ಲೋಕಸಭಾ ಚುನಾವಣೆ : ಲೋಹದ ಹಕ್ಕಿಗೆ ಹೆಚ್ಚಿದ ಡಿಮ್ಯಾಂಡ್‌ …!

ನವದೆಹಲಿ 

    ದೇಶದಲ್ಲಿ ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಈ ನಡುವೆ ವಿಮಾನಗಳಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದಂತೆ ಬಾಡಿಗೆ ವಿಮಾನ ಹಾಗೂ ಕಾಪ್ಟರ್‌ಗೆ ದರ ಕೂಡ ಹೆಚ್ಚಾಗಿದೆ.

     ಅಭ್ಯರ್ಥಿಗಳು ಎಲೆಕ್ಷನ್ ಅಖಾಡದಲ್ಲಿ ಮತದಾರರ ಮನ ಸೆಳೆಯಲು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇದೇ ವೇಳೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಭೇಟಿ ನೀಡಲು ಅಭ್ಯರ್ಥಿಗಳು ಬಾಡಿಗೆ ವಿಮಾನ ಹಾಗೂ ಕಾಪ್ಟರ್‌ಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ವಿಮಾನ ಹಾರಾಟ ದೇಶದಲ್ಲಿ ಜೋರಾಗಿದೆ.

    ನಾಯಕರ ಬಿರುಸಿನ ಪ್ರಚಾರದ ಬಿಸಿ ಖಾಸಗಿ ವಿಮಾನ ಹಾಗೂ ಹೆಲಿಕಾಪ್ಟರ್‌ಗಳಿಗೂ ತಟ್ಟಿದ್ದು, ಹೀಗಾಗಿ ಕೆಲ ವಲಯದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಸಾಮಾನ್ಯ ಅವಧಿಗೆ ಹೋಲಿಸಿದರೆ ಎಲೆಕ್ಷನ್‌ ಹೊತ್ತಲ್ಲಿ ಶೆ.40ರಷ್ಟು ವಿಮಾನಗಳಿಗೆ ಡಿಮ್ಯಾಂಡ್ ಹೆಚ್ಚಳವಾಗಿದೆ. ಬಾಡಿಗೆ ದರವೂ ದುಪ್ಪಟ್ಟಾಗಿದೆ. ಅಚ್ಚರಿ ಅಂದರೆ ಚಾರ್ಟರ್ಡ್ ವಿಮಾನಗಳಿಗೆ ಗಂಟೆಗೆ 4.5 ಲಕ್ಷ ರೂಪಾಯಿಯಿಂದ 5.25 ಲಕ್ಷ ರೂಪಾಯಿವರೆಗೆ ಹಾಗೂ ಹೆಲಿಕಾಪ್ಟರ್‌ಗೆ 1.5 ಲಕ್ಷ ರೂಪಾಯಿಯಿಂದ 3.5 ಲಕ್ಷ ರೂಪಾಯಿ ಬಾಡಿಗೆ ದರ ನಿಗದಿಯಾಗಿದೆ.

    ಲೋಕಸಭಾ ಚುನಾವಣಾ ಪ್ರಚಾರಕ್ಕೆ ಸ್ಟಾರ್‌ಕ್ಯಾಂಪೇನರ್‌ಗಳು ಹಾಗೂ ರಾಜಕೀಯ ಪಕ್ಷದ ನೇತಾರರು, ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಪದೇ ಪದೇ ದೇಶದಾದ್ಯಂತ ಸಂಚರಿಸುವ ಅವಶ್ಯಕತೆಯಿರುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಖಾಸಗಿ ಜೆಟ್‌ಗಳ ಮೊರೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ.

    ಈ ಕಾರಣಕ್ಕಾಗಿ ಖಾಸಗಿ ಜೆಟ್‌ ವಿಮಾನಗಳ ಬೇಡಿಕೆಯ ಹಿಂದಿನ ಎಲೆಕ್ಷನ್‌ಗಳಿಗಿಂತ ಈ ಬಾರಿ ಶೇ.30 ರಿಂದ 40ರಷ್ಟು ಹೆಚ್ಚಳವಾಗಿದೆ. ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆಯಿದೆ ಎನ್ನುವುದು ಮೂಲಗಳ ಮಾಹಿತಿ, ತಜ್ಞರ ಪ್ರಕಾರ ಈ ಬಾರಿ ಶೇ.15 ರಿಂದ 20ರಷ್ಟು ಖಾಸಗಿ ಜೆಟ್ ಸಂಸ್ಥೆಗಳ ಮಾಲೀಕರು ಹೆಚ್ಚು ಲಾಭಗಳಿಸಬಹುದು.

   ಭಾರತದ ಹಲವು ರಾಜ್ಯಗಳಲ್ಲಿ ಖಾಸಗಿ ಜೆಟ್‌ಗಳಿಗೆ ನಾಯಕರಿಂದ ಬೇಡಿಕೆ ಹೆಚ್ಚಾಗಿದೆ. ಅದರಲ್ಲಿಯೂ ವಿಶೇಷವಾಗಿ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಆಂಧ್ರ ಪ್ರದೇಶ ರಾಜ್ಯದಲ್ಲಿ ತುಸು ಹೆಚ್ಚೇ ಡಿಮ್ಯಾಂಡ್ ಸೃಷ್ಟಿಯಾಗಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾದ ಮಾಹಿತಿಯ ಪ್ರಕಾರ, 2029-20 ಅವಧಿಯಲ್ಲಿ ಬಿಜೆಪಿ 250 ಕೋಟಿ ರೂಪಾಯಿ ಹಣವನ್ನು ಖಾಸಗಿ ಜೆಟ್‌ಗಳಿಗೆ ವೆಚ್ಚ ಮಾಡಿತ್ತು. ಕಾಂಗ್ರೆಸ್‌ 126 ಕೋಟಿ ರೂಪಾಯಿ ಹಣವನ್ನು ಚುನಾವಣಾ ಪ್ರಚಾರದ ಹೊತ್ತಲ್ಲಿ ಖಾಸಗಿ ಜೆಟ್‌ಗಳಿಗೆ ಖರ್ಚು ಮಾಡಿತ್ತು.

    ಹಿಂದಿನ ದರಕ್ಕೆ ಹೋಲಿಸಿದರೆ ಈಗ ದುಪ್ಪಟ್ಟು ದರವಾಗಿದೆ. ಸಾಮಾಣ್ಯವಾಗಿ ಖಾಸಗಿ ಜೆಟ್‌ ದರವನ್ನು ಗಂಟೆಯ ಆಧಾರದಲ್ಲಿ ನಿಗಧಿ ಪಡೆಸಲಾಗುತ್ತದೆ. ಬೇಡಿಕೆ ಹೆಚ್ಚಳವಾಗುತ್ತಿದ್ದಂತೆ ಖಾಸಗಿ ಜೆಟ್‌ಗಳು ಗಂಟೆಗೆ ನಿಗದಿ ಪಡಿಸುವ ದರದಲ್ಲಿಯೂ ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಲ್ಲಿ ಸಿಂಗಲ್ ಎಂಜಿನ್ ಹೆಲಿಕಾಪ್ಟರ್‌ಗೆ ದರ 80-90 ಸಾವಿರ ರೂಪಾಯಿ, ಡಬಲ್ ಇಂಜಿನ್ ಹೆಲಿಕಾಪ್ಟರ್‌ ದರ 1.5 ರಿಂದ 1.7 ಲಕ್ಷ ರೂಪಾಯಿ ತನಕ ಇರುತ್ತಿತ್ತು. ಆದರೆ ಚುನಾವಣೆ ಸಂದರ್ಭದಲ್ಲಿ ಸಿಂಗಲ್ ಎಂಜಿನ್ ಹೆಲಿಕಾಪ್ಟರ್‌ ದರ 1.5 ಲಕ್ಷ ರೂಪಾಯಿ, ಡಬಲ್ ಎಂಜಿನ್‌ಗಳ ದರ 3.5 ಲಕ್ಷ ರೂಪಾಯಿ ಹೆಚ್ಚಳವಾಗಿದೆ. ಒಂದು ಚಾರ್ಟರ್ಡ್ ವಿಮಾನಕ್ಕೆ 4.5 ರಿಂದ 5.25 ಲಕ್ಷ ರೂಪಾಯಿ ತನಕ ನಿಗದಿ ಆಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap