ನಾಯಕನಹಟ್ಟಿ :
ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸರಿತಾಬಾಯಿ, ರಾಜನಾಯ್ಕ ಅಥವಾ ಸಂತೋಷ್ ನಾಯ್ಕನ ಈ ಮೂವರಲ್ಲಿ ಅಧ್ಯಕ್ಷರು ಯಾರು? ಸಾರ್ವಜನಿಕರಿಗೆ ಸದಸ್ಯರುಗಳಿಗೆ ಗೊಂದಲ ಉಂಟಾಗಿದೆ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲಿ ಸದಸ್ಯ ಕಾಟಯ್ಯ ಆಕ್ರೋಷ ವ್ಯಕ್ತಪಡಿಸಿದರು.
ಸಮೀಪದ ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲಿ ಸದಸ್ಯ ಕಾಟಯ್ಯ ಸರ್ವ ಸದಸ್ಯರುಗಳು ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕೊಠಡಿಗೆ ಬೀಗ ಜಡಿಯಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಕೆಲಸ ಕಾರ್ಯ ಕೈಗೊಂಡರು ಸದಸ್ಯರ ಗಮನಕ್ಕೆ ತಾರದೆ ಒಬ್ಬರೇ ಸರ್ವಾಧಿಕಾರಿ ನಡೆಸುತ್ತಾರೆ. ಸಾಮಾನ್ಯ ಸಭೆಯಲ್ಲಿ ಕೈಗೊಂಡತ ಕಾರ್ಯಗಳನ್ನು ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷತೆ ಸರಿತಾಬಾಯಿ ಕಾರ್ಯರೂಪಕ್ಕೆ ತರದೆ ಬೇಜವಬ್ದಾರಿ ನಿರ್ವಹಿಸುತ್ತಿದ್ದಾರೆ.
ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಸರಿತಾಬಾಯಿ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಅವರನ್ನು ವಜಾ ಮಾಡಬೇಕೆಂದು ಸರ್ವ ಸದಸ್ಯರುಗಳು ಒಪ್ಪಿಗೆ ಸೂಚಿಸಿದ್ದಾರೆ. ಅವರ ಅಣ್ಣನಾದ ಸಂತೋಷ್‌ನಾಯ್ಕ ನಮ್ಮ ಗ್ರಾಮ ಪಂಚಾಯಿತಿ ಹಿನ್ನಡೆಗೆ ಕಾರಣಬೂತರಾಗಿರುತ್ತಾರೆ. ಪದೇ ಪದೇ ಗ್ರಾಮ ಪಂಚಾಯಿತಿಗೆ ಬಂದು ನಾನು ಅಧ್ಯಕ್ಷ ಅಂತ ಹೇಳಿಕೊಳ್ಳುತ್ತಾನೆ. ಆದ್ದರಿಂದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರೆ.
ಸರಿತಾಬಾಯಿ ೬೪,೪೦೦/-, ಸಂತೋಷ್‌ನಾಯ್ಕ ೭೨,೫೦೦/- ಕಳೆದವಾರ ದೊಡ್ಲಮಾರಮ್ಮ ಜಾತ್ರೆಗೆ ಸದಸ್ಯರಿಗೆ ಮಾಹಿತಿ ತಿಳಿಸದೆ ನಮ್ಮ ಕೈಯಿಂದ ಖರ್ಚು ಮಾಡಿದ್ದೇನೆ ಎಂದು ದಾಖಲೆಗಳನ್ನು ತೊರಿಸದೆ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ ಎಂದು ಸದಸ್ಯರುಗಳಿಗೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಅವರು ಮಾತನಾಡಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲಿ ಸದಸ್ಯ ಡಾ.ಕಾಟಲಿಂಗಯ್ಯ ಮಾತನಾಡಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾಬಾಯಿ ಗಾಳಿಗೆ ತೂರಿ ತನ್ನ ಇಚ್ಚೆಯಂತೆ ತನ್ನ ಅಣ್ಣನಾದ ಸಂತೋಷ್‌ನಾಯ್ಕ ಹೇಳಿದ ಹಾಗೆ ಕೇಳುತ್ತಿದ್ದಾರೆ.
ಪದೇ ಪದೇ ಗ್ರಾಮ ಪಂಚಾಯಿತಿ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ಹಲವಾರು ಸದಸ್ಯರುಗಳು ವಾರ್ಡ್ನ ಸಮಸ್ಯೆಗಳು ಸಾಕಷ್ಟು ಇವೆ. ಸಾಮಾನ್ಯ ಸಭೆಯಲ್ಲಿ ಪ್ರಸ್ಥಾಪಿಸಿದ್ದಾಗ ಅವಸರದಲ್ಲಿ ಬೇರೆಕಡೆ ಸಭೆ ಇದೆ ಎಂದು ಹೇಳಿ ಅರ್ಧಕ್ಕೆ ಸಾಮಾನ್ಯ ಸಭೆಯನ್ನು ಮೊಟಕುಗೊಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾಬಾಯಿಯವರನ್ನು ಅತೀ ಶೀಘ್ರದಲ್ಲೆ ಅವರನ್ನು ವಜಾ ಮಾಡಿ ಹೊಸ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಮಾಜಿ ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ ರಾಜಣ್ಣ, ಟಿ.ಕಾಟಯ್ಯ, ಡಾ.ಕಾಟಲಿಂಗಯ್ಯ, ಗುರುಮೂರ್ತಿ, ಸೂರಮ್ಮ, ಅಕ್ಕಮ್ಮ, ಶಿವರುದ್ರಮ್ಮ, ರಾಯಮ್ಮ, ಸುಮ, ಹಾಗೂ ಸರ್ವ ಸದಸ್ಯರು ಇದ್ದರು.
