ಬೆಂಗಳೂರು:
ಬೆಂಗಳೂರು, ಏ.5: ಆಜಾನ್ ಕೂಗುವಾಗ ಮೈಕ್ ಬಳಸಬಾರದು ಎಂದು ಸರ್ಕಾರ ಯಾವುದೇ ಹೊಸ ಆದೇಶ ಹೊರಡಿಸಿಲ್ಲ. ಈ ಹಿಂದೆ ಕೋರ್ಟ್ ನೀಡಿದ್ದ ತೀರ್ಪನ್ನೇ ಜಾರಿ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.ಸದ್ಯ ಪ್ರಚಲಿತಕ್ಕೆ ಬಂದಿರುವ ವಿಚಾರ ಸಂಬಂಧ ಸರ್ಕಾರ ಗಮನಿಸುತ್ತಿದೆ.
ಆಜಾನ್ ಕೂಗುವಾಗ ಮೈಕ್ ಎಷ್ಟು ಡೆಸಿಬಲ್ ಇರಬೇಕು, ಹಗಲು ವೇಲೆ ಎಷ್ಟಿರಬೇಕು, ರಾತ್ರಿ ವೇಳೆ ಎಷ್ಟಿರಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ. ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಕೋರ್ಟ್ ಏನನ್ನು ಹೇಳಿದೆಯೋ ಅದನ್ನು ಜಾರಿ ಮಾಡಲಾಗುತ್ತಿದೆ ಎಂದು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್: ಏ.1ರಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್ ಗೆ 35 ಪೈಸೆ ದರ ಹೆಚ್ಚಳ
ಮೈಕ್ ಬಳಕೆ ನಿಯಂತ್ರಣ ಆದೇಶವನ್ನು ಏಕಾಏಕಿ ಜಾರಿ ಮಾಡಲು ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕಾಗುತ್ತದೆ. ಜಿಲ್ಲಾ ಮಟ್ಟಗಳಲ್ಲಿ ಈಗಾಗಲೇ ಪೊಲೀಸ್ ಠಾಣೆಗಳ ಹಂತದಲ್ಲಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮುದಾಯಗಳ ಸಭೆ ನಡೆಸಲಾಗುತ್ತದೆ. ವಿಶ್ವಸಕ್ಕೆ ತೆಗೆದುಕೊಂಡೇ ಈ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಸರ್ಕಾರದ ದೃಷ್ಟಿಯಲ್ಲಿ ಎಲ್ಲ ಸಮಯದಾಯಗಳೂ ಒಂದೇ. ಯಾರನ್ನೂ ಸಹ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡುವುದಿಲ್ಲ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದರು.
ಮೂಲಸೌಕರ್ಯಗಳು ಹೆಚ್ಚು ಇವೆ, ಬೆಂಗಳೂರು ಬಿಟ್ಟು ಹೈದರಾಬಾದ್ ಬನ್ನಿ ಎಂದು ಆಂಧ್ರಪ್ರದೇಶದ ಸಚಿವ ಕೆ.ಟಿ. ಆರ್ ಟ್ವೀಟ್ ಹಾಸ್ಯಾಸ್ಪದ. ಇಡೀ ಜಗತ್ತಿನ ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಹೆಚ್ಚು ಸ್ಟಾರ್ಟಪ್, ಯುನಿಕಾರ್ನ್ ಬೆಂಗಳೂರಿನಲ್ಲಿ ಇದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ