕ್ಕಬಳ್ಳಾಪುರ:
ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗುವೊಂದು ಸಾವನ್ನಪ್ಪಿದೆ. ಮಗುವಿನ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹಾಲಗಾನಹಳ್ಳಿಯಲ್ಲಿ ಮನೆಯ ಮುಂದೆ ಇದ್ದ ತೆಂಗಿನ ಮರ ಮುರಿದು ಬಿದ್ದ ಪರಿಣಾಮ, ಪೃಥ್ವಿರಾಜ್(3) ಎಂಬ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ತಾಯಿ ಮೋನಿಕಾ ಕಾಲಿಗೆ ಗಂಭೀರ ಗಾಯವಾಗಿದೆ. ಅವರನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಹದಿನೈದು ದಿನಗಳ ಹಿಂದಷ್ಟೇ 3 ವರ್ಷದ ಮಗ ಪೃಥ್ವಿಯನ್ನು ಕರೆದುಕೊಂಡು ತವರು ಮನೆ ಹಾಲಗಾನಹಳ್ಳಿಗೆ ಹೆರಿಗೆಗಾಗಿ ಮೋನಿಕಾ ಆಗಮಿಸಿದ್ದರು. ಮನೆಯ ಮುಂದಿನ ತೆಂಗಿನ ಮರ ಮುರಿದು ಬಿದ್ದ ಪರಿಣಾಮ, ಈ ದಾರುಣ ಘಟನೆ ನಡೆದಿದೆ.