ಚುನಾವಣೆ ಬಳಿಕ ಸರ್ಕಾರಿ ನೌಕರರಿಗೆ ತುಟ್ಟಿ ಭತ್ತೆ : ಸಿ.ಎಸ್‌.ಷಡಾಕ್ಷರಿ

ಬೆಂಗಳೂರು:

    ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಜ್ಯ ಸರಕಾರಿ ನೌಕರರಿಗೆ ತುಟ್ಟಿ ಭತ್ತೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಚುನಾವಣ ಆಯೋಗ ತಿಳಿಸಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿದ್ದಾರೆ.

    ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಷಡಾಕ್ಷರಿ ಅವರು, ಮೇ 13ರಂದು ರಾಜ್ಯದಲ್ಲಿ ಚುನಾವಣ ಸಂಹಿತೆ ಕೊನೆಗೊಳ್ಳಲಿದೆ. ಬಳಿಕ ಶೇ.4ರಷ್ಟು ತುಟ್ಟಿ ಭತ್ತೆಯ ಆದೇಶವನ್ನು ಈ ವರ್ಷದ ಜನವರಿ 1ರಿಂದಲೇ ಅನ್ವಯ ಆಗುವಂತೆ ಆರ್ಥಿಕ ಇಲಾಖೆ ಆದೇಶ ಹೊರಡಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಎ. 1ರಿಂದ ಶೇ.17ರಷ್ಟು ಮಧ್ಯಾಂತರ ಪರಿಹಾರ ಮೊತ್ತವನ್ನು ಎಪ್ರಿಲ್‌ -2023ರ ವೇತನದಲ್ಲಿ ಸೆಳೆಯಲು ಎಚ್‌ಆರ್‌ಎಂಎಸ್‌ ಅವಕಾಶ ಕಲ್ಪಿಸಿದ್ದು, ಸರಕಾರಿ ನೌಕರರು ಎಪ್ರಿಲ್‌ -2023ರ ತಿಂಗಳ ವೇತನದಲ್ಲಿ ಮಧ್ಯಾಂತರ ಪರಿಹಾರ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap