ನವದೆಹಲಿ :
ಭಾರತವು RHUMI 1 ಹೆಸರಿನ ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ನ್ನು ಆಗಸ್ಟ್ 24 ಯಶಸ್ವಿಯಾಗಿ ಉಡಾವಣೆ ಮಾಡಿದೆ. ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಸ್ಪೇಸ್ ಝೋನ್ ಇಂಡಿಯಾ ಅಭಿವೃದ್ಧಿಪಡಿಸಿದ ಈ ರಾಕೆಟ್ನ್ನು ಚೆನ್ನೈನ ECR ನ ತಿರುವಿದಂಧೈನಲ್ಲಿರುವ TTDC ಮೈದಾನದಿಂದ ಉಡಾವಣೆ ಮಾಡಲಾಯಿತು. ರಾಕೆಟ್ ಮೂರು ಕ್ಯೂಬ್ ಉಪಗ್ರಹಗಳು ಮತ್ತು ಐವತ್ತು PICO ಉಪಗ್ರಹಗಳನ್ನು ಉಪಕಕ್ಷೆಯ ಪಥಕ್ಕೆ ತೆಗೆದುಕೊಂಡು ಹೋಗುತ್ತದೆ. ರಾಕೆಟ್ನ ಅದ್ಭುತವಾಗಿ ವಿನ್ಯಾಸ ಮಾಡಲಾಗಿದೆ ಹಾಗೂ ಮರುಬಳಕೆ ಮಾಡಲಾಗಿದೆ.
ಈ ಯೋಜನೆಗೆ ಸಹಾಯ ಮಾಡಿದ ಮಾರ್ಟಿನ್ ಗ್ರೂಪ್, ಮೊಬೈಲ್ ಲಾಂಚರ್ ಬಳಸಿಕೊಂಡು ಉಡಾವಣೆ ನಡೆಸಲಾಗಿದೆ. ಇದು ರಾಕೆಟ್ನ ಬಹುಮುಖತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
1. ಹೊಂದಾಣಿಕೆ ಮಾಡಿಕೊಂಡು ಉಡಾಯಣಾ ಮಾಡಲಾಗಿದೆ: ಮಾರ್ಟಿನ್ ಗ್ರೂಪ್ ತಿಳಿಸಿರುವ ಪ್ರಕಾರ, ರಾಕೆಟ್ ಉಡಾವಣಾ ಕೋನ ರೂಪವನ್ನು ಹೊಂದಿದ್ದು, ಇದನ್ನು 0ಯಿಂದ 120 ಡಿಗ್ರಿಗಳವರೆಗೆ ನಿಖರವಾಗಿ ಸರಿಹೊಂದಿಸಬಹುದು. ಇದು ತನ್ನ ಪಥದ ಮೇಲೆ ನಿಖರವಾದ ನಿಯಂತ್ರಣವನ್ನು ಹೊಂದಿರುತ್ತದೆ.
2. ಶೈಕ್ಷಣಿಕ ಪರಿಣಾಮ: ಭಾರತದಾದ್ಯಂತ ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ರಾಕೆಟ್ ಮತ್ತು ಉಪಗ್ರಹ ತಂತ್ರಜ್ಞಾನದ ಉಚಿತ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
3. CO2-ಆಧಾರಿತ ಪ್ಯಾರಾಚೂಟ್ ವ್ಯವಸ್ಥೆ: ಒಂದು ನವೀನತೆ, ಕಡಿಮೆ ವೆಚ್ಚ, ಪರಿಸರ ಸ್ನೇಹಿ ಹಾಗೂ ರಾಕೆಟ್ ಘಟಕಗಳಲ್ಲಿ ಸುರಕ್ಷಿತ ಮರುಜೋಡಾನೆಯನ್ನು ಕೂಡ ಖಚಿತಪಡಿಸುತ್ತದೆ.
4. ಬಾಹ್ಯಾಕಾಶ ಪರಿಶೋಧನೆ ಮೀರಿ ಕಾರ್ಯಚರಣೆ : ಬಾಹ್ಯಾಕಾಶ ಪರಿಶೋಧನೆಯನ್ನು ಮೀರಿ ಕೃಷಿ, ಪರಿಸರ ಮೇಲ್ವಿಚಾರಣೆ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಿಗೆ ವಿಸ್ತರಿಸುತ್ತವೆ.