ತುಮಕೂರು
ತುಮಕೂರು ವಿವಿ ಸಂಯೋಜಿತ ಕಾಲೇಜಿನ ಆರ್ಥಿಕವಾಗಿ ದುರ್ಬಲರಾಗಿರುವ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಆಹಾರ ವ್ಯವಸ್ಥೆಯನ್ನು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಅನ್ನಪೂರ್ಣೇಶ್ವರಿ ಆಹಾರ ಸಮಿತಿ ಸಹಯೋಗದಲ್ಲಿ ಶೀಘ್ರ ಆರಂಭಿಸುತ್ತಿದ್ದು, ಇದಕ್ಕೆ ಪೂರಕವಾದ ಅಡುಗೆ ತಯಾರಿಕಾ ಪರಿಕರಗಳನ್ನು ಆಶ್ರಮದ ವತಿಯಿಂದ ಸ್ವಾಮಿ ಜಪಾನಂದಜೀ, ಸಮಿತಿ ಸದಸ್ಯರ ಸಮ್ಮುಖದಲ್ಲಿ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದರು.
ಇಂದು ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು ಇದರ ಆಶ್ರಯದಲ್ಲಿ ಸದ್ಯದಲ್ಲಿಯೇ ಆರಂಭವಾಗುವ ಆರ್ಥಿಕವಾಗಿ ದುರ್ಬಲವಾಗಿರುವ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮಧ್ಯಾನ್ಹದ ಆಹಾರ ವ್ಯವಸ್ಥೆಯನ್ನು ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರ ನೇತೃತ್ವದಲ್ಲಿ ಆರಂಭವಾಗುತ್ತಿದೆ.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯಕ್ಕೆ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಸುಮಾರು ಎರಡು ಲಕ್ಷ ರೂಪಾಯಿಗಳಿಗೂ ಮಿಗಿಲಾದ 1500 ಊಟದ ತಟ್ಟೆ, ಲೋಟಗಳು ಮತ್ತು ಆಹಾರ ವಿತರಿಸಲು ಹಾಗೂ ಸಾಗಿಸಲು ಬೇಕಾದ ಎಲ್ಲ ರೀತಿಯ ಕೊಳಗ, ಪಾತ್ರೆಗಳು, ಬಕೇಟುಗಳು ಹಾಗೂ ಇತರ ಪರಿಕರಗಳನ್ನು ಉಪಕುಲಪತಿಗಳಾದ ಪ್ರೊ||ಎಂ.ವೆAಕಟೇಶ್ವರಲು ರವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿಯ ಸದಸ್ಯರುಗಳಾದ ಶ್ರೀ ಎಸ್.ನಾಗಣ್ಣ, ಶ್ರೀ ಆರ್.ಎಲ್.ರಮೇಶ್ ಬಾಬು, ಶ್ರೀ ನಟರಾಜ ಶೆಟ್ಟಿ, ಶ್ರೀ ಎಂ.ಎಸ್.ನಾಗರಾಜು ಮತ್ತು ಪ್ರಾಂಶುಪಾಲರುಗಳಾದ ಶ್ರೀ ಕರಿಯಣ್ಣ, ಶ್ರೀ ಪರಶುರಾಮ್ ಮುಂತಾದವರು ಉಪಸ್ಥಿತರಿದ್ದರು. ಈ ಮಹತ್ತರವಾದ ಯೋಜನೆ ಇಡೀ ರಾಷ್ಟದಲ್ಲಿಯೇ ವಿಶ್ವವಿದ್ಯಾಲಯದಲ್ಲಿ ಆರಂಭವಾಗುತ್ತಿರುವುದು ಪ್ರಪ್ರಥಮ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಪೂಜ್ಯ ಸ್ವಾಮಿ ಜಪಾನಂದಜೀ ರವರು ಈ ಯೋಜನೆಯ ಮುಖಂಡತ್ವವನ್ನು ವಹಿಸಿಕೊಂಡು ಯೋಜನೆ ಸದ್ಯದಲ್ಲಿಯೇ ಆರಂಭವಾಗುವAತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್ಲರ ಸಹಕಾರದಿಂದ ಮಾಡುತ್ತಿದ್ದಾರೆ. ಇದು ನಿಜಕ್ಕೂ ಶ್ರೀರಾಮಕೃಷ್ಣ ಸೇವಾಶ್ರಮದ ಆಶ್ರಯದಲ್ಲಿ ಆರಂಭಿಸಲಾಗುತ್ತಿರುವ ಮತ್ತೊಂದು ಅದ್ಭುತವಾದ ಯೋಜನೆ ಹಾಗೂ ಭವಿಷ್ಯ ಭಾರತವನ್ನು ರೂಪಿಸುವ ಯುವಕ / ಯುವತಿಯರಿಗೆ ಒಂದು ಮಹತ್ತರವಾದ ಅನುಕೂಲವೆಂದು ಪೂಜ್ಯ ಸ್ವಾಮೀಜಿಯವರು ತಿಳಿಸಿರುತ್ತಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ