ದುಬಾರೆಯಲ್ಲಿ ಆನೆಯಿಂದ ಮಾವುತನ ಮೇಲೆ ಹಲ್ಲೆ..!!

ಮಡಿಕೇರಿ:

        ದುಬಾರೆ ಕ್ಯಾಂಪಿನಲ್ಲಿದ್ದ  ಆನೆಯೊಂದು ತನ್ನ ಮಾವುತನ ಮೇಲೆ ದಾಳಿ ನಡೆಸಿದ ಪರಿಣಾಮ ಮಾವುತ ತೀವ್ರವಾಗಿ ಗಾಯಗೊಂಡಿರುವ ಘಟನೆ ನಿನ್ನೆ  ನಡೆದಿದೆ.

        ಗಾಯಗೊಂಡಿರುವ ಮಾವುತನನ್ನು ನವೀನ್ ಎಂದು ಗುರುತಿಸಲಾಗಿದೆ , ಕುಶಾಲ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮೈಸೂರಿನ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

       9 ವರ್ಷದ  ಆನೆ, ದುಬಾರೆ ಕ್ಯಾಂಪಿನಲ್ಲಿಯೇ ಹುಟ್ಟಿದ್ದು, ಅಲ್ಲಿಯೇ ಬೆಳೆದಿದ್ದು, 2018 ರಿಂದಲೂ  ಒಬ್ಬ ಮಾವುತ ಹಾಗೂ ತರಬೇತಿದಾರರೊಬ್ಬರು ಇದನ್ನು ನೋಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link