ಜೆಡಿಎಸ್‌ ನಲ್ಲಿ ಮುಗಿಯದ ಟಿಕೆಟ್‌ ಹಂಚಿಕೆ ಬಿಕ್ಕಟ್ಟು…!

ಹಾಸನ: 

    ವಿಧಾನಸಬೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗ ಬೇರೆ ಪಕ್ಷಗಳು ಬೇರೆ ಬೇರೆ ವಿಧಾನ ಅನುಸರಿಸಿ ಅಭ್ಯರ್ಥಿ ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಲು ಸಿದ್ದತೆ ನಡೆಸಿದರೆ ಜೆಡಿಎಸ್‌ ಮಾತ್ರ ಇನ್ನೂ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿದೆ ಒಂದು ವೇಳೆ ಅಭ್ಯರ್ಥಿ ಸಿಕ್ಕರೂ ಸಹ ಒಂದು ಕ್ಷೇತ್ರಕ್ಕೆ ಸುಮಾರು 3-4 ಟಿಕೆಟ್‌ ಆಕಾಂಕ್ಷಿಗಳಿರುತ್ತಾರೆ ಇದರಿಂದ ಗೊಂದಲ ಹೆಚ್ಚಾಗಿದೆ ಎನ್ನುತ್ತಾರೆ ರಾಜಕೈ ವಿಶ್ಲೇಷಕರು 

    ಟಿಕೆಟ ಹಂಚಿಕೆಯಲ್ಲಿ ಎಲ್ಲಾ ಸಾಧ್ಯತೆ-ಭಾದ್ಯತೆಗಳನ್ನು ಲೆಕ್ಕಾಚಾರ ಮಾಡುತ್ತಿರುವ ಜೆಡಿಎಸ್ ಭವಾನಿ ರೇವಣ್ಣ ಅವರನ್ನು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದಿಂದ ಕಣಕ್ಕಿಳಿಸಲು ಯೋಜಿಸುತ್ತಿದೆ ಎಂಬುದಾಗಿ ತಿಳಿದು ಬಂದಿದೆ.ರೇವಣ್ಣ ಅವರ ಪತ್ನಿ ಭವಾನಿ ಒತ್ತಡಕ್ಕೆ ಮಣಿಯದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ  ಜೆಡಿಎಸ್ ಮುಖಂಡ ಪ್ರಕಾಶ್ ಪುತ್ರ ಸ್ವರೂಪ್ ಅವರಿಗೆ ಟಿಕೆಟ್ ನೀಡಲು ಒಲವು ತೋರಿದ್ದಾರೆ ಎನ್ನಲಾಗಿದೆ.

    ಮಂಡ್ಯ ಜಿಲ್ಲೆಯಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಕುಟುಂಬದವರೆಲ್ಲರೂ ಭಾಗವಹಿಸಿ ಒಗ್ಗಟ್ಟು ತೋರಿದ್ದಾರೆ. ಈಗಾಗಲೇ ರೇವಣ್ಣ ಮತ್ತು ಅವರ ಇಬ್ಬರು ಪುತ್ರರು ರಾಜಕೀಯದಲ್ಲಿರುವುದರಿಂದ ಕುಟುಂಬ ರಾಜಕೀಯದ ಆರೋಪಗಳನ್ನು ಮತ್ತೆ ತೆಗೆದುಕೊಳ್ಳಲು ಎಚ್.ಡಿ ಕೆ ಸಿದ್ದರಿಲ್ಲ,  ಹೀಗಾಗಿ ಹಾಸನ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ.

   ಮೊದಲ ಹಂತದಲ್ಲಿ ಜೆಡಿಎಸ್ 93 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ, ಇದರಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ಘೋಷಿಸಿದೆ. ನಾನು ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ಸ್ವತಃ ಭವಾನಿ ರೇವಣ್ಣ ಘೋಷಿಸಿದಾಗ ಕುಟುಂಬ ಇಕ್ಕಟ್ಟಿಗೆ ಸಿಲುಕಿತ್ತು. ಇದು ವಿರೋಧ ಪಕ್ಷಗಳ ಚರ್ಚೆಗೆ ಆಹಾರವಾಗಿತ್ತು. ಇದರಿಂದ ದಳಪತಿಗಳ ಮನೆಯಲ್ಲಿ ಹೊತ್ತಿದ್ದ ರಾಜಕೀಯ ಬೆಂಕಿ ತಣ್ಣಗಾಗಿಸಲು ರೇವಣ್ಣ ಬಲವಂತವಾಗಿ ಮಧ್ಯ ಪ್ರವೇಶಿಸಿದ್ದರು.

   ಹಾಸನ ಜೆಡಿಎಸ್ ಅಭ್ಯರ್ಥಿ ಸಂಬಂಧ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಎಚ್ .ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ರೇವಣ್ಣ ಹೇಳಿದ್ದರು.

   ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಸ್ವರೂಪ್ ಪ್ರಕಾಶ್ ಸಮರ್ಥ ಅಭ್ಯರ್ಥಿಯಲ್ಲ ಎಂದು ತಿಳಿದಿರುವ ಕೆಲವು ಜೆಡಿಎಸ್ ನಾಯಕರು ಪ್ರೀತಂ ವಿರುದ್ಧ ಹಾಸನದಿಂದ ರೇವಣ್ಣ ಅವರನ್ನೇ ಕಣಕ್ಕಿಳಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಮತ್ತೊಂದೆಡೆ ಹಾಸನ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಭವಾನಿ,  ಚನ್ನರಾಯಪಟ್ಟಣ ಕ್ಷೇತ್ರಕ್ಕೆ ಸಮೀಪವಾಗಿರುವ ಕೆ.ಆರ್ ಪೇಟೆಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಜೆಡಿಎಸ್ ಸರ್ಕಲ್ ನಲ್ಲಿ ಮಾತುಗಳು ಕೇಳಿ ಬರುತ್ತಿವೆ.

    ಕೆ.ಆರ್ ಪೇಟೆಯಿಂದ ದೇವೇಗೌಡರ ಪುತ್ರಿ ಅನುಸೂಯ ಅಥವಾ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸುವಂತೆ ಗೌಡರ ಕುಟುಂಬದ ಕೆಲ ನಿಷ್ಠಾವಂತ ನಾಯಕರು ಒತ್ತಾಯ ಮಾಡುತ್ತಿದ್ದಾರೆ, ಇದರಿಂದ ಸಚಿವ ಕೆ.ಸಿ ನಾರಾಯಣಗೌಡ ಅವರನ್ನು ಸೋಲಿಸಬಹುದು ಎಂಬ ಲೆಕ್ಕಾಚಾರವಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap