ಪ್ರೇಗ್:
ಆಗಸದಲ್ಲಿ ನೋಟಿನ ಮಳೆಯಾದರೆ ಏನು ಮಾಡಬೇಕು ಎಂದು ಈಗಲೂ ನೆನಸಿಯೋಜಿಸಿದ್ದೀರ? ಆಗಲು ಸಾಧ್ಯವೇ ಇಲ್ಲ ಬಿಡಿ ಎಂದು ಯೋಚಿಸುತ್ತಿದ್ದೀರಾ? ಚೆಕ್ ಗಣರಾಜ್ಯದಲ್ಲಿ ಇಂಥ ಘಟನೆ ನಡೆ ದೇಬಿಟ್ಟಿದೆ. ಕಮಿಲ್ ಬಟೋಶೆಕ್ (ಕಜ್ಮಾ) ಎಂಬ ಟಿ.ವಿ. ನಿರೂಪಕರೊಬ್ಬರು ಹೆಲಿಕಾಪ್ಟರ್ ಮೂಲಕ ನೋಟುಗಳ ಮಳೆಯನ್ನೇ ಸುರಿಸಿದ್ದಾರೆ!
ಆರಂಭದಲ್ಲಿ ಕಜ್ಮಾ ತಮ್ಮ ಸಿನೆಮಾ “ಒನ್ ಮ್ಯಾನ್ ಶೋ: ದಿ ಮೂವಿ’ ಯಲ್ಲಿ ಅಡಗಿರುವ ಕೋಡ್‌ವೊಂದರ ಅರ್ಥ ವಿವರಿಸುವ ಸ್ಪರ್ಧೆ ಆಯೋಜಿಸಿದ್ದರು. ಅದರಲ್ಲಿ ಗೆದ್ದ ವ ರಿಗೆ 8.30 ಕೋಟಿ ರೂ. ಬಹು ಮಾನವನ್ನೂ ಘೋಷಿಸಿದ್ದರು. ಆದರೆ, ಸ್ಪರ್ಧ ಕಷ್ಟವಾಗಿದ್ದ ಕಾರಣ ನೋಂದಣಿ ಮಾಡಿಕೊಂಡವರಲ್ಲಿ ಯಾರಿ ಗೂ ಗೆಲ್ಲಲು ಆಗಲಿಲ್ಲ. ಹೀಗಾ ಗಿ, ಕಜ್ಮಾ ಬಹುಮಾನದ ಮೊತ್ತವನ್ನು ಸ್ಪರ್ಧಾಕಾಂಕ್ಷಿಗಳಿಗೇ ಹಂಚಲು ನಿರ್ಧರಿಸಿದ್ದಾರೆ.
ಅದರಂತೆ, ಅವರೆಲ್ಲರಿಗೂ ಇಮೇಲ್ ಕಳುಹಿಸಿ, ಹಣ ಪಡೆಯಲು ಲೈಸಾ ಮತ್ತು ಲ್ಯಾಬೆಮ್ ಪ್ರದೇಶದ ಸಮೀಪದ ಹೊಲಕ್ಕೆ ಬರುವಂತೆ ಸೂಚಿಸಿದ್ದಾರೆ. ಹೇಳಿದ ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್‌ನಲ್ಲಿ ಬಂದು ಕಜ್ಮಾ 8.30 ಕೋಟಿ ರೂ. ಮೊತ್ತದ ನೋಟುಗಳನ್ನು ಕೆಳಕ್ಕೆ ಎಸೆದಿದ್ದಾರೆ.
