ಭಾರತ-ಚೀನಾ ಗಡಿ ವಿವಾದ : ಮತ್ತೆ ಮುರಿದು ಬಿದ್ದ ಮಾತುಕತೆ

ನವದೆಹಲಿ:

     ಭಾರತದ ವಿದೇಶಿ ನೀತಿಯ ಪಿತಾಮಹರಾದ ಚಾಚಾ ನೆಹರೂ ಅವರು ಹೇಳಿದಂತೆ ಭಾರತ-ಚೀನ ಭಾಯಿ ಭಾಯಿ ಎನ್ನುವ ಪರಿಸ್ಥತಿ ಸದ್ಯ ಈಗಿಲ್ಲ ಯಾಕೆಂದರೆ ಗಡಿಯಲ್ಲಿ ಆಗುತ್ತಿರುವ ಬೆಳವಣಿಗೆ ಎಲ್ಲರಲ್ಲೂ ಭೀತಿ ಮೂಡಿಸಿದೆ ಇದರ ಸಂಬಂಧ ಭಾರತ ಮತ್ತು ಚೀನಾದ ಅಧಿಕಾರಿಗಳು  ಬೀಜಿಂಗ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಉದ್ದಕ್ಕೂ ಇರುವ ಬಿಕ್ಕಟ್ಟಿನ ಕುರಿತು  ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಸಿದ್ದು, ಈ ಚರ್ಚೆಯಲ್ಲಿ ಯಾವುದೇ ಪ್ರಗತಿಯ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ.

    ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತು ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ವರ್ಕಿಂಗ್ ಮೆಕ್ಯಾನಿಸಂ (ಡಬ್ಲ್ಯುಎಂಸಿಸಿ) ಅಡಿಯಲ್ಲಿ ಮಾತುಕತೆಗಳನ್ನು ನಡೆಸಲಾಯಿತು.

    ಪೂರ್ವ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆ ಬಳಿ ಗಡಿ ಸಂಘರ್ಷಕ್ಕೆ ಕಾರಣವಾಗಿರುವ ಕೆಲ ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂಬ ಪ್ರಸ್ತಾವನೆ ಕುರಿತು ಚೀನಾದ ಬೀಜಿಂಗ್‌ನಲ್ಲಿ ಭಾರತ ಮತ್ತು ಚೀನಾ ದ್ವಿಪಕ್ಷೀಯ ಮಾತುಕತೆ ನಡೆಸಿದವು. ಜುಲೈ 2019 ರಲ್ಲಿ ನಡೆದ 14 ನೇ ಸಭೆಯ ನಂತರ ಇದು ಮೊದಲ ವೈಯಕ್ತಿಕ ಸಭೆಯಾಗಿದೆ.

    ಭಾರತ-ಚೀನಾ ಗಡಿ ಬಿಕ್ಕಟ್ಟು ಸಮಾಲೋಚನೆ ಮತ್ತು ಸಹಯೋಗ ಕುರಿತ ಕಾರ್ಯಕಾರಿ ಮಂಡಳಿ ಸಭೆಯಲ್ಲಿ (ಡಬ್ಯ್ಲುಎಂಸಿಸಿ) ಈ ಕುರಿತು ಪ್ರಸ್ತಾಪಿಸಲಾಯಿತು.

    ಚೀನಾ ಮತ್ತು ಭಾರತದ ನಡುವಿನ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಉಂಟಾಗುವ ಘರ್ಷಣೆ ಮತ್ತು ಮಾತುಕತೆಯನ್ನು ನಡೆಸಲು 2021ರಲ್ಲಿ ಡಬ್ಲ್ಯೂಎಂಸಿಸಿಯನ್ನು ಸ್ಥಾಪಿಸಲಾಗಿದ್ದು, ಇದರ ಅಡಿಯಲ್ಲಿ ಉಭಯ ರಾಷ್ಟ್ರಗಳು ಮಾತುಕತೆ ನಡೆಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap