ರಸ್ತೆ ಕಾಮಗಾರಿಗೆ ಜಮೀನು ವಶ : ಪರಿಹಾರ ವಿಳಂಬ

ತಿಪಟೂರು:

ದೇಶದ ಅಭಿವೃದ್ಧಿಗೆ ರಸ್ತೆಗಳೆ ಪ್ರಮುಖ, ಅಂತಹ ರಸ್ತೆಗಳನ್ನು ಮಾಡಲು ಚಿಕ್ಕ-ಪುಟ್ಟ ರೈತರು ತಮ್ಮ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಆದರೇ ಈ ರೈತರಿಗೆ ಕಳೆದ 6 ವರ್ಷಗಳಿಂದ ಸೂಕ್ತ ಪರಿಹಾರ ನೀಡದೆ ಸರ್ಕಾರವು ಸತಾಯಿಸುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಿಬ್ಬನಹಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 206 ರ ಚತುಷ್ಪತ ಹೆದ್ದಾರಿ ಕಾಮಗಾರಿಗೆ ಭೂಮಿಯ ಜೊತೆಗೆ ವಾಸಯೋಗ್ಯ, ವಾಣಿಜ್ಯ ಹಾಗೂ ಕೃಷಿ ಭೂಮಿಯನ್ನು ಇಲ್ಲಿನ ಜನರು ಕಳೆದುಕೊಂಡಿದ್ದು ಹೆಚ್ಚು ಕಡಿಮೆ ಎಲ್ಲಾ ಭಾಗಗಳಲ್ಲೂ ಪರಿಹಾರದ ಹಣವನ್ನು ವಿತರಿಸಿದ್ದಾರೆ. ಆದರೇ ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿ ಹೋಬಳಿಯ ಕಿಬ್ಬನಹಳ್ಳಿಕ್ರಾಸ್ ಮತ್ತು ಕಿಬ್ಬನಹಳ್ಳಿ ನಡುವಿನ ಜನರಿಗೆ ಇದುವರೆಗೂ ಯಾವುದೇ ರೀತಿಯ ಅವಾರ್ಡ್ ನೋಟಿಸ್ ಮತ್ತು ಪರಿಹಾರದÀ ಹಣವನ್ನು ನೀಡಿಲ್ಲ ಎಂದು ಅವರು ದೂರಿದರು.

ಬ್ಯಾಂಕ್‍ನಲ್ಲಿ ಸಾಲ ಕೊಡುತ್ತಿಲ್ಲ : ಈ ಪ್ರದೇಶದಲ್ಲಿ ಮಾತ್ರ ಕಾಮಗಾರಿಯನ್ನು ಮಾಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ನಾವು ರಸ್ತೆಯ ಅಲೈನ್‍ಮೆಂಟ್ ಬದಲಿಸುತ್ತೇವೆ ಎನ್ನುತ್ತಾರೆ. ಆದರೇ ರಸ್ತೆ ಎಲ್ಲಿ ಹೋಗುತ್ತದೆ ಎನ್ನುವುದನ್ನು ತಿಳಿಸುವುದಿಲ್ಲ. 2016 ರ ಸೆಪ್ಟಂಬರ್‍ನಲ್ಲಿ ಭೂಸ್ವಾಧಿನ ಮಾಡುವುದಾಗಿ ಅಧಿಸೂಚನೆ ಹೊರಡಿಸಿದ್ದರಿಂದ ನಾವು ನಮ್ಮ ಜಮೀನನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಲು ಆಗುತ್ತಿಲ್ಲ ಹಾಗೂ ಬ್ಯಾಂಕ್‍ನಲ್ಲಿ ಸಾಲವು ಸಹ ದೊರೆಯುತ್ತಿಲ್ಲ.

ಈ ಕಡೆ ರಸ್ತೆಯನ್ನು ವಶಪಡಿಸಿಕೊಂಡು ನಮಗೆ ಪರಿಹಾರವನ್ನು ನೀಡಿ, ಇಲ್ಲದೇ ಇದ್ದರೆ ನಿಮ್ಮ ರಸ್ತೆಯನ್ನು ನಾವು ಬಳಸಿಕೊಳ್ಳುವುದಿಲ್ಲವೆಂದು ಎಂಡೋಸ್‍ಮೆಂಟ್ ಆದರೂ ನೀಡಿ ನಮಗೆ ಸಾಲ ಸಿಗುವಂತಾದರೂ ಮಾಡಿ ಎಂದು ಶಾಂತಕುಮಾರ್ ಆಗ್ರಹಿಸಿದರು.

ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು ಮಾತನಾಡಿದರು, ಜಿಪಂ ಮಾಜಿ ಸದಸ್ಯ ಪಂಚಾಕ್ಷರಿ, 206 ರಾಷ್ಟ್ರೀಯ ರಸ್ತೆ ಕಾಮಗಾರಿಗೆ ಭೂಮಿ ಕಳೆದುಕೊಂಡ ಸಂತ್ರಸ್ಥರು ಭಾಗವಹಿಸಿದ್ದರು.

ರಾಷ್ಟ್ರೀಯ ಹೆದ್ದಾರಿ 206 ರ ಚತುಷ್ಪತ ಹೆದ್ದಾರಿ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ಥರು ತಾಲ್ಲೂಕಿನ ಕಿಬ್ಬನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.

ಖಾಸಗಿಯವರು ಕೋಟಿ ಗಳಿಸುತ್ತಾರೆ :

ರಸ್ತೆಯಲ್ಲಿ ಮನೆ ಮತ್ತು ಮಳಿಗೆಗಳನ್ನು ಕಳೆದುಕೊಂಡವರು ಸಾಲ-ಸೋಲ ಮಾಡಿ ಮನೆಯನ್ನು ಕಟ್ಟಿಕೊಂಡು ಪರಿಹಾರದ ಹಣ ಬರದೇ ತೀವ್ರ ಸಂಕಷ್ಟದಲ್ಲಿದ್ದಾರೆ. ರಸ್ತೆಯನ್ನು ಮಾಡಲು ಕೋಟ್ಯಾಂತರ ರೂ. ಗಳನ್ನು ಬಳಸುತ್ತಾರೆ.

ರಸ್ತೆಯನ್ನು ಮಾಡಿ ಟೋಲ್‍ಗಳನ್ನು ನಿರ್ಮಿಸಿ ಅದರಿಂದ ಕೋಟ್ಯಾಂತರ ರೂ. ಗಳನ್ನು ಖಾಸಗಿ ಕಂಪನಿಯವರು ಪಡೆದುಕೊಳ್ಳುತ್ತಾರೆ. ಬಡ ರೈತರಿಗೆ ಸಿಗುವುದು ಕೊನೆಯಲ್ಲಿ ಉಚಿತವಾಗಿ ಅರ್ಧಂಬರ್ಧ ನಿರ್ಮಿಸಿದ ಸರ್ವೀಸ್ ರಸ್ತೆ ಮಾತ್ರ ಎಂದು ಕೆ.ಟಿ.ಶಾಂತಕುಮಾರ್ ತಿಳಿಸಿದರು.

ಇಂದು ಸಾಂಕೇತಿಕವಾಗಿ ಧರಣಿಯನ್ನು ಆರಂಭಿಸಿದ್ದು, ಇಂದಿನಿಂದ ಒಂದು ತಿಂಗಳ ಒಳಗಾಗಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಪರಿಹಾರವನ್ನು ನೀಡದೇ ಇದ್ದರೆ ಉಗ್ರ ಹೋರಾಟ ಮಾಡಲಾಗುವುದು.

-ಕೆ.ಟಿ.ಶಾಂತಕುಮಾರ್, ಕಾಂಗ್ರೆಸ್ ಮುಖಂಡ

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap