ತುಮಕೂರು
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಟಿ ಎನ್ ಮಧುಕರ್ ರವರನ್ನು ಟಿಡಿಸಿಸಿಐ ವತಿಯಿಂದ ಅಭಿನಂದಿಸಲಾಯಿತು .
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಟಿ.ಜೆ. ಗಿರೀಶ್, ಉಪಾಧ್ಯಕ್ಷರಾದ ಟಿಟಿ ಸತ್ಯನಾರಾಯಣ, ಕಾರ್ಯದರ್ಶಿಗಳಾದ ಡಿ.ಆರ್. ಮಲ್ಲೇಶಯ್ಯ, ಜಂಟಿ ಕಾರ್ಯದರ್ಶಿಗಳಾದ ಪಿ ಆರ್ ಕುರಂದವಾಡ ಖಜಾಂಚಿಗಳಾದ ಶ್ರೀಕಂಠ ಸ್ವಾಮಿ, ಮಾಜಿ ಅಧ್ಯಕ್ಷರು, ನಿರ್ದೇಶಕರು, ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು.