ಅಮರಾವತಿ:
ರಜೆಗಳು ಮುಗಿಯುವ ಹೊತ್ತಲ್ಲಿ ತಿರುಪತಿ ತಿರುಮಲದಲ್ಲಿ ಭಾರೀ ಜನಸಾಗರ ಕಂಡುಬಂದಿದೆ ಆಂಧ್ರ, ತೆಲಾಂಗಣ ಸೇರಿದಂತೆ ಕರ್ನಾಟಕ, ತಮಿಳುನಾಡಿನಿಂದ ಅಧಿಕ ಸಂಖ್ಯೆಯ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬಂದಿರುವ ಕಾರಣ, ಸರಿಸುಮಾರು 3 ಕಿಲೋಮೀಟರ್ ಉದ್ದಕ್ಕೆ ಸರತಿಸಾಲು ಕಂಡುಬಂದಿದೆ. ವೈಕುಂಠಂ ಕ್ಯೂ ಕಾಂಪ್ಲೆಕ್ಸ್, ನಾರಾಯಣಗಿರಿ ಶೆಡ್‍ಗಳು ತುಂಬಿಹೋಗಿವೆ. ರಿಂಗ್ ರೋಡ್‍ನಿಂದ ಆಕ್ಟೋಪಸ್ ಭವನದವರೆಗೂ ಭಕ್ತರ ಸರತಿ ಸಾಲು ಇದೆ
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕನಿಷ್ಠ 24 ಗಂಟೆ ಹಿಡಿಯುತ್ತಿದೆ. ಸರತಿ ಸಾಲಲ್ಲಿ ಇರುವ ಭಕ್ತರಿಗೆ ಕುಡಿಯುವ ನೀರು, ಅನ್ನಪ್ರಸಾದ, ಹಾಲನ್ನು ಟಿಟಿಡಿ ಒದಗಿಸುತ್ತಿದೆ. ಮೂರು ದಿನದ ಮೊದಲು ದಿನಕ್ಕೆ 60ಸಾವಿರ ಭಕ್ತರು ದರ್ಶನ ಪಡೆಯುತ್ತಿದರು. ಇದೀಗ ಭಕ್ತರ ಸಂಖ್ಯೆ 85ರಿಂದ 90ಸಾವಿರ ಇದೆ. ಭಕ್ತರ ರಶ್ ಇನ್ನೂ ಕೆಲವು ದಿನ ಹೀಗೆ ಮುಂದುವರೆಯುವ ಸಂಭವ ಇದೆ.
ಟಿಟಿಡಿ ಮಾಹಿತಿ ಪ್ರಕಾರ, ಬುಧವಾರ ಒಂದೇ ದಿನ 81,930 ಭಕ್ತರು, ಗುರುವಾರ 76,369 ಹಾಗೂ ಶುಕ್ರವಾರ 71,510 ಭಕ್ತರು ದರ್ಶನ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಭಕ್ತರನ್ನು ನಿಯಂತ್ರಿಸುವುದು ಟಿಟಿಡಿ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.