ಬೆಂಗಳೂರು
ನಮ್ಮ ಮೆಟ್ರೋ ಹಳದಿ ಮಾರ್ಗದ ಸಂಚಾರದಲ್ಲಿ ನಾಳೆ ತುಸು ವ್ಯತ್ಯಯ ಉಂಟಾಗಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ. ನಾಳೆ ಹಳದಿ ಮಾರ್ಗದ ನಮ್ಮ ಮೆಟ್ರೋ ಸೇವೆ ಒಂದು ಗಂಟೆ ತಡವಾಗಿ ಆರಂಭವಾಗಲಿದೆ. ತುರ್ತು ವ್ಯವಸ್ಥಾ ನಿರ್ವಹಣೆ, ನವೀಕರಣ ಕಾರ್ಯಗಳ ಹಿನ್ನೆಲೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಮೆಟ್ರೋ ಆರಂಭವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ನಾಳೆ ಮೊದಲ ರೈಲು ಸೇವೆ ಬೆಳಿಗ್ಗೆ 7.00 ಗಂಟೆಯ ಬದಲಾಗಿ 8.00 ಗಂಟೆಗೆ ಆರಂಭವಾಗಲಿದೆ. ಬಳಿಕ ಸಾಮಾನ್ಯ ವೇಳಾಪಟ್ಟಿಯಂತೆ ಕಾರ್ಯಾಚರಣೆ ನಡೆಯಲಿದೆ. ಈ ಬದಲಾವಣೆ ಕೇವಲ ಒಂದು ದಿನಕ್ಕೆ ಮಾತ್ರ ಅನ್ವಯ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲೆಂದು 96 ಹೊಸ ರೈಲುಗಳ ಸೇರ್ಪಡೆ ಮಾಡಲಾಗ್ತಿದೆ. ಹೊಸ ರೈಲುಗಳು ಬರ್ತಿದ್ದಂತೆ 4 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರಕ್ಕೆ ನೀಡಲು ಬಿಎಂಆರ್ಸಿಎಲ್ ಸಿದ್ದತೆ ಮಾಡಿಕೊಂಡಿದೆ. ಸದ್ಯ ನಮ್ಮ ಮೆಟ್ರೋದ ಹಸಿರು ಮಾರ್ಗ, ನೇರಳೆ ಮಾರ್ಗ ಹಾಗೂ ಹಳದಿ ಮಾರ್ಗಗಳಿಗೆ 64 ರೈಲುಗಳು ಸೇರ್ಪಡೆಗೊಂಡಿದೆ.
ಇದೀಗ ಗ್ರೀನ್ ಲೈನ್, ಪರ್ಪಲ್ ಲೈನ್ ಸೇರಿ 58 ರೈಲುಗಳಿದ್ರೆ, ಯೆಲ್ಲೋ ಲೈನ್ ನಲ್ಲಿ 6 ರೈಲು ಗಳಿವೆ. ಗ್ರೀನ್ ಮತ್ತು ಪರ್ಪಲ್ ಲೈನ್ ಗೆ 21 ಹೊಸ ರೈಲು ಗಳು, ಯೆಲ್ಲೋ ಲೈನ್- 9 ರೈಲುಗಳು ಬರಲಿವೆ. ಹೆಚ್ಚುವರಿಯಾಗಿ 6 ರೈಲುಗಳ ಆರ್ಡರ್ ನೀಡಲಾಗಿದೆ.








