ರಾಜ್ಯದ ಗ್ರಾಮೀಣ ಜನತೆ, ರೈತರಿಗೆ ಸಿಹಿಸುದ್ದಿ

ಬೆಂಗಳೂರು :

 ಜನವರಿ 26 ಕ್ಕೆ ಹೊಸ ಯೋಜನೆಗೆ ಚಾಲನೆ

ರಾಜ್ಯ ಸರ್ಕಾರವು  ಗ್ರಾಮೀಣ ಜನತೆ ಮತ್ತು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ  ನೀಡಿದ್ದು ಜನವರಿ 26 ರ ಗಣರಾಜ್ಯೋತ್ಸವ ದಿನದಂದು ರೈತರ ಮನೆ ಬಾಗಿಲಿಗೆ ಉಚಿತ ಪಹಣಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ .

ಜನವರಿ 26 ರಂದು ಕಂದಾಯ ಇಲಾಖೆಯಿಂದ ಹಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಾಗುವುದು.

         ಈ ಪೈಕಿ ಪಹಣಿಯನ್ನು ಉಚಿತವಾಗಿ ನೀಡುವ ಕಾರ್ಯಕ್ರಮವೂ ಒಂದಾಗಿದೆ. 62.85 ಲಕ್ಷ ರೈತರ ಜಮೀನಿನ ಪಹಣಿ, ನಕ್ಷೆ ದಾಖಲೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಅವರವರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುತ್ತದೆ ಜನವರಿ 26 ರಂದು ಗಣರಾಜ್ಯೋತ್ಸವದ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.45 ಲಕ್ಷ ರೈತರಿಗೆ ಮನೆ ಬಾಗಿಲಿಗೆ ಪಹಣಿ ನೀಡಲಾಗುತ್ತದೆ.

 

ಆಧಾರ್ ಕಾರ್ಡ್, ಅಂಗವಿಕರ ವೇತನ, ವಿಧವಾ ಪಿಂಚಣಿ, ವೃದ್ಯಾಪ್ಯ ವೇತನ ಸೇರಿ 8 ಇಲಾಖೆಗಳ 58 ಸೇವೆಗಳನ್ನು ಜನರು ಮನೆಗೆ ತಲುಪಿಸುವ ಜನಸೇವಕ ಸೇವೆಗೆ 2021 ರ ನವೆಂಬರ್ 1 ರಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ಜಾರಿಗೆ ತರಲಾಗಿತ್ತು. ಇದೀಗ 2022 ರ ಜನವರಿ 26 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜನಸೇವಕ ಯೋಜನೆ ಜಾರಿಗೆ ಬರಲಿದೆ.

Recent Articles

spot_img

Related Stories

Share via
Copy link
Powered by Social Snap