ಮಿಡಿಗೇಶಿ:
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿ ವ್ಯಾಪ್ತಿಯ ಕತ್ತಿರಾಜನಹಳ್ಳಿ ಗ್ರಾಮದ ಮಧ್ಯದಲ್ಲಿ ಇರುವ ಅಂಕಾಳಮ್ಮ ದೇವಿ ದೇವಸ್ಥಾನದ ಬಳಿಗೆ ಮಂಗಳವಾರ ಮಧ್ಯರಾತ್ರಿ ಕರಡಿ ಬಂದಿದೆ. ಪ್ರತಿನಿತ್ಯವೂ ಈ ಕರಡಿ ಆಹಾರ ಅರಸಿ ಗ್ರಾಮಕ್ಕೆ ಲಗ್ಗೆ ಇಡುತ್ತಿದೆ. ಮಧ್ಯರಾತ್ರಿಯಲ್ಲಿ ಕರಡಿ ಬಂದು ದೇವಾಲಯದ ಬಾಗಿಲು ತೆಗೆದು, ಒಳಗೆ ಹೋಗಿ ಅಲ್ಲಿರುವ ದೀಪದ ಎಣ್ಣೆಯನ್ನು ಕುಡಿದು ಗ್ರಾಮದ ಹೊರವಲಯದಲ್ಲಿ ಪ್ರತ್ಯಕ್ಷವಾಗುತ್ತದೆ. ನಡುರಾತ್ರಿಯಲ್ಲಿ ಕರಡಿಯನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮಧ್ಯರಾತ್ರಿಯಲ್ಲಿ ಯಾರಾದರೂ ಹೊಲದ ಬಳಿ ಹೋಗಲೋ, ಮೂತ್ರ ವಿಸರ್ಜನೆಗೋ ಮನೆಯಿಂದ ಹೊರಗೆ ಬಂದರೆ ಅವರ ಗತಿಯೇನು ಎಂದು ಜನರಲ್ಲಿ ಭೀತಿ ಉಂಟಾಗಿದೆ.
ಈಗಾಗಲೇ ಐದಾರು ಬಾರಿ ದೇವಾಲಯದ ಬಾಗಿಲನ್ನು ಮುರಿದು, ಒಳಗೆ ಪ್ರವೇಶ ಮಾಡಿ ದೇವಾಲಯದಲ್ಲಿ ಇದ್ದ ದೀಪದ ಎಣ್ಣೆಯನ್ನು ಕುಡಿದು, ಹಣ್ಣು ಹಂಪಲು ತಿಂದು ದೇವಾಲಯಕ್ಕೆ ಹಾನಿ ಮಾಡಿದೆ. ವರ್ಷದ ಹಿಂದೆಯೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ