ಬಲಿ ಸ್ಥಾನವಾದ ಸೇತುವೆ ಕಾಮಗಾರಿ

ತಿಪಟೂರು:

ತಡೆಗೋಡೆ, ಸೂಚನಾ ಫಲಕವಿಲ್ಲ : ಅಧಿಕಾರಿಗಳ ಬೇಜವಬ್ದಾರಿಗೆ ಯುವಕ 

              ತಿಪಟೂರು-ಯಡಿಯೂರು ರಸ್ತೆಯ ಗೊರಗೊಂಡನಹಳ್ಳಿ ಬಳಿ ಇರುವ ರಾಜ ಕಾಲುವೆಯ ಸೇತುವೆ ನಿರ್ಮಾಣ ಕಾಮಗಾರಿ ಹಲವು ತಿಂಗಳುಗಳಿಂದ ನಡೆಯುತ್ತಿದ್ದು, ಸೂಕ್ತ ಸೂಚನಾ ಫಲಕ, ರಿಫ್ಲೆಕ್ಟರ್, ತಡೆಗೊಡೆ ಇಲ್ಲದ ಕಾರಣ ಮೃತ್ಯುವಿನ ಬಲಿ ಸ್ಥಾನವಾಗಿ ಪರಿಣಮಿಸಿದ್ದು ಮಂಗಳವಾರ ತಡರಾತ್ರಿ ಅಮಾಯಕ ಯುವಕನೊಬ್ಬ ಸೇತುವೆಯಿಂದ ಕೆಳಗೆ ಬಿದ್ದು ಮೃತನಾಗಿದ್ದಾನೆ.

ಸದರಿ ರಸ್ತೆಯು ತಿಪಟೂರಿನಿಂದ, ತುರುವೇಕೆರೆ, ಮಂಡ್ಯ, ಮೈಸೂರು, ಚನ್ನರಾಯಪಟ್ಟಣ, ಈಚನೂರು ಮುಂತಾದ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಇದೇ ರಸ್ತೆಯಲ್ಲಿ ವಿಶ್ವ ಪ್ರಸಿದ್ಧವಾದ ಕೊಬ್ಬರಿ ಮಾರುಕಟ್ಟೆ ಸಹ ಇರುವುದರಿಂದ ದಿನನಿತ್ಯ ಸಹಸ್ರಾರು ವಾಹನಗಳು ಸಂಚರಿಸುವ ರಸ್ತೆ ಇದಾಗಿದೆ.

ಈ ರಸ್ತೆಯಲ್ಲಿ ಸೇತುವೆ ಕಾಮಗಾರಿ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಒಂದು ಸೇತುವೆಯನ್ನು ಮಾಡಬೇಕಾದರೆ ಅದಕ್ಕೆ ಸೂಕ್ತವಾದ ಪರ್ಯಾಯ ರಸ್ತೆಯನ್ನು ನಿರ್ಮಿಸಬೇಕು ಹಾಗೂ ಯಾವುದೇ ಅಪಘಾತಗಳು ಸಂಭವಿಸದಂತೆ ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬ ಪರಿಜ್ಞಾನವು ಇದ್ದಂತೆ ಕಾಣುತ್ತಿಲ್ಲ.

ಸೂಕ್ತ ಸೂಚನಾ ಫಲಕ, ರಿಫ್ಲೆಕ್ಟರ್, ತಡೆಗೊಡೆ ಇಲ್ಲದೆ ಮಂಗಳವಾರ ತಡರಾತ್ರಿ ಸೇತುವೆಯಿಂದ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವುದು.

ಸಾವಿಗೆ ಹೊಣೆಯಾರು, ಸಾರ್ವಜನಿಕರ ಪ್ರಶ್ನೆ? :

ಸೇತುವೆ ಕಾಮಗಾರಿ ಆರಂಭಿಸಿದಾಗ ಬೇಕಾಬಿಟ್ಟಿಯಾಗಿ ಒಂದು ಬ್ಯಾನರ್ ಹಾಕಿ ಸ್ವಲ್ಪ ಮಣ್ಣನ್ನು ಹಾಕಿ ತಡೆಗೋಡೆಯ ಹಾಗೆ ಮಾಡಿದ್ದರು. ಈ ರೀತಿ ಹಾಕಿದ್ದ ತಡೆಗೋಡೆ ಇದ್ದಿರೆ ತೊಂದರೆ ಇರಲಿಲ್ಲ.

ಕೆಲ ದಿನಗಳ ಹಿಂದೆ ರಸ್ತೆಗೆ ಹಾಕಿದ್ದ ಮಣ್ಣನ್ನು ತೆಗೆದು ಹಾಕಿ ನೇರವಾಗಿ ರಸ್ತೆ ಕಾಣುವಂತೆ ಮಾಡಿದ್ದರು. ಆದರೇ ಇದೇ ಇಂದು ಒಬ್ಬ ಯುವಕನ ಸಾವಿಗೆ ಕಾರಣವಾಗಿದ್ದು ಇದಕ್ಕೆ ಹೊಣೆಯಾರು ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಸರ್ಕಾರಿ ಕೆಲಸ ದೇವರ ಕೆಲಸ ಎಂದು ಮಾಡುವ ಅಧಿಕಾರಿಗಳು ಇಂದು ಕಡಿಮೆಯಾಗಿದ್ದಾರೆ. ಹೇಗೋ ಕೆಲಸವಾದರೆ ಆಯಿತು ನಮಗೂ ಅದಕ್ಕೂ ಸಂಬಂಧವಿಲ್ಲ ಎನ್ನುವುದಕ್ಕೆ ಈ ರಸ್ತೆ ಅಪಘಾತ ಸಾಕ್ಷಿಯಾಗಿದೆ. ಕಾಮಗಾರಿ ಆರಂಭವಾದಾಗ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದ್ದರೆ ಇಂದು ಅಮಾಯಕ ಯುವಕನ ಪ್ರಾಣ ಬಲಿಯಾಗುತ್ತಿರಲಿಲ್ಲ. ಈಗಲಾದರೂ ಅಧಿಕಾರಿಗಳು ಜವಾಬ್ದಾರಿಯನ್ನು ಅರಿತು ಕೆಲಸಮಾಡಬೇಕು.

-ಸುದರ್ಶನ್, ನಿರ್ದೇಶಕರು, ಪಿಎಸಿಎಸ್, ಗೊರಗೊಂಡನಹಳ್ಳಿ

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap