ಬನ್ಸಾಲಿಯವರ ಚಿತ್ರಗಳಲ್ಲಿ ನಮ್ಮಂತಹವರಿಗೆ ಪಾತ್ರ ಇರುವುದಿಲ್ಲ : ಮನೋಜ್‌ ಬಾಜ್‌ ಪಾಯಿ

ಮುಂಬೈ :

   ತಮ್ಮ ವಿಶೇಷ ನಟನಾ ಕೌಶಲ್ಯ ಹಾಗೂ ಪ್ರಬುದ್ಧ ನಟನೆಯಿಂದಲೆ ಹೆಸರು ಮಾಡಿದ ಕೆಲ ಬೆರಳೆಣಿಕೆ ನಟರಲ್ಲಿ ಒಬ್ಬರಾದ ಮನೋಜ್ ಬಾಜ್​ಪಾಯಿ ಅವರ ನಟನೆಯ 100ನೇ ಸಿನಿಮಾ ‘ಭಯ್ಯಾ ಜಿ’ ಇತ್ತೀಚೆಗೆ ರಿಲೀಸ್ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.

   ಅವರು ತಮ್ಮ ಕರಿಯರ್​ನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕೆಲವು ಸಿನಿಮಾಗಳು ಫ್ಲಾಪ್ ಎನಿಸಿಕೊಂಡರೆ ಕೆಲವು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. ಅವರಿಗೆ ಕೆಲವು ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ, ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವಾಗಲೇ ಅವರಿಗೆಲ್ಲ ವಯಸ್ಸಾಗಿತ್ತು. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡಬೇಕು ಎಂಬುದು ಅವರ ಆಸೆ ಆಗಿತ್ತು. ಆದರೆ, ಆ ಆಸೆ ಈಡೇರಲೇ ಇಲ್ಲ.

   ರೇಡಿಯೋ ನಶಾ ಜೊತೆ ಮನೋಜ್ ಮಾತನಾಡಿದ್ದಾರೆ. ‘ನಾನು ಗುಲ್ಜರ್ ಅವರ ಜೊತೆ ಕೆಲಸ ಮಾಡೋಕೆ ಸಾಧ್ಯವಾಗಿಲ್ಲ. ನನಗೆ ಗೋವಿಂದ್ ನಿಹಲಾನಿ ಜೊತೆ ಕೆಲಸ ಮಾಡಬೇಕಿತ್ತು. ನಾನು ಚಿತ್ರರಂಗಕ್ಕೆ ಕಾಲಿಡುವಾಗ ಇವರೆಲ್ಲ ತಮ್ಮ ವೃತ್ತಿ ಜೀವನದ ಕೊನೆಯ ಹಂತದಲ್ಲಿ ಇದ್ದರು. ನನಗೆ ಶ್ಯಾಮ್ ಬೆಂಗಾಲಿ ಜೊತೆ ಕೆಲಸ ಮಾಡೋ ಅವಕಾಶ ಸಿಕ್ಕಿತು ಎಂದಿದ್ದಾರೆ’ ಮನೋಜ್.

   ‘ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆ ಕೆಲಸ ಮಾಡಬೇಕು. ಆದರೆ, ಅವರು ಮಾಡುವ ಸಿನಿಮಾಗಳಲ್ಲಿ ನನ್ನಂಥ ಕಲಾವಿದರ ಅಗತ್ಯವೇ ಇರುವುದಿಲ್ಲ. ನನ್ನಲ್ಲಿ ಯಾವ ಸುಂದರ ಅಂಶವಿದೆ ಎಂದು ಅವರು ತೋರಿಸುತ್ತಾರೆ? ಅವರು ನಿಜಕ್ಕೂ ಭಿನ್ನ’ ಎಂದಿದ್ದಾರೆ ಮನೋಜ್. ಅವರು ಇದನ್ನು ಹಾಸ್ಯದ ರೀತಿಯಲ್ಲಿ ಹೇಳಿದ್ದಾರೆ. ಮುಂದೊಂದು ದಿನ ಮನೋಜ್​ ಅವರಿಗೆ ಬನ್ಸಾಲಿ ಜೊತೆ ಕೆಲಸ ಮಾಡೋ ಅವಕಾಶ ಸಿಗಲಿ ಎಂದು ಫ್ಯಾನ್ಸ್ ಕೋರಿದ್ದಾರೆ.

Recent Articles

spot_img

Related Stories

Share via
Copy link
Powered by Social Snap