ಕಬ್ಬು ಬೆಳೆಗಾರರ ಬೆನ್ನಿಗೆ ನಿಂತ ರಾಜ್ಯ ಸರ್ಕಾರ …!

ಬೆಂಗಳೂರು 

    ತೂಕದಲ್ಲಾಗುತ್ತಿದ್ದ ಮೋಸ ಹಿನ್ನಲೆ ಕಬ್ಬು  ಬೆಳೆಗಾರರು, ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಹಿತ ಕಾಯಲು ಸರ್ಕಾರ ಮುಂದಾಗಿದೆ. ಆ ಮೂಲಕ ಕಬ್ಬು ತೂಕದಲ್ಲಾಗುವ ಮೋಸ ತಡೆಗಟ್ಟಲು ಸರ್ಕಾರದಿಂದ ಕ್ರಮಕೈಗೊಳ್ಳಲಾಗುತ್ತಿದೆ.ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಬಳಿ ವೇ ಬ್ರಿಡ್ಜ್ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ತೂಕದ ಯಂತ್ರವನ್ನ ಎಎಪಿಎಂಸಿ ಮೂಲಕ ವೇ ಬ್ರಿಡ್ಜ್ ಸ್ಥಾಪಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.

    ಕರ್ನಾಟಕ ರಾಜ್ಯದಲ್ಲಿ ಕಬ್ಬು ಬೆಳೆಯೋದರಲ್ಲಿ ವಿಜಯಪುರ ಜಿಲ್ಲೆಯಲ್ಲಿ 4 ಅಥವಾ 5 ನೇ ಸ್ಥಾನದಲ್ಲಿದೆ. ಹೆಚ್ಚಿನ ಪ್ರಮಾಣದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕಬ್ಬು ಬೆಳೆಯಲಾಗುತ್ತದೆ. ಆದರೆ ಕಬ್ಬು ಬೆಳೆಗಾರರಿಗೆ ಮಾತ್ರ ಕಬ್ಬು, ನಷ್ಟದ ಬೆಳೆ ಆಗುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಎಫ್​ಆರ್​ಪಿ ಅಡಿಯಲ್ಲಿ ಕಬ್ಬಿನ ದರ ನಿಗದಿ ಮಾಡಿತ್ತು. ಆದರೆ ಅದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

 
   ಸ್ಪಿರಿಟ್ ಹಿಡಿದು ಇತರೆ 9 ಉಪ ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಒಂದು ಟನ್ ಕಬ್ಬಿನಿಂದ ಹಾಗೂ ಕಬ್ಬಿನ ಉತ್ಪಾದನೆಗಳಿಂದ ಸರ್ಕಾರಕ್ಕೆ 4 ರಿಂದ 5 ಸಾವಿರ ಹೋಗುತ್ತಿದೆ. ಆದ ಕಾರಣ ರೈತರ ಒಂದು ಟನ್ ಕಬ್ಬಿಗೆ ಕಾರ್ಖಾನೆಯವರು 3 ಸಾವಿರ ಹಾಗೂ ಸರ್ಕಾರದಿಂದ 2 ಸಾವಿರ ಸೇರಿ ಒಟ್ಟು ಒಂದು ಟನ್ ಕಬ್ಬಿಗೆ ರೈತರಿಗೆ 5 ಸಾವಿರ ರೂಪಾಯಿ ಸಿಗಬೇಕು. ಇಲ್ಲವಾದರೆ ಸಕ್ಕರೆ ಸಚಿವ ಶಿವಾನಂದ ಪಾಟೀಲರ ನಿವಾಸದ ಎದುರು ಹೋರಾಟ ಮಾಡುತ್ತೇವೆಂದು ರೈತ ಸಂಘಟನೆಗಳು ನಿರ್ಧಾರ ಮಾಡಿದ್ದವು.

Recent Articles

spot_img

Related Stories

Share via
Copy link