ಯಾವುದೇ ಮಗು ಕೇವಲ ಆಸಕ್ತಿ ವಹಿಸುತ್ತಿದೆ ಎಂದ ಮಾತ್ರಕ್ಕೆ ಅದು ಗುರಿಯಂದು ಪರಿಗಣಿಸಬಾರದು. ಮಗು ತನ್ನ ಬುದ್ದಿ ಪ್ರಬುದ್ಧತೆಗೆ ಬಂದಂತೆಲ್ಲಾ ಗುರಿ ಬದಲಾಗುತ್ತಾ ಹೋಗುತ್ತದೆ. ಅಂತಿಮವಾಗಿ ಮಗುವಿನ ಆಸಕ್ತಿ ಯಾವುದು ಪ್ರಬಲವಾಗಿ ಕಂಡು ಬರುತ್ತದೆಯೋ ಅದೇ ಗುರಿಯಾಗಿರುತ್ತದೆ.
ಗುರಿ ಬದಲಾಗುವ ಸಮಯ
ಮಕ್ಕಳ ಗುರಿ ಆ ಮಗುವಿನ ಶೈಕ್ಷಣಿಕ ಸಾಮರ್ಥ್ಯವನ್ನೂ ಅವಲಂಬಿಸಿರುತ್ತದೆ. ಹತ್ತನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೂ ಬದಲಾಗುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ವೈದ್ಯನಾಗ ಬಯಸುವ ವಿದ್ಯಾರ್ಥಿ ಅಂಕಗಳ ಕೊರತೆಯಿಂದ ಇನ್ನಾವುದೋ ಕಾರಣದಿಂದ ವಾಣಿಜ್ಯ ಶಾಸ್ತ್ರವನ್ನು ಆಯ್ಕೆ ಮಾಡಿಕೊಂಡರೆ ಸಹಜವಾಗಿ ಗುರಿ ಬದಲಾಗುತ್ತದೆ.
ಪ್ರಧಾನಿ ಮೋದಿ ಭೇಟಿಗೆ ಕ್ಷಣಗಣನೆ; ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಾಳಿ, ಓರ್ವ ಯೋಧ ಹುತಾತ್ಮ, ,4 ಮಂದಿಗೆ ಗಾಯ
ಪಿಯುಸಿ ಪರೀಕ್ಷೆಯೂ ಅಂತಿಮ
ಪಿಯುಸಿ ಪರೀಕ್ಷೆ ಪಾಸಾದ ನಂತರ ತಮ್ಮ ಗುರಿ ಬದಲಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಉನ್ನತ ವ್ಯಾಸಂಗವನ್ನು ಪಡೆಯಲು ಬೇಕಿರುವ ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಿದ್ದು ಅದರ ಅಂಕಗಳು ಅವರ ಗುರಿಯನ್ನ ನಿರ್ಧಾರ ಮಾಡುತ್ತದೆ. ಕೆಲವೊಮ್ಮೆ ಒಳ್ಳೆ ಅಂಕಗಳಿಸಿದ್ದರೂ ಅವರು ಇಷ್ಟ ಪಟ್ಟ ಶಿಕ್ಷಣ ಸಂಸ್ಥೆಗಳು ಹಾಗೂ ಕೋರ್ಸ್‍ಗಳಿಗೆ ಸೀಟ್ ಸಿಗದೆ ಕೂಡ ಗುರಿ ಬದಲಾಯಿಸಿಕೊಳ್ಳುವ ಉದಾಹರಣೆ ಇದೆ.
ಕೆಲವೊಂದು ವಿದ್ಯಾರ್ಥಿಗಳು ತಾವು ಬಯಸಿದ ಕೋರ್ಸ್ ಸಿಗದೆ ಸಿಕ್ಕ ಕೋರ್ಸ್‍ಗಳನ್ನು ತೆಗೆದುಕೊಂಡು ತನ್ನ ಗುರಿಸಾಧಿಸಿರುವ ಉದಾಹರಣೆ ಇರುತ್ತದೆ. ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಶೇ.5 ವಿದ್ಯಾರ್ಥಿಗಳು ತಾವು ಅಂದುಕೊಂಡಿದ್ದ ಸೀಟು ಸಿಗದೆ ಖಿನ್ನತೆಗೆ ಒಳಗಾಗಿ ಅಪಾಯಕಾರಿ ಮನಸ್ಥಿತಿಯನ್ನೂ ಹೊಂದುವುದು ಕೂಡ ಕಂಡುಬರುತ್ತದೆ.
ಹಿಜಾಬ್ ವಿವಾದ; ಪಿಯು ಪರೀಕ್ಷೆ ಬರೆಯದೆಯೇ ವಾಪಸ್ ಆದ ವಿದ್ಯಾರ್ಥಿನಿಯರು
ಪೋಷಕರು ಕೂಡ ಪ್ರತಿ ಹಂತದಲ್ಲೂ ಕೂಡ ಗುರಿಯ ಕಡೆಗೆ ಮಕ್ಕಳನ್ನು ಪ್ರೇರೇಪಿಸಬೇಕಾಗುತ್ತದೆ ಮಕ್ಕಳು ಅಂದುಕೊಂಡಿದ್ದು ಸಿಗಲಿಲ್ಲ ಎಂದು ಖಿನ್ನತೆಗೆ ಒಳಗಾದರೆ ಅವರಿಗೆ ಪ್ರೇರೇಪಣೆ ನೀಡಿ ಮತ್ತೆ ಗುರಿಯಡೆಗೆ ಸಾಗುವಂತೆ ಮಾಡಬೇಕಾಗಿದೆ. ಶಿಕ್ಷಕರು ಹಾಗೂ ಮಾರ್ಗದರ್ಶಕರ ಪಾತ್ರವೂ ಇಲ್ಲಿ ಮುಖ್ಯವಾಗಿರುತ್ತದೆ.
ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಿ
ಪ್ರತಿಯೊಂದು ಮಗುವು ನಮ್ಮ ಕನ್ನಡಿ ಮೊದಲು ನಾವು ಮಕ್ಕಳ ಮುಂದೆ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಏಕೆಂದರೆ ಮಕ್ಕಳು ನಮ್ಮನ್ನು ನೋಡುತ್ತಾ ಕಲಿಯುತ್ತಾರೆ. ಅವರ ಮುಂದೆ ಹಿರಿಯರು ಬಂದಾಗ ಅವರಿಗೆ ಗೌರವ ಕೊಡುವುದು ಅವರ ಉಪಚಾರ ಮಾಡಬೇಕು. ನಾವು ಬದಲಾದರೆ ಖಂಡಿತ ಮಕ್ಕಳು ಕೂಡ ಬದಲಾಗ್ತಾರೆ. ಇದು ನಿಮ್ಮ ಗಮನದಲ್ಲಿರಲಿ.
ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ : ಇಂದಿನಿಂದ ಪುನೀತ್ ಧ್ವನಿಯಲ್ಲಿ `ಜೇಮ್ಸ್’ ರೀ ಎಂಟ್ರಿ!
ಕುಟುಂಬಸ್ಥರ ಕುರಿತು ಮಕ್ಕಳ ಮುಂದೆ ಮಾತು ಬೇಡ
ಯಾರೇ ಕುಟುಂಬಸ್ಥರು ಬಂದರೂ ಅವರು ಬರುವಾಗ ಅವರು ಬಂದು ಹೋದಾಗ ಕುಟುಂಬಸ್ಥರ ಬಗ್ಗೆ ಕೇವಲವಾಗಿ ಮಾತನಾಡಬೇಡಿ. ನೀವು ಅವರನ್ನು ನಿಮ್ಮದೇ ಮನೆಯ ಸಂಬಂಧಿಕರನ್ನು ಆಡಿಕೊಂಡರೆ ಅವರು ಗೌರವ ಕೊಡುವುದನ್ನು ಕಡಿಮೆ ಮಾಡುತ್ತಾರೆ. ಹಾಗಾಗಿ ಯಾವುದೇ ನಕಾರಾತ್ಮಕ ಭಾವನೆ ಬೇಡ. ನಾಟಕೀಯತೆಯನ್ನು ಮಕ್ಕಳು ಬೇಗ ಅನುಕರಿಸುತ್ತಾರೆ ಎನ್ನುವ ಬಗ್ಗೆ ಎಚ್ಚರವಿರಲಿ.
ಅಪರಿಚಿತರ ಬಗ್ಗೆ ಎಚ್ಚರ ನೀಡಿ
ಯಾವುದೇ ಅಪರಿಚಿತರು ಬಂದರೂ ಅವರನ್ನು ಅನುಮಾನದಿಂದ ನೋಡುವ ಭಾವನೆ ಮಕ್ಕಳಿಗೆ ಬರಬೇಕು. ಅವರು ಪರಿಚಯವಾಗಿ ನಮ್ಮ ಕುಟುಂಬದವರು ಅಥವಾ ಸ್ನೇಹಿತರು ಎಂದು ನೀವು ಹೇಳುವ ತನಕ ಅವರನ್ನು ಅನುಮಾನದ ರೀತಿಯಲ್ಲೇ ನೋಡುವುದನ್ನು ಹೇಳಿಕೊಡಿ. ಅಪಚಿತರು ತೋರಿಸುವ ಆಸೆ ಅಮಿಷಗಳ ಬಗ್ಗೆ ಈಗಲೇ ಎಚ್ಚರ ವಹಿಸಿ.
ಉತ್ತಮ ಸಂವಹನವಿರಲಿ
ಯಾವುದೇ ಸಂದರ್ಭ ಬಂದರೂ ಮಕ್ಕಳು ನೇರವಾಗಿ ನಿಮಗೆ ಹೇಳುವುದನ್ನು ರೂಡಿಮಾಡಿಸಿಕೊಡಿ. ನೀವು ಭಯ ತೋರಿಸಿದರೆ ಅವರು ಸತ್ಯಕ್ಕಿಂತ ಸುಳ್ಳಿಗೆ ಹೆಚ್ಚು ಒತ್ತು ಕೊಡುತ್ತಾರೆ. ಹಾಗಾಗಿ ನೀವು ಮಕ್ಕಳಿಗೆ ಸತ್ಯದ ಅರಿವು ಅದನ್ನು ಪ್ರಾಮಾಣಿಕವಾಗಿ ಹೇಳುವ ಸ್ವಾತಂತ್ರ್ಯ ಕಲಿಸಿಕೊಡಿ.
ಸಂಯಮದಿಂದ ವರ್ತಿಸುವುದನ್ನು ಹೇಳಿಕೊಡಿ
ಕುಟುಂಬಸ್ಥರ ಸ್ನೇಹಿತರ ಮನೆಗೆ ಹೋದಾಗ ಮಕ್ಕಳು ಸಂಯಮದಿಂದ ವರ್ತಿಸುವುದನ್ನು ಮೊದಲೇ ಕಲಿಸಿಕೊಡಿ. ಇಲ್ಲವಾದರೆ ಹೋದಲೆಲ್ಲಾ ಕಿರಿಕಿರಿ ಸನ್ನಿವೇಶ ಎದುರಾಗುವಂತೆ ಮಾಡಬಹುದು. ನಿಮ್ಮ ಕೆಲವೊಂದು ವಯಕ್ತಿಕ ವಿಚಾರಗಳನ್ನು ಸ್ನೇಹಿತರ ಮುಂದೆ ಮಕ್ಕಳು ತೆರೆದಿಟ್ಟು ನಗೆಪಾಟೀಲಾಗುವಂತೆ ಮಾಡಿಬಿಡುತ್ತಾರೆ. ಮುಜುಗರದ ಸನ್ನಿವೇಶ ಎದುರಾಗದಂತೆ ಮಕ್ಕಳಿಗೆ ತಿದ್ದಿ.
ಸಂಜಯ್ ಗೌಡ,
ಶಿಕ್ಷಣ ತಜ್ಞರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ