ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣೋಯ್ NIA ಕಸ್ಟಡಿ ಡಿ. 5 ರವರೆಗೆ ವಿಸ್ತರಿಸಿದ ದೆಹಲಿ ಕೋರ್ಟ್

ನವದೆಹಲಿ:

    ದೆಹಲಿ ನ್ಯಾಯಾಲಯವು ಶನಿವಾರ ಗಡಿಪಾರು ಮಾಡಲಾದ ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣೋಯ್ ಅವರ NIA ಕಸ್ಟಡಿಯನ್ನು ಮತ್ತೆ ಏಳು ದಿನಗಳವರೆಗೆ ವಿಸ್ತರಿಸಿದೆ.NIA ಪ್ರಧಾನ ಕಚೇರಿಯಲ್ಲಿ ಹೆಚ್ಚಿನ ಭದ್ರತೆಯ ನಡುವೆ ನಡೆದ ವಿಚಾರಣೆಯಲ್ಲಿ ವಿಶೇಷ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಅವರು ಆರೋಪಿ ಗ್ಯಾಂಗ್‌ಸ್ಟರ್ ಎನ್ಐಎ ಕಷ್ಟಡಿ ಅವಧಿಯನ್ನು ಡಿಸೆಂಬರ್ 5 ರವರೆಗೆ ವಿಸ್ತರಿಸಿ ಆದೇಶಿಸಿದರು.

   ಇದಕ್ಕೂ ಮೊದಲು ನವೆಂಬರ್ 19 ರಂದು, ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಸಹೋದರ ಮತ್ತು ಆಪ್ತ ಸಹಾಯಕ ಅನ್ಮೋಲ್ ನನ್ನು 11 ದಿನಗಳ NIA ಕಸ್ಟಡಿಗೆ ನೀಡಲಾಗಿತ್ತು.  

    NCP ನಾಯಕ ಸಿದ್ದಿಕ್ ಹತ್ಯೆ, ಏಪ್ರಿಲ್ 2024 ರಲ್ಲಿ ನಟ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಗುಂಡಿನ ದಾಳಿ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮತ್ತು ಇತರ ಅಪರಾಧಗಳ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಅನ್ಮೋಲ್ ನನ್ನು ನವೆಂಬರ್ 18 ರಂದು ಅಮೆರಿಕ, ಭಾರತಕ್ಕೆ ಗಡಿಪಾರು ಮಾಡಿತ್ತು.ಕಳೆದ ವರ್ಷ ನವೆಂಬರ್‌ನಲ್ಲಿ ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣೋಯ್‌ನನ್ನು ಅಮೆರಿಕದಲ್ಲಿ ಬಂಧಿಸಲಾಗಿತ್ತು.

Recent Articles

spot_img

Related Stories

Share via
Copy link