ಮೈಸೂರು ದಸರಾ 2018 : ಇಂದಿನ ಕಾರ್ಯಕ್ರಮಗಳ ವೇಳಾಪಟ್ಟಿ

0
35

     ಮೈಸೂರು:Related image

 

      ನಾಡಹಬ್ಬ ಮೈಸೂರು ದಸರಾ-2018 ಇಂದಿನ( ಅಕ್ಟೋಬರ್ 11) ವಿವಿಧ ಕಾರ್ಯಕ್ರಮಗಳ ವಿವರ ಇಂತಿದೆ.

      ಬೆಳಗ್ಗೆ 11-00 ಗಂಟೆಗೆ ಜೆ.ಕೆ. ಮೈದಾನದಲ್ಲಿ ಮಹಿಳಾ ದಸರಾವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸತಿ ಸಚಿವೆ ಡಾ. ಜಯಮಾಲ ಉದ್ಘಾಟಿಸುವರು.

      ಬೆಳಗ್ಗೆ 11-30 ಕ್ಕೆ ಜೆ.ಕೆ. ಮೈದಾನದಲ್ಲಿ ಉದ್ಯಮ ಸಂಭ್ರಮ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆಯನ್ನು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ, ಬೃಹತ್ ಮಧ್ಯಮ ಕೈಗಾರಿಕೆ ಹಾಗೂ ಸಕ್ಕರೆ ಸಚಿವರಾದ ಕೆ.ಜೆ. ಜಾರ್ಜ್ ನೆರವೇರಿಸುವರು.

      ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಇಂದು ಬೆಳಗ್ಗೆ 11.30ಕ್ಕೆ ಅತ್ತೆ ಸೊಸೆ ವಿಭಾಗದಲ್ಲಿ ಅಕ್ಕಿ ರೊಟ್ಟಿ ಮತ್ತು ಎಣ್ಣೆಗಾಯಿ ಪಲ್ಯ ತಯಾರಿಕೆ ಸ್ಪರ್ಧೆ, ಮಧ್ಯಾಹ್ನ 3ಕ್ಕೆ ಮಹಿಳೆಯರಿಗೆ ಸವಿಭೋಜನ ಸ್ಪರ್ಧೆ ಇಡ್ಲಿ ತಿನ್ನುವ ಸ್ಪರ್ಧೆ, ಸಂಜೆ 4ಕ್ಕೆ ಸಾವಯವ ಧಾನ್ಯ ಆಹಾರ ಪದ್ಧತಿ ಬಗ್ಗೆ ಪ್ರವಚನ ಮತ್ತು ಆಹಾರ ತಯಾರಿಕೆಯು ಫುಡ್ ಆರ್ಟ್ ಕ್ರಾಫ್ಟ್ ಇನ್ಸ್ ಸ್ಟಿಟ್ಯೂಟ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ನಡೆಯಲಿದೆ.

      ಸಂಜೆ 5ಕ್ಕೆ ನಾದಸ್ವರ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು ಜಿ.ಚೇತನ್ ಕುಮಾರ್, ಸಂಜೆ 6ಕ್ಕೆ ಸ್ಯಾಕ್ಸೋಫೋನ್ ಕಾರ್ಯಕ್ರಮವನ್ನು ಸಾತಗಳ್ಳಿ ಬಡಾವಣೆ ಯದುಕುಮಾರ್, ಸಂಜೆ 7ಕ್ಕೆ ಸುಗಮ ಸಂಗೀತ ಕಾರ್ಯಕ್ರಮವನ್ನು ರಾಮಕೃಷ್ಣನಗರ ಹಂಸಿನಿ ಎಸ್.ಕುಮಾರ್, ರಾತ್ರಿ ನೃತ್ಯ ಪ್ರದರ್ಶನವನ್ನು ಮೈಸೂರಿನ ವಿ.ಆದರ್ಶ ಮತ್ತು ರಿವೈಬ್ ಡ್ಯಾನ್ ಅನ್ನು ಸುಪ್ರಿಯ ನಡೆಸಿಕೊಡುವರು. ಶ್ರೀಮುರಳಿಯವರಿಂದ ಸಂಜೆ 5ಕ್ಕೆ ಒಗ್ಗರಣೆ ಡಬ್ಬಿ ಅಡುಗೆ ತಯಾರಿಕಾ ನೇರ ಪ್ರಸಾರ, ಸಂಜೆ 7ಕ್ಕೆ ಕುಶಾಲನಗರದ ಸಾಗರ್ ಮೆಲೋಡಿಸ್ ಅವರಿಂದ ರಸಮಂಜರಿ ಕಾರ್ಯಕ್ರಮನಡೆಯಲಿದೆ.

ಕಲಾಮಂದಿರ:

      ಕಲಾಮಂದಿರದಲ್ಲಿ ಸಂಜೆ 5.30 ರಿಂದ 6 ರ ರವರೆಗೆ ಕೇರಳದ ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರದಿಂದ ಮೋಹಿನಿ ಅಟ್ಟಂ, ಸಂಜೆ 6 ರಿಂದ 7 ರ ವರೆಗೆ ಕಲ್ಬುರ್ಗಿಯ ಶಂಕರಪ್ಪ ಹೂಗಾರರಿಂದ ವಚನ ಗಾಯನ, ಸಂಜೆ 7 ರಿಂದ 8 ರವರೆಗೆ ಕೋಲಾರದ ಜನಘಟ್ಟ ಕೃಷ್ಣಮೂರ್ತಿಯವರಿಂದ ಜನಪದ ಗಾಯನ, ರಾತ್ರಿ 8 ರಿಂದ 9 ರವರೆಗೆ ಮೈಸೂರಿನ ರಾಜೇಂದ್ರ ಮತ್ತು ಲೋಕೇಶ್ ಎಸ್, ಹಂಸಲೇಖಾ  ಮ್ಯೂಸಿಕಲ್ ಟ್ರಸ್ಟ್ ನಿಂದ ಜುಗಲ್ಬಂದಿ ಸಂಗೀತ ನಡೆಯಲಿದೆ.

ಗಾನ ಭಾರತಿ ವೇದಿಕೆ:

      ಗಾನ ಭಾರತಿ ವೇದಿಕೆಯಲ್ಲಿ ಸಂಜೆ 5.30 ರಿಂದ 6 ರವರೆಗೆ ಹಿಮಾಚಲ ಪ್ರದೇಶದ ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರದಿಂದ ಸಿರಿಮೌರಿನಟಿ ನೃತ್ಯ, ಸಂಜೆ 6 ರಿಂದ 7 ರವರೆಗೆ ಕೊಳ್ಳೇಗಾಲದ ಬ್ರಹ್ಮೇಶ್ ಪಿ.ಎಂ. ಮತ್ತು ತಂಡದಿಂದ ಸುಗಮ ಸಂಗೀತ ನಡೆಯಲಿದೆ. 

      ಸಂಜೆ 7 ರಿಂದ ರವರೆಗೆ ಮೈಸೂರಿನ ಸುಮಾರಾಜಕುಮಾರ್ ರಿಂದ ಮಾತನಾಡುವ ಬೊಂಬೆ ಕಾರ್ಯಕ್ರಮ, ರಾತ್ರಿ 8 ರಿಂದ 9 ರವರೆಗೆ ಶ್ರೀದೇವಿ ಕುಳೇನೂರಿನಿಂದ ಸುಗಮ ಸಂಗೀತ.

ಚಿಕ್ಕ ಗಡಿಯಾರ ವೇದಿಕೆ:

      ಚಿಕ್ಕ ಗಡಿಯಾರ ವೇದಿಕೆಯಲ್ಲಿ ಸಂಜೆ 5.30 ರಿಂದ 6 ರ ರವರೆಗೆ ಅಂಡಮಾನ್-ನಿಕೋಬಾರ್ ನ ದಕ್ಷಿಣ ವಲಯ ಸಾಂಸ್ಕ್ರತಿಕ ಕೇಂದ್ರದಿಂದ ನಿಕೋಬಾರಿ ನೃತ್ಯ.

ಅರಮನೆ ಆವರಣ:

      ಅರಮನೆ ಆವರಣದಲ್ಲಿ ಸಂಜೆ 5 ರಿಂದ 6-45 ರವರೆಗೆ ಶೃತಿ ವಿದ್ಯಾ ಸಂಗೀತ ಪಾಠ ಶಾಲೆಯ ವಿದ್ವಾನ್ ಎ.ವಿ.ದತ್ತಾತ್ರೇಯ ಅವರಿಂದ ಶಾಸ್ತ್ರೀಯ ಮ್ಯಾಂಡೋಲಿನ್ ವಾದನ ನಡೆಯಲಿದೆ.

      ಸಂಜೆ 6-45 ರಿಂದ 7-30 ರವರೆಗೆ ಸಮೀರ್ ರಾವ್ ಮತ್ತು ವಂಶಿಧರ್ ಅವರಿಂದ ಕೊಳಲು ವಾದನ ಜುಗಲ್ ಬಂದಿ, ಸಂಜೆ 7 -30 ರಿಂದ 8-30 ರವರೆಗೆ ಬೆಂಗಳೂರಿನ ನಾಗಚಂದ್ರಿಕ ಭಟ್, ರವಿಮೂರುರು ತಂಡದವರಿಂದ ಗೀತಗಾಯನ ಜುಗಲ್ ಬಂದಿ, ರಾತ್ರಿ 8-30 ರಿಂದ 10 ರವರೆಗೆ ಪ್ರಸಿದ್ಧ ನೃತ್ಯ ಕಲಾವಿದರಾದ ಲಕ್ಷ್ಮಿಗೋಪಾಲಸ್ವಾಮಿ ಅವರಿಂದ ನೃತ್ಯ ವೈಭವ ನಡೆಯಲಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

 

 

LEAVE A REPLY

Please enter your comment!
Please enter your name here