ರೇಣುಕ ಸ್ವಾಮಿ ಪ್ರಕರಣ : ತನಿಖಾಧಿಕಾರಿ ಬದಲಾವಣೆ….!

ಬೆಂಗಳೂರು: 

   ಕನ್ನಡ ಚಿತ್ರರಂಗದ ನಟ ದರ್ಶನ್‌ ಭಾಗಿಯಾಗಿದ್ದಾರೆ ಎನ್ನಲಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಪ್ರಮುಖ ಹಂತಕ್ಕೆ ತಲುಪುವ ಹೊತ್ತಲ್ಲೇ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ.

    ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎ1 ಆರೋಪಿಯಾಗಿ ಪವಿತ್ರಾ ಗೌಡರನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಇದರ ಬೆನ್ನಲ್ಲೇ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ. ಕೇಸ್ ಪ್ರಾರಂಭದಿಂದ ಕಾಮಾಕ್ಷಿಪಾಳ್ಯದ ಇನ್​​ಸ್ಪೆಕ್ಟರ್​ ಗಿರೀಶ್ ನಾಯ್ಕ್ ಅವರು ತನಿಖಾಧಿಕಾರಿ ಆಗಿದ್ದರು.

    ರೇಣುಕಾಸ್ವಾಮಿ ಕೊಲೆ‌ ಪ್ರಕರಣದ ತನಿಖಾಧಿಕಾರಿಯನ್ನು ಇಂದಿನಿಂದ ಬದಲಾವಣೆ ಮಾಡಲಾಗಿದ್ದು, ವಿಜಯನಗರ ಉಪವಿಭಾಗ ಎಸಿಪಿ ಚಂದನ್ ನೂತನ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇಂದಿನಿಂದ ಎಸಿಪಿ ಚಂದನ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿಯಲಿದೆ. 

   ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಸಿ.ಕೆ ಅಚ್ಚುಕಟ್ಟು‌ ಠಾಣೆಯಿಂದ ಗಿರೀಶ್ ನಾಯ್ಕ್ ಅವರನ್ನು ಕಾಮಾಕ್ಷಿಪಾಳ್ಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಎರಡು ದಿನಗಳ‌ ಹಿಂದೆ ಪುನಃ ವಾಪಸ್ ತಮ್ಮ ಠಾಣೆಗಳಿಗೆ ಹೋಗಲು ಆದೇಶ ಬಂದಿದ್ದು, ಈ ಮಧ್ಯೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜವಾಬ್ದಾರಿ ಇವರ ಹೆಗಲಿಗೆ ಬಿದ್ದಿತ್ತು.

   ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದ ಗಿರೀಶ್ ನಾಯ್ಕ್, ನಟ ದರ್ಶನ್‌, ಪವಿತ್ರ ಗೌಡ ಸೇರಿದಂತೆ ಒಟ್ಟು 14 ಜನರನ್ನು ಬಂಧಿಸಿ ಕೇಸ್‌ಅನ್ನು ಸಮರ್ಥವಾಗಿ ನಡೆಸುತ್ತಿದ್ದರು. ಇದೀಗ ಗಿರೀಶ್ ನಾಯ್ಕ್ ಸಿ.ಕೆ ಅಚ್ಚುಕಟ್ಟು ಠಾಣೆಗೆ ವಾಪಸ್ ಹಿನ್ನಲೆಯಲ್ಲಿ ವಿಜಯನಗರ ಉಪವಿಭಾಗ ಎಸಿಪಿ ಚಂದನ್ ನೂತನ ತನಿಖಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link