ಕೆಆರ್‌ ಎಸ್‌ ನ ಓಳ ಹರಿವು ಹೆಚ್ಚಳ ….!

ಮೈಸೂರು

    ಕೃಷ್ಣ ರಾಜ ಸಾಗರ ಜಲಾಶಯದ  ಹೆಸರೇ ಹೇಳುವಂತೆ ವಿಶಾಲವಾದ ನೀರಿನ ಸಂಗ್ರಹ ಮಟ್ಟ ಹೊಂದಿರುವ ಆಣೆಕಟ್ಟು. ಕಾವೇರಿ ಜಲಾನಯಶನ ಪ್ರದೇಶಗಳಲ್ಲಿ ಜೀವನದುದ್ದಕ್ಕೂ ಆಸರೆಯಾದ ಈ KRS ಜಲಾಶಯದಲ್ಲಿ ಇಂದು ಬುಧವಾರ  ಒಳಹರಿವು ಮತ್ತಷ್ಟು ಏರಿಕೆ ಆಗಿದೆ.

   ರಾಜ್ಯಾದ್ಯಂತ ಅಲ್ಲಲ್ಲಿ ಭಾರೀ ಮಳೆ ಆಗುತ್ತಿದೆ. ಅದೇ ರೀತಿ ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ ಸೇರಿದಂತೆ ಇನ್ನಿತರ ಕಾವೇರಿ ಕೊಳ್ಳದ ಭಾಗಗಳಲ್ಲಿ ಅತ್ಯಧಿಕ ಮಳೆ ಆಗುತ್ತಿದೆ. ಹೀಗಾಗಿ ಈ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಹೊರ ಹರವಿನ ಪ್ರಮಾಣ ಕಳೆದ ಒಂದು ವಾರಕ್ಕಿಂತ ಕಡಿಮೆ ಆಗಿದೆ.

   ಏಕೆಂದರೆ ಕಾಲುವೆ ಹಾಗೂ ಕಾವೇರಿ ನದಿಗೆ ಡ್ಯಾಂ ನಿಂದ ಹೆಚ್ಚಿನ ನೀರು ಬಿಡುಗಡೆ ಮಾಡಲಾಗುತ್ತಿತ್ತು. ಇದೀಗ ಉತ್ತಮ ಮಳೆ ಆಗಿರುವ ಕಾರಣ ಆಯಾ ಭಾಗದಲ್ಲಿ ನೀರಿನ ಲಭ್ಯತೆ ಇರುವ ಕಾರಣ ಜಲಾಶಯದ ಹೊರ ಹರಿವು ಕಡಿಮೆ ಆಗಿದೆ. ಹಾಗಾದರೆ ಇಂದಿನ ಬುಧವಾರದ ಕೆಆರ್‌ಎಸ್ ನೀರಿನ ಸಂಗ್ರಹ, ಒಳಹರಿವು ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಒಳಹರಿವು 1760 ಕ್ಯೂಸೆಕ್ಸ್‌ಗೆ ಏರಿಕೆ

    ಕೃಷ್ಣ ರಾಜ ಸಾಗರ ಜಲಾಶಯದ ನೀರಿನ ಒಟ್ಟು ಸಾಮರ್ಥ್ಯವು ಒಟ್ಟು 49.452 ಟಿಎಂಸಿ ಇದೆ. ನಿರಂತರವಾಗಿ ಭಾರೀ ಮಳೆ ಆಗುತ್ತಿರುವ ಕಾರಣ ಆಣೆಕಟ್ಟಿನ ಒಳಹರಿವು ಇಂದು 1760 ಕ್ಯೂಸೆಕ್ಸ್‌ಗೆ ಏರಿಕೆ ಆಗಿದೆ. ಅದೇ ರೀತಿ ಹೊರ ಹರಿವು 451 ಕ್ಯೂಸೆಕ್ಸ್ ನಷ್ಟಿದೆ.

    ಈ ಒಟ್ಟು ಹೊರ ಹರಿವು (451 ಕ್ಯೂಸೆಕ್ಸ್) ಪೈಕಿ 401 ಕ್ಯೂಸೆಕ್ಸ್ ಅನ್ನು ಕಾವೇರಿ ನದಿಗೆ ಹಾಗೂ 50 ಕ್ಯೂಸೆಕ್ಸ್ ಜಲಾಶಯದ ನೀರನ್ನು ನಿತ್ಯ ಬಿಡುಗಡೆ ಮಾಡಲಾಗುತ್ತಿದೆ. ಇದೆಲ್ಲ ನೋಡಿದರೆ, ಹೊರ ಹರಿವಿನ ಪ್ರಮಾಣಕ್ಕಿಂತ ಒಳಹರಿವು ಹೆಚ್ಚಿರುವುದು ಗೊತ್ತಾಗುತ್ತದೆ.

    ಇಂದು ಬುಧವಾರ ಜಲಾಶಯದ ನೀರಿನ ಸಂಗ್ರಹಣೆ ಶೇಕಡಾ 27.26ರಷ್ಟು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

ರಾಜ್ಯಕ್ಕೆ 48 ಗಂಟೆ ಭಾರೀ ಮಳೆ

    ನೆನ್ನೆ ರಾಜ್ಯದ ಮಂಗಳೂರು, ಆಗುಂಬೆ, ಶಿವಮೊಗ್ಗ, ಗದಗ, ಕಾರವಾರ ಕಡೆಗಳಲ್ಲಿ ಉತ್ತಮ ಮಳೆ ಆಗಿದೆ. ಉಳಿದೆ ತುಂತುರು ಮಳೆ ಆಗಿದೆ. ಮುಂದಿನ 48 ಗಂಟೆ ಕರ್ನಾಟಕದಲ್ಲಿ ಅತ್ಯಧಿಕ ಮಳೆ ನಿರೀಕ್ಷೆ ಇದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ಈ ಜಿಲ್ಲೆಗಳಿಗೆ ಐಎಂಡಿ ಎರಡು ದಿನ ‘ಹಳದಿ ಎಚ್ಚರಿಕೆ’ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link