ಮಕ್ಕಳ ಕೈಗೆ ಮೊಬೈಲ್‌ ಕೊಟ್ಟು 14 ಲಕ್ಷ ಕಳೆದುಕೊಂಡ ನಿವೃತ್ತ ನೌಕರ…!

ವಿಜಯಪುರ

   ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ನಿವೃತ್ತ ನೌಕರರೊಬ್ಬರು 14 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸಿಂದಗಿ ಪಟ್ಟಣದ   ಬಸವರಾಜ್ ಹವಾಲ್ದಾರ್‌ ಅವರ ಖಾತೆಯಿಂದ ಸೈಬರ್ ಖದೀಮರು  14 ಲಕ್ಷ ರೂಪಾಯಿಗಳನ್ನು ಲಪಟಾಯಿಸಿದ್ದಾರೆ. ಬಸವರಾಜ ಹವಾಲ್ದಾರ್ ಮತ್ತು ಅವರ ಪತ್ನಿಯ ಜಂಟಿ ಖಾತೆಯಲ್ಲಿದ್ದ 14 ಲಕ್ಷ ರೂ. ವಂಚಕರು ದೋಚಿದ್ದಾರೆ.

   ಇವರ ಮೊಬೈಲ್​ನಲ್ಲಿದ್ದ ಆನ್​ಲೈನ್ ಬ್ಯಾಂಕಿಗ್​ಗೆ ಬೆನಿಫೀಷರ್ ಆ್ಯಡ್ ಮಾಡಿ ಅದರ ಮೂಲಕ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಯಾವಾಗ ಖಾತೆಯಲ್ಲಿದ್ದ ಲಕ್ಷ ಲಕ್ಷ ಹಣ ಮಾಯವಾಯ್ತು, ಬಸವರಾಜ ಅವರು ವಿಜಯಪುರ ಸಿಇಎನ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ, ಬ್ಯಾಂಕ್​ ಖಾತೆಯನ್ನು ಲಾಕ್ ಮಾಡಿಸಿದ್ದಾರೆ.

  ಈ ಪ್ರಕರಣದ ತನಿಖೆ ನಡೆಸಿದ ಸಿಇಎನ್ ಪೊಲೀಸರು, ಬಸವರಾಜ ಅವರ ಮೊಬೈಲ್​ ಪರಿಶೀಲಿಸಿದಾಗ ಎಪಿಕೆ ಪೈಲ್ ಮೂಲಕ ಆ್ಯಪ್ ಡೌನ್​ಲೋಡ್​ ಮಾಡಿದ್ದನ್ನು ಕಂಡಿದ್ದಾರೆ. ನಂತರ, ತಜ್ಞರಿಂದ ಪರಿಶೀಲನೆ ನಡೆಸಿದಾಗ, ಎಪಿಕೆಯಿಂದ ಡೌನ್​ಲೋಡ್​ ಮಾಡಿಕೊಂಡ ಆ್ಯಪ್​ನಿಂದಲೇ ಹಣ ದೋಚಲಾಗಿದೆ ಎಂಬುವುದನ್ನು ತಿಳಿದಿದ್ದಾರೆ. 

   ಪೊಲೀಸ್ ಆಧಿಕಾರಿಗಳ ಪ್ರಕಾರ ಎಪಿಕೆ ಫೈಲ್ ಮೂಲಕ ಹ್ಯಾಕರಗಳು ಆ್ಯಪ್​ಗಳನ್ನು ಕಳುಹಿಸುತ್ತಾರೆ. ಎಪಿಕೆ ಪೈಲ್ ಓಪನ್ ಮಾಡಿ ಅದರಲ್ಲಿರುವ ಆ್ಯಪ್ ಡೌನ್​ಲೋಡ್ ಮಾಡಿದರೆ ಮುಗಿಯುತು ಕಥೆ. ಅದರಲ್ಲಂತೂ, ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದಾಗ ಅಪಾಯಕಾರಿ ಎಪಿಕೆ ಫೈಲ್​ಗಳು ಆನಲೈನ್​ ಮೂಲಕ ಬರುತ್ತವೆ. ಗೇಮ್ ಆಡುವಾಗ ವಿಡಿಯೋ ನೋಡುವಾಗ, ಬರುವ ಎಪಿಕೆ ಫೈಲ್​ಗಳನ್ನು ಮಕ್ಕಳು ಡೌನ್​ಲೋಡ್ ಮಾಡುತ್ತಾರೆ. ಮುಂದೆ ನಡೆಯುವುದೇ ಅನಾಹುತಕಾರಿ ಸಂಗತಿ. 

   ಬಸವರಾಜ ಹವಾಲ್ದಾರ್ ಪ್ರಕರಣದಲ್ಲೂ ಇದೇ ಆಗಿದ್ದು. ಮನೆಯಲ್ಲಿ ಮೊಮ್ಮಕ್ಕಳ ಕೈಯ್ಯಲ್ಲಿ ಮೊಬೈಲ್ ಕೊಟ್ಟಾಗ ಎಪಿಕೆ ಪೈಲ್​ನಲ್ಲಿರುವ ಆ್ಯಪ್​ ಡೌನ್​ಲೋಡ್ ಆಗಿದೆ. ಬಸವರಾಜ ಹವಾಲ್ದಾರ್​ ಅವರ ಮೊಬೈಲ್ ಸೈಬರ್ ವಂಚಕರ ವಶವಾಗಿದೆ. ಆಗ, ಇವರ ಅಕೌಂಟ್​ನಲ್ಲಿರುವ ಹಣವನ್ನೆಲ್ಲ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ಸಿಇಎನ್ ಪೊಲೀಸರು ಸೈಬರ್ ಖದೀಮರ ಪತ್ತೆಗೆ ಮುಂದಾಗಿದ್ದಾರೆ.

   ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ಎಪಿಕೆ ಪೈಲ್​​ಗಳು ಡೌನ್‌ಲೋಡ್ ಆಗುವ ಸಾಧ್ಯತೆ ಇರುತ್ತದೆ. ಬಳಿಕ ನಿಮ್ಮ ಮೊಬೈಲ್, ಬ್ಯಾಂಕ್‌ಗಳು ಹ್ಯಾಕ್ ಆಗುವ ಸಾಧ್ಯತೆ ಇರುತ್ತವೆ. ಹೀಗಾಗಿ ಮಕ್ಕಳ ಕೈಯಲ್ಲಿ ಮೊಬೈಲ್ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap