ಕಣ್ಮುಚ್ಚಿ ಬಿಡುವಷ್ಟರಲ್ಲೇ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಬಾಲಕ. ಕ್ಷಣಾರ್ಧದಲ್ಲೇ ಸಾವಿನ ದವಡೆಯಿಂದ ಪಾರಾದ ಭಯಾನಕ

ಕೇರಳ:

ವೇಗವಾಗಿ ಬೈಸಿಕಲ್‌ನಲ್ಲಿ ಹೋಗುತ್ತಿದ್ದ ಬಾಲಕನೋರ್ವ ಮೋಟಾರ್‌ ಬೈಕ್‌ ಡಿಕ್ಕಿ ಹೊಡೆದಿದ್ದು, ರಸ್ತೆಯಲ್ಲಿ ಹಿಂದಿನಿಂದ ಬರುತ್ತಿದ್ದ ಬಸ್‌ಗೆ ಸಿಲುಕದೇ ಪಾರಾಗಿರುವ ಘಟನೆ ಮಾರ್ಚ್ 20 ರ ಭಾನುವಾರ ಸಂಜೆ ಕೇರಳದ ಕಣ್ಣೂರಿನ ತಳಿಪರಂಬ ಬಳಿಯ ಚೋರುಕ್ಕಲಾ ಎಂಬಲ್ಲಿ ಈ ಘಟನೆ ನಡೆದಿದೆ.ಘಟನೆಯ ದೃಶ್ಯಾವಳಿಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ನೋಡುವವರ ಎದೆ ಝಲ್ಲೆನಿಸುವಂತಿದೆ.

ಸ್ವಗ್ರಾಮದಲ್ಲಿ ಸಿದ್ದರಾಮಯ್ಯ ‘ವೀರ ‘ಕುಣಿತ ..

ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಮಾರ್ಚ್ 20 ರ ಭಾನುವಾರ ಸಂಜೆ ಕೇರಳದ ಕಣ್ಣೂರಿನ ತಳಿಪರಂಬ ಬಳಿಯ ಚೋರುಕ್ಕಲಾ ಎಂಬಲ್ಲಿ ಈ ಘಟನೆ ನಡೆದಿದೆ. 9 ವರ್ಷದ ಬಾಲಕ ತನ್ನ ಸೈಕಲ್‌ನಲ್ಲಿ ರಸ್ತೆ ದಾಟಲು ಪ್ರಯತ್ನಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಹುಡುಗ ಎಲ್ಲಿಂದಲೋ ವೇಗವಾಗಿ ಬರುತ್ತಿದ್ದಂತೆ, ಅವನ ಬೈಸಿಕಲ್ ನೇರವಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಮೋಟಾರ್‌ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ಬಿದ್ದಿದ್ದಾನೆ. ಆದ್ರೆ ಅದೃಷ್ಟವಶಾತ್‌ ಹಿಂದೆ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆಯದೇ ಕ್ಷಣಾರ್ಧದಲ್ಲಿ ಪಾರಾಗಿದ್ದಾನೆ. ಈ ವೇಳೆ ಬಾಲಕನ ಬೈಸಿಕಲ್‌ ಮೇಲೆ ಹರಿದ ಬಸ್‌ ಅದನ್ನು ಛಿದ್ರಗೊಳಿಸಿದೆ. ಈ ಎಲ್ಲಾ ದೃಶ್ಯಾವಳಿಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link