ಬೆಂಗಳೂರು :
ಸಿಂಪಲ್ಲಾಗಿರುವ ಸೀರೆಯಲ್ಲೂ ಅಂದವಾಗಿ ಕಾಣಿಸಬಹುದು, ಅತ್ಯಾಕರ್ಷಕವಾಗಿ ಕಾಣಿಸಬಹುದು ಎನ್ನುವುದಕ್ಕೆ ಸ್ಯಾಂಡಲ್‌ವುಡ್ ನಟಿ ತೇಜಸ್ವಿನಿ ಶರ್ಮಾ ಸರಿಯಾದ ಉದಾಹರಣೆ. ಆಗಾಗ್ಗೆ ಒಂದಲ್ಲಒಂದು ಸೀರೆಯಲ್ಲಿ ಕಾಣಿಸಿಕೊಳ್ಳುವ ಇವರ ಸೀರೆ ಪ್ರೇಮವನ್ನು ನಾವು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರ ಫೋಟೋಶೂಟ್‌ನಲ್ಲಿ ಕಾಣುತ್ತಿರುತ್ತೇವೆ.
ಸ್ಯಾಂಡಲ್‌ವುಡ್ ನಟಿಯಾಗಿರುವ ತೇಜಸ್ವಿನಿ ಶರ್ಮಾ ಸೂಪರ್ ಮಾಡೆಲ್ ಕೂಡ. ಈಗಾಗಲೇ ಮಖೌನಲ್ಲಿ ನಡೆದ ವರ್ಲ್ಡ್ ಸೂಪರ್ ಮಾಡೆಲ್ ಸೌತ್ ಏಷಿಯಾ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ಕೀರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ವೆಬ್ ಸೀರೀಸ್ ಸೇರಿದಂತೆ ಇಂಗ್ಲೀಷ್ ಮಂಜ, ಫ್ಲಾಟ್ ನಂಬರ್ 9 ಹಾಗೂ ವಾರ್ಡ್ ನಂಬರ್ 11 ಸೇರಿದಂತೆ ಕೊಡಗಿನ ಪ್ರಾದೇಶಿಕ ಸಿನಿಮಾ ಕೊಡಗ್‌ರ ಸಿಪಾಯಿಯಲ್ಲೂ ಅಭಿನಯಿಸಿದ್ದಾರೆ.
ತೀರಾ ಹೆಚ್ಚು ಮೇಕಪ್ ಹಾಗೂ ಆಭರಣವಿಲ್ಲದೆಯೂ ಅಂದವಾಗಿ ಕಾಣುವ ಅವರ ಸೀರೆ ಪ್ರೇಮದ ಬಗ್ಗೆ ವಿಶ್ವವಾಣಿ ನ್ಯೂಸ್ ಮಾತನಾಡಿಸಿದಾಗ ಅವರು ತಮ್ಮ ಸೀರೆ ಲವ್ ಬಗ್ಗೆ ಹೇಳಿಕೊಂಡರಲ್ಲದೇ ಓದುಗರಿಗೆ ಒಂದಿಷ್ಟು ಸೀರೆ ಸ್ಟೈಲಿಂಗ್ ಟಿಪ್ಸ್ ಕೂಡ ನೀಡಿದರು.
