ಮೂಲ ಸೌಕರ್ಯವಿಲ್ಲದ ಭಾರತೀಯ ರೈಲ್ವೆ …!

ನವದೆಹಲಿ

     ಆದರೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಯಾವುದೇ ಮೂಲಸೌಕರ್ಯವಿಲ್ಲ ಎಂದು ನವದೆಹಲಿಯಲ್ಲಿ ವಿದ್ಯುತ್ತಾಘಾತದಿಂದ ಮೃತರಾದ ಮಹಿಳೆಯ ತಂದೆಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.

      ಅವರ ಕುಟುಂಬವು ರೈಲ್ವೆಯ ಹೊಸ, ಅತ್ಯಾಧುನಿಕ ರೈಲಿನಲ್ಲಿ ಚಂಡೀಗಢಕ್ಕೆ ಹೋಗುತ್ತಿತ್ತು. ಭಾನುವಾರ ನವದೆಹಲಿಯ ರೈಲು ನಿಲ್ದಾಣದಲ್ಲಿ ವಿದ್ಯುದಾಘಾತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಅಪಘಾತ ನಡೆದಾಗ ಅವರ ನೆರವಿಗೆ ಆ್ಯಂಬುಲೆನ್ಸ್ ಆಗಲಿ, ವೈದ್ಯರು ಅಥವಾ ಪೊಲೀಸರು ಸ್ಥಳದಲ್ಲಿ ಇಲ್ಲದ ಕಾರಣ ಯಾವುದೇ ಸಹಾಯ ಇಲ್ಲ ಪ್ರಥಮ ಚಿಕಿತ್ಸೆ ಸಿಗಲಿಲ್ಲ.

    ಈ ಬಗ್ಗೆ ರೈಲ್ವೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಮಗೆ ತಿಳಿಸಿದರು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ವ್ಯವಸ್ಥೆ ಸುಧಾರಿಸುತ್ತಿಲ್ಲ. ನಾವು ವಂದೇ ಭಾರತ್‌ನಂತಹ ಉತ್ತಮ ಗುಣಮಟ್ಟದ ರೈಲುಗಳನ್ನು ತಯಾರಿಸುತ್ತಿದ್ದೇವೆ. ಆದರೆ ನಿಲ್ದಾಣಗಳಲ್ಲಿ ಸರಿಯಾದ ಮೂಲಸೌಕರ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಚೋಪ್ರಾ ಹೇಳಿದರು. 

    ಒಂದೇ ವೇದಿಕೆಯಲ್ಲಿ ಏಟು-ತಿರುಗೇಟು; ಬೊಮ್ಮಾಯಿ-ಯತ್ನಾಳ್‌ ನಡುವೆ ವಾಕ್ಸಮರ; ಕಾರಣವೇನು ಗೊತ್ತಾ? ಈ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು. ದೂರು ನೀಡಿದ್ದೇವೆ ಎಂದು ಹೇಳಿದರೂ ಕ್ರಮ ಕೈಗೊಂಡಿಲ್ಲ. ನಮ್ಮ ವ್ಯವಸ್ಥೆಗಳಲ್ಲಿ ಏಕೆ ಸುಧಾರಣೆಯಾಗಿಲ್ಲ? ಏಕೆ ಸರಿಯಾದ ತಪಾಸಣೆ ಮಾಡುತ್ತಿಲ್ಲ? ಏಕೆ ತೆರೆದ ವಿದ್ಯುತ್‌ ತಂತಿಗಳು ಬಿದ್ದಿವೆ? ಮಾಧ್ಯಮಗಳಲ್ಲಿ ತೋರಿಸಿದಾಗ ಮಾತ್ರ ಏಕೆ ಕೆಲಸವಾಗುತ್ತದೆ? ನಮಗೆ ಸರ್ಕಾರದ ಪರಿಹಾರದ ಹಣ ಬೇಡ.

     ಇಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಬೇಕಾಗಿದೆ, ನಮ್ಮ ಕುಟುಂಬವು ಕಾನೂನು ಹೋರಾಟಕ್ಕೆ ಸಿದ್ಧವಾಗಿದೆ ಎಂದು ಅವರು ಹೇಳಿದರು. ಪೂರ್ವ ದೆಹಲಿಯ ಪ್ರೀತ್ ವಿಹಾರ್‌ನಲ್ಲಿ ವಾಸವಾಗಿರುವ ಶಿಕ್ಷಕಿ ಸಾಕ್ಷಿ ಅಹುಜಾ ಅವರು ರೈಲು ನಿಲ್ದಾಣದ ನಿರ್ಗಮನ ಸಂಖ್ಯೆ ಒಂದರ ಪಕ್ಕದ ಕೊಳಚೆ ಗುಂಡಿ ಬಳಿ ವಿದ್ಯುತ್ ಕಂಬದ ಬಳಿ ನಿಂತುಕೊಂಡಿದ್ದರು. ಆಗ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ತೆರೆದ ವೈರಿಂಗ್‌ನೊಂದಿಗೆ ಎರಡು ಸೂಚನಾ ಫಲಕಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಕಿ ಸಾಕ್ಷಿ ಅಹುಜಾ ಅವರಿಗೆ ಇಬ್ಬರು ಮಕ್ಕಳಿದ್ದರು, 9 ವರ್ಷದ ಮಗ ಮತ್ತು 7 ವರ್ಷದ ಮಗಳು.

    ರಜಾದಿನಗಳಲ್ಲಿ ಕುಟುಂಬದ ಜೊತೆ ಇರಲು ಬಂದಿದ್ದರು ಘಟನೆಯಲ್ಲಿ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ನಾನು ಕಾರನ್ನು ನಿಲ್ಲಿಸುತ್ತಿದ್ದೆ. ನನ್ನ ಮಗಳಿಗೆ ಬ್ಯಾಗ್‌ಗಳು ಮತ್ತು ಮಕ್ಕಳನ್ನು ಕರೆದುಕೊಂಡು ರೈಲಿನ ಕಡೆಗೆ ಹೋಗುವಂತೆ ಹೇಳಿದೆ. ಆದರೆ ಅಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ಅವಳು ಕೊಚ್ಚೆಯಲ್ಲಿ ಹೆಜ್ಜೆ ಹಾಕಿದಳು. ಆಗ ವಿದ್ಯುತ್ ಆಘಾತಕ್ಕೊಳಗಾದಳು. ಹೈ ಟೆನ್ಶನ್ ವೈರ್‌ 440-ವೋಲ್ಟ್ ಇತ್ತು ಎಂದು ಆಕೆ ತಂದೆ ಹೇಳಿದರು. ಘಟನೆ ಬಳಿಕ ಕುಟುಂಬವು 2.5 ಕಿಮೀ ದೂರದಲ್ಲಿರುವ ಹತ್ತಿರದ ಆಸ್ಪತ್ರೆಗೆ ತಲುಪಲು ಒಂದು ಗಂಟೆ ತೆಗೆದುಕೊಂಡಿತ್ತು.

    ನಾವು ರೈಲು ನಿಲ್ದಾಣದಿಂದ ಹೊರಬರಲು 30-40 ನಿಮಿಷಗಳನ್ನು ತೆಗೆದುಕೊಂಡೆವು. ನಿರ್ಗಮನ ದ್ವಾರಗಳು ವಾಹನಗಳಿಂದ ತುಂಬಿದ್ದವು. ಹೀಗಾಗಿ ನನ್ನ ಮಗಳು ತೀರಿಕೊಂಡಳು ಅವಳಿಗೆ ಚಿಕ್ಕ ಮಕ್ಕಳಿದ್ದಾರೆ. ಈಗ ನಾವು ಏನು ಮಾಡುವುದು ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap