ಬೆಂಗಳೂರು :
ಇಂದು ರಾಜ್ಯಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದೇ ಹವಾ. ಹೌದು ಡೆವಿಲ್ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಸಿನಿ ಪ್ರಿಯರು ಸೇರಿದಂತೆ ದರ್ಶನ್ ಫ್ಯಾನ್ಸ್ , ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ದರ್ಶನ್ ಮಾಸ್ ಎಂಟ್ರಿ, ದರ್ಶನ್ ಲುಕ್, ದರ್ಶನ್ ಸ್ಟೈಲ್‌ಗೆ ಕೊಂಡಾಡಿದ್ದಾರೆ ಅಭಿಮಾನಿಗಳು. ಈಗಾಗಲೇ ಎಲ್ಲಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಎಕ್ಸ್‌ನಲ್ಲಿ ದರ್ಶನ್ ಸಿನಿಮಾ ಬಗ್ಗೆ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೊದಲ ಹಾಫ್ ಹೇಗಿದೆ? ನೋಡಿದವರು ಏನಂದರು?
ಫಸ್ಟ್ ಹಾಫ್ ಮುಕ್ತಾಯವಾಗಿದೆ. ಕೃಷ್ಣ & ಧನುಷ್ ಎಂಬ ಎರಡು ಪಾತ್ರಗಳಲ್ಲಿ ದರ್ಶನ್ ನಟಿಸಿದ್ದಾರೆ. ಎರಡು ಬೇರೆ ಬೇರೆ ಶೇಡ್ ನಲ್ಲಿ ಡಿ ಬಾಸ್ ನಟಿಸಿ ಅಬ್ಬರಿಸಿದ್ದಾರೆ. ಗಿಲ್ಲಿ ನಟ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡು ನಗಿಸುತ್ತಾರೆ ಅಚ್ಯುತ್ ಕುಮಾರ್ ಅವರದ್ದು ಬಹಳ ಮಹತ್ವದ ಪಾತ್ರ.ಇದೊಂದು ಪೊಲಿಟಿಕಲ್ ಥ್ರಿಲರ್ ಸಿನಿಮಾ .
ಬಹಳ ವರ್ಷಗಳ ನಂತರ ಪೊಲಿಟಿಕಲ್ ಕಂಟೆಟ್ ಇರುವ ಸಿನಿಮಾದಲ್ಲಿ ದರ್ಶನ್ ಮಿಂಚಿದ್ದಾರೆ. ಇದ್ರೆ ನೆಮ್ಮದಿಯಾಗಿರಬೇಕು ಸಾಂಗ್ ನೋಡಲು ಚೆಂದ. ರಚನಾ ರೈ ತೆರೆ ಮೇಲೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಫ್ಯಾನ್ಸ್‌ಗೆ ಹಬ್ಬದಂತಿದೆ ಈ ಸಿನಿಮಾ ಸೆಕೆಂಡ್ ಹಾಫ್ ನಲ್ಲಿ ಇನ್ನಷ್ಟು ಟ್ವಿಸ್ಟ್ ಗಳು ಇವೆ ಎಂದು ಹೇಳಿಕೊಂಡಿದ್ದಾರೆ.
ಇಂಟರ್ ವಲ್ ಬ್ಲಾಕ್‌ಬಸ್ಟರ್. ಮೊದಲಾರ್ಧ ಸೂಪರ್, ಅತ್ಯುತ್ತಮ ಪ್ರದರ್ಶನ ಅಂತ ಒಬ್ಬರು ಬರೆದುಕೊಂಡಿದ್ದಾರೆ. ಇನ್ನೂ ವಿಶೇಷ ಅಂದರೆ ದರ್ಶನ್ ಎಂಟ್ರಿ ಆಗುವಾಗ, ಅವರ ಟ್ಯಾಟೂ ಪ್ರದರ್ಶನ. ಅದನ್ನ ನೋಡಿ ಸಖತ್ ಥ್ರಿಲ್ ಆಗಿದ್ದಾರೆ ಫ್ಯಾನ್ಸ್. ದರ್ಶನ್ ಆ ಒಂದು ಎಂಟ್ರಿ ನೋಡಿದರೆ ಕಳೆದು ಹೋಗೋದು ಗ್ಯಾರಂಟಿ ಅಂತ ಬರೆದುಕೊಂಡಿದ್ದಾರೆ.ಮತ್ತೊಬ್ಬರು, ಕುಟುಂಬ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗುತ್ತದೆ. ಬಾಸ್ ನಟನೆ ದೊಡ್ಡ ಪರದೆಯ ಮೇಲೆ ನೋಡಲು ಒಂದು ಅದ್ಭುತ ಅನುಭವ ಎಂದು ಬರೆದುಕೊಂಡಿದ್ದಾರೆ.ಚಿತ್ರದ ಒಟ್ಟು ಅವಧಿ 2 ಗಂಟೆ 49 ನಿಮಿಷ ಇದೆ.
ಇನ್ನು ಜೈಲಿಂದಲೇ ದರ್ಶನ್ ತಮ್ಮ ಅಭಿಮಾನಿಗಳಿಗೆ ತಮ್ಮ ಮನದ ಮಾತುಗಳನ್ನು ತಮ್ಮ ಪತ್ನಿ ವಿಜಯಲಕ್ಷ್ಮಿ ಮೂಲಕ ತಲುಪಿಸಿದ್ದು ”ಡೆವಿಲ್” ಅಬ್ಬರಕ್ಕೆ ಬಾಕ್ಸಾಫೀಸ್‌ನಲ್ಲಿ ಯಾವೆಲ್ಲಾ ದಾಖಲೆ ಪುಡಿಪುಡಿಯಾಗಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.








