ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಸಂಚು: ಸುನಿತಾ ಕೇಜ್ರಿವಾಲ್

 ದೆಹಲಿ :

    ದೆಹಲಿ ಮದ್ಯ ನೀತಿ ಹಗರಣದ ಆರೋಪದ ಅಡಿಯಲ್ಲಿ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಅವರ ಪತ್ನಿ ಸುನಿತಾ ಕೇಜ್ರಿವಾಲ್ ಆರೋಪಿಸಿದ್ದಾರೆ. ತಿಹಾರ್ ಜೈಲಿನಲ್ಲಿರುವ ನನ್ನ ಪತಿಗೆ ಇನ್ಸುಲಿನ್ ಏಕೆ ನೀಡುತ್ತಿಲ್ಲ, ಏಕೆಂದರೆ ಅವರು ಕೇಜ್ರಿವಾಲ್‌ರನ್ನು ಕೊಲ್ಲಲು ಬಯಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ರಾಂಚಿಯಲ್ಲಿ ನಡೆದ ಇಂಡಿಯಾ ಒಕ್ಕೂಟದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸುನೀತಾ ಕೇಜ್ರಿವಾಲ್, ಅರವಿಂದ್ ಕೇಜ್ರಿವಾಲ್ ಅವರು ತಿನ್ನುವ ಪ್ರತಿಯೊಂದು ತಿನಿಸನ್ನು ಕ್ಯಾಮೆರಾಗಳ ಮೂಲಕ ಗಮನಿಸಲಾಗುತ್ತಿದೆ ಎಂದು ಹೇಳಿದರು. ಅರವಿಂದ್ ಕೇಜ್ರಿವಾಲ್ ಅವರು ತಪ್ಪಿತಸ್ಥರೆಂದು ಸಾಬೀತುಪಡಿಸದೇ ಜೈಲಿನಲ್ಲಿಟ್ಟಿರುವುದು ಸರ್ವಾಧಿಕಾರಿ ಧೋರಣೆ. ಕೇಜ್ರಿವಾಲ್ ಅವರು ಐಐಟಿ ಪದವೀಧರರಾಗಿದ್ದು, ಹಣ ಮಾಡಬೇಕಿದ್ದರೆ ವಿದೇಶಕ್ಕೆ ಹೋಗಬಹುದಿತ್ತು. ಆದರೆ ದೇಶದ ಮೇಲಿನ ಪ್ರೀತಿಯಿಂದ ಅವರು ಇಲ್ಲೇ ಉಳಿದರು ಎಂದು ಸುನಿತಾ ಕೇಜ್ರಿವಾಲ್ ಹೇಳಿದರು.

    ಕೇಂದ್ರ ಸರ್ಕಾರ ಅದವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸೊರೆನ್ ಅವರನ್ನು ಜೈಲಿಗೆ ಕಳುಹಿಸಿದೆ. ಅವರು ಅಪರಾಧಿ ಎಂದು ಸಾಬೀತಾಗದಿದ್ದರೂ ಜೈಲಿಗೆ ಕಳುಹಿಸಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ. ನನ್ನ ಗಂಡ ಮಾಡಿರುವ ತಪ್ಪೇನು? ಉತ್ತರಮ ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿದೆಯೇ? ದೇಶಭಕ್ತಿ ಅವರ ರಕ್ತದಲ್ಲಿದೆ, ಜನರಿಗಾಗಿ ಅವರು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ ಎಂದು ಹೇಳಿದರು.

    ಸುನೀತಾ ಕೇಜ್ರಿವಾಲ್ ತಮ್ಮ ಪತಿಯನ್ನು ಸಿಂಹ ಎಂದು ಕರೆದಿದ್ದು, ಜೈಲಿನಲ್ಲಿದ್ದರೂ ಕೂಡ ದೇಶದ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಹೇಳಿದರು.

    ವೈದ್ಯಕೀಯ ಜಾಮೀನಿಗೆ ಆಧಾರಗಳನ್ನು ಸಿದ್ಧಪಡಿಸುವ ಸಲುವಾಗಿ ಅರವಿಂದ್ ಕೇಜ್ರಿವಾಲ್ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಚಹಾದಲ್ಲಿ ಮಾವಿನಹಣ್ಣು, ಆಲೂ-ಪೂರಿ ಮತ್ತು ಸಕ್ಕರೆಯನ್ನು ಸೇವಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಆರೋಪಿಸಿದೆ.

    ಕೇಜ್ರಿವಾಲ್ ಅವರ ವಕೀಲರು ದೆಹಲಿ ನ್ಯಾಯಾಲಯದಲ್ಲಿ ಇಡಿ ಆರೋಪವನ್ನು ನಿರಾಕರಿಸಿದರು, ಜಾಮೀನಿಗಾಗಿ ಅವರು ಪಾರ್ಶ್ವವಾಯು ಅಪಾಯಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದರು.

    ರಾಂಚಿಯಲ್ಲಿ ನಡೆದ ಉಲ್ಗುಲನ್ ನ್ಯಾಯ ರ್‍ಯಾಲಿಯಲ್ಲಿ ಎಎಪಿ ನಾಯಕ ಸಂಜಯ್ ಸಿಂಗ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ಒಸಾಮಾ ಬಿನ್ ಲಾಡೆನ್ ಮತ್ತು ಗಬ್ಬರ್ ಸಿಂಗ್ ಅವರು ಅಹಿಂಸೆಯನ್ನು ಬೋಧಿಸುತ್ತಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ.

    ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಹೇಮಂತ್ ಸೋರೆನ್, ಅರವಿಂದ್ ಕೇಜ್ರಿವಾಲ್ ಅವರನ್ನು ಸುಳ್ಳು ಆರೋಪದಡಿಯಲ್ಲಿ ಜೈಲಿಗೆ ಹಾಕಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ಒಸಾಮಾ ಬಿನ್ ಲಾಡೆನ್ ಮತ್ತು ಗಬ್ಬರ್ ಸಿಂಗ್ ಅಹಿಂಸೆಯನ್ನು ಬೋಧಿಸುತ್ತಿರುವಂತೆ ಕಾಣುತ್ತದೆ. ಮೋದಿ ವಾಷಿಂಗ್ ಪೌಡರ್ ಬಂದಿದೆ ಎಂದು ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap