ಬಾಗಲಕೋಟೆ ಲೋಕಸಭಾ ಚುನಾವಣೆ : ಹೂವಿನ ಹಾಸಿಗೆಯಲ್ಲ ಸಂಯುಕ್ತ ಗೆಲುವು

ಬಾಗಲಕೋಟೆ:

     ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ಘೋಷಣೆಯಾದಲ್ಲಿಂದಲೂ ಅಸಮಾಧಾನ, ಬಂಡಾಯ,ಮುನಿಸು ಶಮನವಾಗಿಲ್ಲ. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವುದು. ಈ ಹೊತ್ತಿನಲ್ಲಿ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್​ಗೆ ಎರಡು ಬಿಗ್ ಶಾಕ್ ಎದುರಾಗಿದೆ.

    ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ ಬಾಗಲಕೋಟೆ ಕ್ಷೇತ್ರದ ಜನರಿಗೆ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಸಂದೇಶ ಕಳುಹಿಸುವ ಮೂಲಕ ಶಾಕ್ ನೀಡಿದ್ದರೆ, ಮತ್ತೊಂದೆಡೆ ಅವರ ಸೋದರ ಹರ್ಷಗೌಡ ಪಾಟೀಲ್ ಕೈ ತೊರೆದು ಕಮಲ ಹಿಡಿಯುವ ಮೂಲಕ ಸೋದರಿಯ ವಿರುದ್ಧವೇ ಪ್ರಚಾರ ನಡೆಸುವ ಸುಳಿವು ನೀಡಿದ್ದಾರೆ.

    ಸಚಿವ ಶಿವಾನಂದ್ ಪಾಟೀಲ್ ಸಹೋದರ ಪುತ್ರ ಹರ್ಷಗೌಡ ಪಾಟೀಲ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಅಭ್ಯರ್ಥಿಯ ಸೋದರನನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

     ಬಿಜೆಪಿ ಸೇರಿದ ಬಳಿಕ ಮಾತನಾಡಿದ ಹರ್ಷಗೌಡ ಪಾಟೀಲ್, ಮೋದಿ ಅವರ ಕೆಲಸ ಮೆಚ್ಚಿಕೊಂಡು ರಾಷ್ಟ್ರ ಕಟ್ಟುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ. ನಾನು ಟಿಕೆಟ್ ಬಯಸಿರಲಿಲ್ಲ. ಬಿಜೆಪಿ ಸೇರುವುದಕ್ಕೆ ಬಹಳ ವರ್ಷದ ಕನಸಿತ್ತು ಎಂದು ಹೇಳಿದರು.

     ಬಿಜೆಪಿ ಸೇರ್ಪಡೆ ಬಗ್ಗೆ ಶಿವಾನಂದ್ ಪಾಟೀಲ್ ಕುಟುಂಬ ಒಪ್ಪುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಹರ್ಷಗೌಡ ಪಾಟೀಲ್, ಅವರ ಮನೆಯೇ ಬೇರೆ, ನಮ್ಮ ಮನೆಯೇ ಬೇರೆ. ಸ್ಥಳೀಯರು ಗೌರವಯುತವಾಗಿ ಬಿಜೆಪಿ ಸೇರಬೇಕು ಅಂತ ಬಯಸಿದ್ದರು. ಕಾರ್ಯಕರ್ತನಾಗಿ ಪಕ್ಷಕ್ಕೆ ಬಂದಿದ್ದೇನೆ. ಕಾರ್ಯಕರ್ತ ಎಂದೂ ಮಾಜಿ ಆಗಲ್ಲ ಎಂದು ಹೇಳಿದರು. ಸಂಯುಕ್ತ ವಿರುದ್ಧ ಕೆಲಸ ಮಾಡುತ್ತೀರಾ ಎಂದು ಕೇಳಿದಾಗು, ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸುತ್ತೇನೆ ಎಂದರು.

   ಎಲ್ಲವೂ ಸತ್ಯಕ್ಕೆ ದೂರವಾದದ್ದು ಅಂತ ಹೇಳುತ್ತೇನೆ. ಇವತ್ತಿಗೂ ನನ್ನ ಸ್ವಾಭಿಮಾನದ ನಿಲುವು ಸ್ಪಷ್ಟವಾಗಿದೆ. ತಟಸ್ತಳಾಗಿ ಇರೋದು ಅಂತ ನನ್ನ ನಿಲುವು ಇತ್ತು ಇವತ್ತಿಗೂ ಕೂಡ ಅದೇ ನನ್ನ ನಿಲುವು ಎಂದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

   ನಾಳೆ ಬೆಂಬಲಿಗರ ಸಭೆ ಕರೆದಿದ್ದೇನೆ ಅಲ್ಲಿ ಅವರ ನಿಲುವುಗಳನ್ನು ಕೇಳುತ್ತೇನೆ. ಈಗಾಗಲೇ ಹಲವಾರು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಸಂಯುಕ್ತ ಪಾಟೀಲ್ ಹಾಗೂ ವೀಣಾ ಕಾಶಪ್ಪನವರ್ ಜೊತೆಗೆ ಪ್ರಚಾರಕ್ಕೆ ಬರ್ತಾರೆ ಅಂತ ಶಿವಾನಂದ್ ಪಾಟೀಲ್ ಹೇಳಿದ್ದು ಅದು ಸತ್ಯಕ್ಕೆ ದೂರವಾದದ್ದು. ಇನ್ನೂ ಕೂಡ ನನ್ನ ಅಸಮಾಧಾನ ಹಾಗೆ ಇದೆ ಎಂದಿದ್ದಾರೆ.

   ಸ್ಪಷ್ಟವಾದ ನನ್ನ ಸ್ವಾಭಿಮಾನದ ನಿಲುವು ತಟಸ್ಥಳಾಗಿ ಉಳಿಯುವುದು ಅದು ಅಚಲವಾಗಿದೆ. ನನ್ನ ಮುಂದಿನ ನಿರ್ಧಾರ ತಿಳಿಸುವವರಿಗೆ ಈ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸುತ್ತೇನೆ. ಎಂದು ವಿಡಿಯೋ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap